ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ನೇತೃತ್ವದಲ್ಲಿ ಜ.11 ರಂದು ಪಟ್ಟಣದ ವಿಬಿಸಿ ಹೈಸ್ಕೂಲ್‌ ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್ ಹಿಂದೂ ಸಮ್ಮೇಳನ ಹಾಗೂ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಸಮಿತಿಯ ಮುಖ್ಯಸ್ಥರು ಗುರುವಾರ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಆಹ್ವಾನಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಈ ವೇಳೆ ಹಿಂದೂ ಸಮ್ಮೇಳನ ಸಂಚಾಲನಾ ಸಮೀತಿ ಮುಖ್ಯಸ್ಥ ಪ್ರಭು ಕಡಿ ಹಾಗೂ ಡಾ.ವಿರೇಶ ಇಟಗಿ ಮಾತನಾಡಿ, ಇದೊಂದು ಭಾರತೀಯ ಸಂಸ್ಕೃತಿ, ಧರ್ಮ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಹಿಂದೂ ಸಮ್ಮೇಳ ನಡೆಸಲಾಗುತ್ತಿದೆ. ತಾಲೂಕಿನ ಎಲ್ಲ ಹಿಂದೂ ಸಮಾಜಗಳ ಮುಖಂಡರನ್ನು ಬಾಂಧವರವನ್ನು ವಿಶೇಷವಾಗಿ ಆಮಂತ್ರಿಸಲಾಗಿದೆ. ಹಿಂಧೂ ಸರ್ವ ಸಮಾಜಗಳನ್ನು ಒಗ್ಗೂಡಿಸಿ ಭಾರತವನ್ನು ಕಟ್ಟುವ ಉದ್ದೇಶಹೊಂದಿದೆ. ಜತೆಗೆ ಹಿಂದೂಗಳು ಜಾತಿ, ಜಾತಿಗಳ ನಡುವೆ ನಾವು ವಿಘಟಿತರಾಗದೇ ಎಲ್ಲರೂ ಒಂದಾಗಬೇಕಿದೆ. ಇದರಿಂದ ಹಿಂದೂ ಸಂಸ್ಕೃತಿ ಉಳಿಸಬೇಕಿದೆ. ಈ ದಿಶೆಯಲ್ಲಿ ಬೃಹತ್ ಹಿಂದೂ ಸಮ್ಮೇಳನ ಹಾಗೂ ಬೃಹತ್ ಶೋಭಾಯಾತ್ರೆಗಳನ್ನು ಆಯೋಜಿಸಿ ಹಿಂದೂಗಳನ್ನು ಒಟ್ಟುಗೂಡಿಸುವ, ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಈ ವೇಳೆ ನಾಡಿನ ವಿವಿಧ ಮಠಾಧೀಶರು, ಹಲವಾರು ಚಿಂತಕರು, ಸಾಹಿತಿಗಳು, ರಾಜಕೀಯ ಮುಖಂಡರು, ವಿವಿಧ ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಹಿಂದೂ ಸಮಾಜಗಳ ಸಂಘ-ಸಂಸ್ಥೆಗಳ ಮುಖಂಡು ಭಾಗವಹಿಸಲಿದ್ದಾರೆ ಎಂದರು.ಈ ವೇಳೆ ಮುಖಂಡರಾದ ಪರುಶುರಾಮ ಪವಾರ, ವಿಕ್ರಮ ಓಸ್ವಾಲ್, ಶ್ರೀಶೈಲ ದೊಡಮನಿ, ಮಾಣಿಕ ದಂಡಾವತಿ, ಮುರುಳಿಕೃಷ್ಣ ಬುಡ್ಡೋಡಗಿ, ಪ್ರಭು ನಂದೇಪ್ಪನವರ, ಶ್ರೀಕಾಂತ ಹಿರೇಮಠ, ಸುಭಾಶ ಕುಲಕರ್ಣಿ, ನಿಂಗಪ್ಪ ಚೆಟ್ಟೇರ, ಸಂಗಮೇಶ ನಾವದಗಿ, ವಿರೇಶ ಢವಳಗಿ ಸೇರಿದಂತೆ ಹಲವರು ಇದ್ದರು.