ಸೀಗೆಕಾಯಿ ಉತ್ಪನ್ನ ತಯಾರಿಸಲು ಮುಂದೆ ಬನ್ನಿ

| Published : Nov 04 2025, 01:02 AM IST

ಸಾರಾಂಶ

ಸೀಗೆಪುಡಿ ಉತ್ಪನ್ನಗಳನ್ನು ತಯಾರಿಸುವ ಮಹಿಳೆಯರು ಯಾರೂ ಇಲ್ಲದೆ ಇರುವುದು ವಿಷಾದನೀಯ

ಕನ್ನಡಪ್ರಭ ವಾರ್ತೆ ಮೈಸೂರುರೈತ ಮಹಿಳೆಯರು ಸೀಗೆಕಾಯಿ ಉತ್ಪನ್ನಗಳನ್ನು ತಯಾರಿಸಿ, ಪ್ಯಾಕಿಂಗ್ ಮಾಡಿ, ಮಾರಾಟ ಮಾಡಲು ಮುಂದೆ ಬರಬೇಕು ಎಂದು ಜಾಗೃತ ಕೋಶದ ಉಪ ಕೃಷಿ ನಿರ್ದೇಶಕಿ ಎಚ್.ಎನ್. ಮಮತಾ ಕರೆ ನೀಡಿದರು.ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಎನ್.ಆರ್.ಎಲ್.ಎಂ. ಸಹಯೋಗದಲ್ಲಿ ರಾಜ್ಯ ವಲಯ ಯೋಜನೆಯಡಿ ಪಿರಿಯಾಪಟ್ಟಣ ತಾಲೂಕಿನ ರೈತ ಮಹಿಳೆಯರಿಗಾಗಿ ಸೀಗೆಕಾಯಿ ಉತ್ಪನ್ನಗಳು, ಅರಣ್ಯ ಉತ್ಪನ್ನಗಳು ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನೆ ಕುರಿತು ಏರ್ಪಡಿಸಿದ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೀಗೆಪುಡಿ ಉತ್ಪನ್ನಗಳನ್ನು ತಯಾರಿಸುವ ಮಹಿಳೆಯರು ಯಾರೂ ಇಲ್ಲದೆ ಇರುವುದು ವಿಷಾದನೀಯ ಎಂದರು.ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ ಮಾತನಾಡಿ, ಸೀಗೆಕಾಯಿ ಉತ್ಪನ್ನಗಳನ್ನು ಉಪಯೋಗಿಸುವುದರಿಂದ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.ಚಾಮರಾಜನಗರ ಜಿಲ್ಲೆಯ ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಸಿರಿಧಾನ್ಯಗಳನ್ನು ತಿನ್ನುವುದರಿಂದ ಆರೋಗ್ಯ ವೃದ್ಧಿಸುವುದಲ್ಲದೆ ನಮಗೆ ಬೇಕಾದ ತರಕಾರಿ, ಹಣ್ಣು ಮತ್ತು ಬೆಳೆಗಳನ್ನು ನಮ್ಮ ಜಮೀನಿನಲ್ಲಿ ಬೆಳೆದು ತಿನ್ನುವುದರಿಂದ ರೈತರು ಸ್ವಾವಲಂಬಿಗಳಾಗಬಹುದು ಎಂದರು.ಡಾ. ಅಭಿಜಿತ್ ಅವರು, ಸೀಗೆಪುಡಿ, ಅಂಟವಾಳ ಕಾಯಿ ಮತ್ತು ಇತರೆ ಸೊಪ್ಪು ಮತ್ತು ಗಿಡಮರಗಳ ತೊಗಟೆ ಎಲೆಗಳು ಬೇರುಗಳು ಮತ್ತು ಹುತ್ತದ ಮಣ್ಣಿನಿಂದ ಶಾಂಪು, ಸೋಪು ಮತ್ತು ಹಲ್ಲು ಪುಡಿ ತಯಾರಿಕೆ ಬಗ್ಗೆ ಮಾಹಿತಿ ನೀಡಿದರು.ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕಿ ಡಾ. ಭಾಗಿರಥಿ ಅವರು, ಹಣ್ಣು ಮತ್ತು ತರಕಾರಿಗಳ ಮೌಲ್ಯವರ್ಧನೆ ಜಾಮ್, ಕೆಚಪ್ ಮತ್ತು ಸಲಾಡ್ ಗಳ ತಯಾರಿಕೆ, ಉಪ್ಪಿನಕಾಯಿ ತಯಾರಿಕೆ ಮತ್ತು ಪ್ರಿಸರ್ವೇಶನ್ (ಕೆಡದಂತೆ ಕಾಪಾಡುವುದು) ಬಗ್ಗೆ ಮಾಹಿತಿ ನೀಡಿದರು.ಮಂಡ್ಯ ವಿಸಿ ಫಾರಂನ ಸಹಾಯಕ ಪ್ರಾಧ್ಯಾಪಕ ಡಾ.ಜೆ. ಮಹದೇವು ಅವರು, ಕೈತೋಟದಲ್ಲಿ ಜಮೀನುಗಳಲ್ಲಿ ಔಷಧಿ ಸಸ್ಯಗಳನ್ನು ಬೆಳೆಯುವುದು ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು.ಸಾವಯವ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಗಣೇಶ್ ಪ್ರಸಾದ್ ಅವರು, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಬಯೋ ಡೀಸಲ್ ಜೈವಿಕ ಇಂಧನ ಸಸ್ಯಗಳು ಮತ್ತು ಇಂಧನ ತಯಾರಿಕೆ ಬಳಕೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.ಹನುಮನಹಳ್ಳಿ ಪ್ರಗತಿಪರ ರೈತ ಮಹಿಳೆ ಇಂದ್ರಮ್ಮ ಅವರು, ಗೃಹಪಯೋಗಿ ಸಾಂಬಾರ್ ಪದಾರ್ಥಗಳ ತಯಾರಿಕೆ ಮತ್ತು ಮಾರಾಟದ ಬಗ್ಗೆ ಮಾಹಿತಿ ನೀಡಿದರು.ಕುಶಾಲನಗರ ತಾಲೂಕು ಬಸವನಹಳ್ಳಿ ಗ್ರಾಮದ ಯಶವಂತ್ ಅವರ ಜಮೀನಿಗೆ ಕ್ಷೇತ್ರ ಭೇಟಿ ನೀಡಿ, ಸೀಗೆಕಾಯಿ ಮತ್ತು ಇತರೆ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟ ಕುರಿತು ವಿವರಿಸಿದರು. ತರಬೇತಿ ಸಂಯೋಜಕಿ ಗೌರವ್ವ ಅಗಸೀಬಾಗಿಲ ಇದ್ದರು.