ಸಾರಾಂಶ
- ಸರ್ಕಾರಿ, ಶಾಲಾ ಹಾಗೂ ಅಂಬುಲೆನ್ಸ್ ವಾಹನಗಳಿಗೆ ವಿನಾಯ್ತಿ । ಚಿಕ್ಕಮಗಳೂರಿನಲ್ಲಿ ಮೊದಲ ಪ್ರಯತ್ನ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ಎಂ.ಜಿ. ರಸ್ತೆಯಲ್ಲಿ ನಿಲ್ಲುವ ಕಾರ್‌ಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸಬೇಕೆಂಬ ನಗರಸಭೆಯ ಹಲವು ವರ್ಷಗಳ ಪ್ಲಾನ್ ಇದೀಗ ಜಾರಿಗೆ ಬರುತ್ತಿದೆ.
ಇದರಿಂದ ಎಂ.ಜಿ. ರಸ್ತೆಯಲ್ಲಿರುವ ವರ್ತಕರಿಗೆ ಹಾಗೂ ಗ್ರಾಹಕರಿಗೆ ಅನುಕೂಲವೋ ಅಥವಾ ಅನಾನುಕೂಲವೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿರುವ ಜತೆಗೆ ಇದೇ ರಸ್ತೆಯಲ್ಲಿ ಪ್ರತಿದಿನ ತಮ್ಮ ಕಾರು ನಿಲ್ಲಿಸಿ ಕಡೂರು, ಬೀರೂರು, ಶಿವಮೊಗ್ಗಕ್ಕೆ ತೆರಳುತ್ತಿದ್ದ ಮಾಲೀಕರಿಗೆ ತಲೆ ಬಿಸಿಯಾಗಿದೆ.ಚಿಕ್ಕಮಗಳೂರು ನಗರಸಭೆ ಎಂ.ಜಿ. ರಸ್ತೆಯಲ್ಲಿ ನಿಲುಗಡೆಯಾಗಲಿರುವ ಕಾರ್‌ಗಳಿಂದ ಶುಲ್ಕ ವಸೂಲಿ ಮಾಡಲು ಇ- ಹರಾಜು ಕಂ ಬಹಿರಂಗ ಹರಾಜು ಪ್ರಕಟಣೆ ಹೊರಡಿಸಿದೆ. ಜ. 19 ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜು ನಡೆಯಲಿದೆ.
ದಿನದ 24 ಗಂಟೆಗಳನ್ನು ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಅಂದರೆ, ಬೆಳಿಗ್ಗೆ 8 ರಿಂದ ರಾತ್ರಿ 9 ರವರೆಗೆ, ರಾತ್ರಿ 9 ರಿಂದ ಮರುದಿನ ಬೆಳಿಗ್ಗೆ 8 ರವರೆಗೆ ಶುಲ್ಕ ವಿಧಿಸಲಾಗುವುದು. ಬೆಳಿಗ್ಗೆ ಮೊದಲ ಒಂದು ಗಂಟೆಗೆ 10 ರುಪಾಯಿ, ನಂತರ ಪ್ರತಿ ಎರಡು ಗಂಟೆಗಳಿಗೆ 5 ರು., ದಿನದ 24 ಗಂಟೆಗೆ 40 ರು. ಸಂದಾಯ ಮಾಡಬೇಕು. ರಾತ್ರಿ ಮೊದಲ 2 ಗಂಟೆಗೆ 5 ರು., ನಂತರದ ಪ್ರತಿ ಎರಡು ಗಂಟೆಗೆ 5 ರು., 24 ಗಂಟೆ ಅವಧಿಗೆ 30 ರು., ಮಾಸಿಕ 1,500 ರುಪಾಯಿ ಪಾವತಿ ಮಾಡಬೇಕಾಗಿದೆ.ಪ್ರಮುಖವಾಗಿ ಸರ್ಕಾರಿ, ಶಾಲಾ ಕಾಲೇಜು ಹಾಗೂ ಅಂಬುಲೆನ್ಸ್ ವಾಹನಗಳಿಗೆ ವಿನಾಯ್ತಿ ನೀಡಲಾಗಿದೆ.
ಫಸ್ಟ್ ಟೈಂ : ಸಾರ್ವಜನಿಕ ರಸ್ತೆಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲುವ ಕಾರ್‌ಗಳಿಗೆ ಶುಲ್ಕ ನಿಗಧಿ. ಇದು, ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಪ್ರಥಮ ಪ್ರಯೋಗ.ಹಿಂದಿನ ವರ್ಷಗಳಲ್ಲಿ ನಗರಸಭೆ ಬಜೆಟ್ ಮಂಡನೆ ಸಂದರ್ಭದಲ್ಲಿ ಚಿಕ್ಕಮಗಳೂರಿನ ಎಂ.ಜಿ. ರಸ್ತೆ, ಐ.ಜಿ. ರಸ್ತೆಯಲ್ಲಿ ನಿಲ್ಲುವ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಬೇಕೆಂಬ ಪ್ರಸ್ತಾಪ ಪ್ರತಿ ವರ್ಷ ಬರುತ್ತಲೇ ಇತ್ತು. ಆದರೆ, ಜಾರಿಯಾಗಿರಲಿಲ್ಲ. ಇದೆ. ಮೊದಲ ಬಾರಿಗೆ ಹೊಸ ಪ್ರಯೋಗಕ್ಕೆ ನಗರಸಭೆ ಕೈ ಹಾಕಿದೆ. ಇದು ಸಕ್ಸಸ್ ಆಗುತ್ತಾ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ರಿಯಾಯ್ತಿ: ನಗರದ ಎಂ.ಜಿ. ರಸ್ತೆ ಹಾಗೂ ಐ.ಜಿ. ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಯಾವುದೇ ವಸ್ತುಗಳನ್ನು ಖರೀದಿ ಮಾಡಲು ಅಂಗಡಿಗಳಿಗೆ ಬರುವ ಗ್ರಾಹಕರಿಗೆ ಪಾರ್ಕಿಂಗ್ ಗೆ ಜಾಗ ಇಲ್ಲದಂತಾಗಿದೆ. ಈ ಸಮಸ್ಯೆ ವರ್ತಕರ ಗಮನಕ್ಕೂ ಬಂದಿದೆ. ಗ್ರಾಹಕರ ಜತೆಗೆ ತಮ್ಮ ಅಂಗಡಿಗಳ ಮುಂದೆ ನಿಲ್ಲುವ ತಮ್ಮದೆ ಕಾರಿಗೂ ಶುಲ್ಕ ಕಟ್ಟಬೇಕಾಗಿರುವುದು ತಲೆ ನೋವಾಗಿದೆ. -- ಬಾಕ್ಸ್ ---ಬೇಕಾಬಿಟ್ಟಿ ಕಾರ್ ಪಾರ್ಕಿಂಗ್
ಕೆಲಸದ ನಿಮಿತ್ತ ಬೇರೆ ಊರುಗಳಿಗೆ ಹೋಗುವ ಹಾಗೂ ಪ್ರತಿ ದಿನ ಕಡೂರು, ಬೀರೂರಿಗೆ ಹೋಗಿ ಬರುವ ಬ್ಯಾಂಕ್ ಸಿಬ್ಬಂದಿ ತಮ್ಮ ಕಾರುಗಳನ್ನು ಎಂ.ಜಿ. ರಸ್ತೆಯಲ್ಲಿ ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ಎಂ.ಜಿ. ರಸ್ತೆಗೆ ಬರುವ ಗ್ರಾಹಕರು ಕಾರು ನಿಲ್ಲಿಸಲು ಜಾಗ ಇಲ್ಲದಾಗಿದೆ. ಇದರಿಂದ ವರ್ತಕರಿಗೂ ತೊಂದರೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೇಳಿದ್ದಾರೆ.ಪೋಟೋ ಪೈಲ್ ನೇಮ್ 10 ಕೆಸಿಕೆಎಂ 3ವರಸಿದ್ದಿ ವೇಣುಗೋಪಾಲ್
ಪೋಟೋ ಫೈಲ್ ನೇಮ್ 10 ಕೆಸಿಕೆಎಂ 4ಕಾರ್ ಪಾರ್ಕಿಂಗ್ ಶುಲ್ಕ ಜಾರಿಯಾಗಲಿರುವ ಚಿಕ್ಕಮಗಳೂರಿನ ಎಂ.ಜಿ. ರಸ್ತೆ.