ಗಂಗಾವಳಿ ಮಂಜುಗುಣಿ ಸಂಪರ್ಕ ಸೇತುವೆ ಶೀಘ್ರ ಪೂರ್ಣಗೊಳಿಸಲು ಆಗ್ರಹ

| Published : Dec 19 2024, 12:30 AM IST

ಗಂಗಾವಳಿ ಮಂಜುಗುಣಿ ಸಂಪರ್ಕ ಸೇತುವೆ ಶೀಘ್ರ ಪೂರ್ಣಗೊಳಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಏಳು ವರ್ಷದಿಂದ ಕುಂಟುತ್ತಾ ಸಾಗಿದ ಸೇತುವೆ ಕೆಲಸದಿಂದ ತೊಂದರೆಯಾಗಿದೆ. ಮೂರು ತಿಂಗಳಲ್ಲಿ ಪೂಣಗೊಳಿಸುತ್ತೇವೆ ಎಂದು ಮಾರ್ಗವನ್ನು ಸಂಪೂರ್ಣ ಬಂದ್ ಮಾಡುವುದು ಬೇಡ ಎಂದು ಸಮಸ್ಯೆಯ ಸರಮಾಲೆ ವಿವರಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.

ಗೋಕರ್ಣ: ಗಂಗಾವಳಿ- ಮಂಜುಗುಣಿ ನಡುವಿನ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗುತ್ತಿರುವ ಸೇತುವೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಕೂಡು ರಸ್ತೆ ಪೂರ್ಣಗೊಳಿಸುವ ವೇಳೆ ಪಾದಚಾರಿಗಳ ಓಡಾಟಕ್ಕೆ ಅವಕಾಶ ನೀಡಬೇಕೆಂದು ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.ಮಂಗಳವಾರ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗುತ್ತಿಗೆ ಕಂಪನಿ ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಜನರ ವಾಗ್ವಾದ ನಡೆಯಿತು.

ಕಳೆದ ಏಳು ವರ್ಷದಿಂದ ಕುಂಟುತ್ತಾ ಸಾಗಿದ ಸೇತುವೆ ಕೆಲಸದಿಂದ ತೊಂದರೆಯಾಗಿದೆ. ಮೂರು ತಿಂಗಳಲ್ಲಿ ಪೂಣಗೊಳಿಸುತ್ತೇವೆ ಎಂದು ಮಾರ್ಗವನ್ನು ಸಂಪೂರ್ಣ ಬಂದ್ ಮಾಡುವುದು ಬೇಡ ಎಂದು ಸಮಸ್ಯೆಯ ಸರಮಾಲೆ ವಿವರಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.ಮೊದಲಿನಂತೆ ಬೋಟ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದಾಗ, ಇದು ಖಂಡಿತಾ ಬೇಡ ಎಂದ ಗ್ರಾಮಸ್ಥರು, ಸೇತುವೆ ಒಂದು ಬದಿ ಜನರು ತೆರಳಲು ಏಣಿ ಹಾಕಿ ಕೊಡುವಂತೆ ಕೇಳಿಕೊಂಡರು. ಗಂಗಾವಳಿ ಭಾಗದಲ್ಲಿನ ಕೂಡು ರಸ್ತೆ ನಿರ್ಮಾಣಕ್ಕೆ ಖಾಸಗಿ ಜಾಗ ಇರುವುದರಿಂದ ತೊಂದರೆಯಾಗುವುದನ್ನು ಪ್ರಸ್ತಾಪಿಸಿದ ಅಧಿಕಾರಿಗಳು, ಶಾಂತಿಕಾ ಪರಮೇಶ್ವರಿ ಮಂದಿರದ ಕೆಳಭಾಗದಿಂದ ರಸ್ತೆ ಹಾದು ಹೋಗುತ್ತದೆ ಎಂದು ತಿಳಿಸಿದಾಗ, ದೇವಾಲಯದ ವಾರ್ಷಿಕ ಕಾರ್ಯಕ್ರಮ ನಡೆಯುವ ಜಾಗವೂ ಇದ್ದು, ರಸ್ತೆ ಯಾವ ಜಾಗದಲ್ಲಿ ಹಾದು ಹೋಗುತ್ತದೆ ಎಂಬುದನ್ನು ನಿಖರವಾಗಿ ಜನರಿಗೆ ತೋರಿಸಬೇಕು. ಒಂದು ವೇಳೆ ದೇವಾಲಯಕ್ಕೆ ತೊಂದರೆ ಬರುವುದಿದ್ದರೆ ಬೇಡ ಎನ್ನುವ ಅಭಿಪ್ರಾಯ ಜನರಿಂದ ಕೇಳಿಬಂತು. ಅಲ್ಲದೇ ರಸ್ತೆಯ ಕೊನೆಯಲ್ಲಿ ನೀರು ಸರಾಗವಾಗಿ ಹೋಗುವಂತೆ ಚರಂಡಿ ನಿರ್ಮಿಸಬೇಕು ಎಂದರು.ಈ ವಾದ ವಿವಾದ ಜೋರಾಗುತ್ತಿದ್ದಂತೆ ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದ ಕಂಪನಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಸಭೆಯಿಂದ ಹೊರನಡೆದರು.ಸಾವಿರಾರು ಎಕರೆ ಕೃಷಿ ಭೂಮಿಗೆ ಉಪ್ಪು ನೀರನ್ನು ತಪ್ಪಿಸಲು ಬಹುಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ತಡೆಗೋಡೆ ಕಾಮಗಾರಿಯಲ್ಲಿ ನೀರು ನುಗ್ಗದಂತೆ ಕ್ರಸ್ಟ್‌ಗೇಟ್‌ಗೆ ಹಲಗೆ ಅಳವಡಿಸದೆ ಬಿಟ್ಟಿರುವುದರಿಂದ ಫಸಲಿಗೆ ಬಂದ ಭತ್ತದ ಗದ್ದೆಗೆ ಉಪ್ಪು ನೀರು ಬಂದು ಬೆಳೆ ಹಾನಿಯಾಗಿರುವ ಬಗ್ಗೆ ಈ ಭಾಗದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅರೆಬರೆ ಕಾಮಗಾರಿ ಮಾಡಿಟ್ಟಿರುವ ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿದ್ದು, ಈ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಕರೆಯಿಸಿ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಗೌಡ, ಉಪಾಧ್ಯಕ್ಷೆ ವಿಜಯಾ ನಾಯ್ಕ, ಸದಸ್ಯರು, ನೋಡೆಲ್ ಅಧಿಕಾರಿ ವಿನಾಯಕ ಕೃಷ್ಣ ವೈದ್ಯ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನಾಯಕ ವಿ. ನಾಯ್ಕ, ಕಾರ್ಯದರ್ಶಿ ಶ್ರೀಧರ ಭೋಮಕರ ಮತ್ತು ಸಿಬ್ಬಂದಿ ನಿರ್ವಹಿಸಿದರು.Nadumaskeri villagers urged to complete Gangavali-Manjuguni connecting bridge soon

ಗಂಗಾವಳಿ- ಮಂಜುಗುಣಿ ಸಂಪರ್ಕ ಸೇತುವೆ ಶೀಘ್ರ ಪೂರ್ಣಗೊಳಿಸಲು ನಾಡುಮಾಸ್ಕೇರಿ ಗ್ರಾಮಸ್ಥರ ಆಗ್ರಹಗೋಕರ್ಣ ಸುದ್ದಿ, ನಾಡುಮಾಸ್ಕೇರಿ, ಗಂಗಾವಳಿ ಸೇತುವೆ, Gokarna News, Nadumaskery, Gangavali Bridge

ಕಳೆದ ಏಳು ವರ್ಷದಿಂದ ಕುಂಟುತ್ತಾ ಸಾಗಿದ ಸೇತುವೆ ಕೆಲಸದಿಂದ ತೊಂದರೆಯಾಗಿದೆ. ಮೂರು ತಿಂಗಳಲ್ಲಿ ಪೂಣಗೊಳಿಸುತ್ತೇವೆ ಎಂದು ಮಾರ್ಗವನ್ನು ಸಂಪೂರ್ಣ ಬಂದ್ ಮಾಡುವುದು ಬೇಡ ಎಂದು ಸಮಸ್ಯೆಯ ಸರಮಾಲೆ ವಿವರಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.