ಜನರಿಗೆ ಅರಿವು ಮೂಡಿಸುವ ಅಗತ್ಯತೆ ಇದೆ

| Published : Jul 12 2024, 01:33 AM IST

ಸಾರಾಂಶ

ಯಾವುದೇ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದಾಕ್ಷಣ ಅದರಿಂದ ದೇಶಕ್ಕೆ ಉಪಯೋಗವೇನಿಲ್ಲ. ಅದರಿಂದ ಸಾಕಷ್ಟು ಸಮಸ್ಯೆಗಳೇ ಕಾಡುತ್ತವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಂಗನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಯಾವುದೇ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದಾಕ್ಷಣ ಅದರಿಂದ ದೇಶಕ್ಕೆ ಉಪಯೋಗವೇನಿಲ್ಲ. ಅದರಿಂದ ಸಾಕಷ್ಟು ಸಮಸ್ಯೆಗಳೇ ಕಾಡುತ್ತವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಂಗನಾಥ್ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಶಿಕ್ಷಣ ಇಲಾಖೆ, ಪಪಂ, ಶಿಶು ಇಲಾಖೆ, ರೋಟರಿ, ಲಯನ್ಸ್, ಇನ್ನರ್ ವೀಲ್ ಕ್ಲಬ್ ಹಾಗೂ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಜಾಗೃತಿ ಜಾಥವನ್ನು ಉದ್ಘಾಟಿಸಿ ಮಾತನಾಡಿದರು.

ಜನಸಂಖ್ಯೆ ಸ್ಪೋಟದಿಂದ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಅಗತ್ಯತೆ ಇದೆ. ನಮ್ಮ ದೇಶದಲ್ಲಿ ಜನಸಂಖ್ಯೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಈಗಾಗಲೇ ೧೩೪ ಕೋಟಿ ಜನಸಂಖ್ಯೆ ದಾಟಿದ್ದೇವೆ. ಜನಸಂಖ್ಯೆ ಹೆಚ್ಚಳದಿಂದ ದೇಶದ ಆರ್ಥಿಕತೆ ಮೇಲೆ ಭಾರಿ ಹೊರೆ ಬೀಳಲಿದೆ. ಆದ್ದರಿಂದ ಜನಸಂಖ್ಯೆಗೆ ಕಡಿವಾಣ ಹಾಕಬೇಕು. ವಿಶ್ವದಲ್ಲಿಯೇ ಭಾರತ ದೇಶ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು. ಕಾರ್ಯಕ್ರಮ ಮುನ್ನಾ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಪಟ್ಟಣದ ದಬ್ಬೇಘಟ್ಟ ಸರ್ಕಲ್ ವರೆಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಲವಾರು ಸಂಘ ಸಂಸ್ಥೆಯ ಪದಾದಿಕಾರಿಗಳು ಜಾಥ ನಡೆಸಿ ಜನಸಂಖ್ಯೆ ಹೆಚ್ಚಳದ ಬಗ್ಗೆ ಅರಿವು ಮೂಡಿಸಿದರು.ತಹಸೀಲ್ದಾರ್ ರೇಣುಕುಮಾರ್, ಡಾ. ನಾಗರಾಜು, ಡಾ.ರಮ್ಯ, ಬಿ.ಆರ್.ಸಿ ವೀಣಾ, ಆರೋಗ್ಯ ಶಿಕ್ಷಣ ಅಧಿಕಾರಿ ಚಂದ್ರಶೇಖರ್, ಆರೋಗ್ಯ ಇಲಾಖೆಯ ಬೋರೇಗೌಡ, ಗಿಡ್ಡೇಗೌಡ, ರೋಟರಿ ಕ್ಲಬ್ ಅಧ್ಯಕ್ಷ ಸಾ.ಶಿ.ದೇವರಾಜು, ಲಯನ್ಸ್ ಕ್ಲಬ್ ಅಧ್ಯಕ್ಷ ರಂಗನಾಥ್, ರೆಡ್ ಕ್ರಾಸ್ ಅಧ್ಯಕ್ಷ ನಾಗರಾಜಯ್ಯ, ಇನ್ನರ್ ವೀಲ್ ಅಧ್ಯಕ್ಷೆ ನೇತ್ರಾ ಸಿದ್ದಲಿಂಗಸ್ವಾಮಿ, ಲ.ಸುರೇಶ್, ಲ.ರಾಜಣ್ಣ, ಲ.ರಾಮಕೃಷ್ಣ, ರೋ.ದಯಾನಂದ್, ರೋ.ಜಯಂತ್, ರೋ.ಶಶಿಶೇಖರ್, ರೋ.ಉಪೇಂದ್ರ, ಶಾಲೆಯ ಮುಖ್ಯೋಪಧ್ಯಾಯ ವೆಂಕಟೇಶ್ ಭಾಗವಹಿಸಿದ್ದರು.