ಸೂಚನಾ ಫಲಕ ಎಡವಟ್ಟು: ವೈರಲ್ ಆದ ಬೆನ್ನಲ್ಲೇ ಸರಿಯಾಯ್ತು!

| Published : Jul 11 2024, 01:38 AM IST

ಸಾರಾಂಶ

ಇಂಗ್ಲಿಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂತರಿಸುವ ವೇಳೆ ನಡೆದಿರುವ ಹಲವು ಯಡವಟ್ಟುಗಳ ಸೂಚನಾ ಫಲಕ, ಹೆಸರು, ವಿಳಾಸಗಳು ನಗೆಪಾಟಲಿಗೀಡಾಗಿದೆ. ಈ ಪೈಕಿ ಕೊಡಗಿನಲ್ಲಿ ಅಳವಡಿಸಿದ್ದ ರಸ್ತೆ ಸೂಚನಾ ಫಲಕ ಭಾರಿ ವೈರಲ್ ಆಗಿತ್ತು. ಮಡಿಕೇರಿ - ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಬಳಿ ಈ ಸೂಚನಾ ಫಲಕ ಅಳವಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಡಿಕೇರಿ

‘ಹೆದ್ದಾರಿಯಲ್ಲಿ ತುರ್ತು ಅಪಘಾತ ಮಾಡಿ’ (ಅರ್ಜೆಂಟ್‌ ಮೇಕ್‌ ಏನ್‌ ಆಕ್ಸಿಡೆಂಟ್‌) ಎಂದು ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ಹಾಸ್ಯಾಸ್ಪದ ಸೂಚನಾ ಫಲಕದ ಫೋಟೋ ವೈರಲ್‌ ಆದ ಬೆನ್ನಲ್ಲೇ ಬದಲಾದ ಬೆಳವಣಿಗೆ ಸಂಪಾಜೆ ಬಳಿ ನಡೆದಿದೆ.

ಇಂಗ್ಲಿಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂತರಿಸುವ ವೇಳೆ ನಡೆದಿರುವ ಹಲವು ಯಡವಟ್ಟುಗಳ ಸೂಚನಾ ಫಲಕ, ಹೆಸರು, ವಿಳಾಸಗಳು ನಗೆಪಾಟಲಿಗೀಡಾಗಿದೆ. ಈ ಪೈಕಿ ಕೊಡಗಿನಲ್ಲಿ ಅಳವಡಿಸಿದ್ದ ರಸ್ತೆ ಸೂಚನಾ ಫಲಕ ಭಾರಿ ವೈರಲ್ ಆಗಿತ್ತು. ಮಡಿಕೇರಿ - ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಬಳಿ ಈ ಸೂಚನಾ ಫಲಕ ಅಳವಡಿಸಲಾಗಿತ್ತು.

ಸೂಚನಾ ಫಲಕದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಫೋಟೋ ಭಾರಿ ವೈರಲ್ ಆಗಿತ್ತು. ಹಲವರು ಈ ಫೋಟೋಗೆ ಕಮೆಂಟ್ ಮಾಡಿದ್ದರು. ಇದಕ್ಕಿಂತ ಗೂಗಲ್ ಅನುವಾದ ಮಾಡಬಹುದಿತ್ತು ಎಂದು ಸೂಚಿಸಿದ್ದರು. ಈ ರೀತಿ ಭಾಷಾಂತರ ಮಾಡಿ ಆಭಾಸ ಮಾಡಿ ನಗೆಪಾಟಲೀಗಾಡುವುದಕ್ಕಿಂತ ಕನ್ನಡದಲ್ಲೇ ಬರೆದರೆ ಸಾಕು ಎಂದು ಹಲವರು ಸಲಹೆ ನೀಡಿದ್ದರು.

ಈ ಫೋಟೋ ಭಾರಿ ವೈರಲ್ ಆಗುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಳಿಕ ಈ ಬೋರ್ಡ್ ಬದಲಾಯಿಸಿದ್ದಾರೆ. ಇದೀಗ ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್ ಎಂದು ಬರೆದಿರುವ ಬೋರ್ಡ್ ಹಾಕಲಾಗಿದೆ. ಅಧಿಕಾರಿಗಳ ಯಡವಟ್ಟಿನಿಂದ ಜಿಲ್ಲೆಯ ಜನ ತೀವ್ರ ಮುಜುಗರ ಅನುಭವಿಸುವಂತಾಗಿತ್ತು. ಕೊನೆಗೂ ಎಚ್ಚೆತ್ತ ಇಲಾಖೆ ಸರಿಪಡಿಸಿದೆ.