ವೈಯಕ್ತಿಕ ಹಣಕಾಸಿನ ನಿರ್ವಹಣೆ ಪ್ರಜ್ಞೆ ಬದುಕಿನ ಭದ್ರತೆಗೆ ದಾರಿ

| Published : Sep 28 2024, 01:19 AM IST

ವೈಯಕ್ತಿಕ ಹಣಕಾಸಿನ ನಿರ್ವಹಣೆ ಪ್ರಜ್ಞೆ ಬದುಕಿನ ಭದ್ರತೆಗೆ ದಾರಿ
Share this Article
  • FB
  • TW
  • Linkdin
  • Email

ಸಾರಾಂಶ

Personal financial management consciousness is the way to life security

-ಕರ್ನಾಟಕ ಅಕೌಂಟೆಂಟ್ ಜನರಲ್ ಕಛೇರಿಯ ನಿವೃತ್ತ ಅಧಿಕಾರಿ ಬಿ.ವಿ. ಶ್ರೀನಿವಾಸ ಮಾತು

--------

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ:

ವೃತ್ತಿಗೆ ಸಂಬಂಧಿಸಿದ ಮತ್ತೊಂದು ಮಹತ್ವದ ದಾರಿ ವೈಯಕ್ತಿಕ ಹಣಕಾಸಿನ ನಿರ್ವಹಣೆ, ಆರ್ಥಿಕ ಪ್ರಜ್ಞೆ, ಬದುಕಿನ ಮತ್ತು ಸಮಾಜದ ಭದ್ರತೆಗೆ ದಾರಿಯಾಗಿದೆ ಎಂದು ಬೆಂಗಳೂರಿನ ಕರ್ನಾಟಕ ಅಕೌಂಟೆಂಟ್ ಜನರಲ್ ಕಛೇರಿಯ ನಿವೃತ್ತ ಅಧಿಕಾರಿ ಬಿ.ವಿ. ಶ್ರೀನಿವಾಸ ಹೇಳಿದರು.

ಅವರು ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯುಎಸಿ ಯಿಂದ ಆಯೋಜಿಸಿದ್ದ ‘ವೈಯಕ್ತಿಕ ಹಣಕಾಸಿನ ನಿರ್ವಹಣೆ’ ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಹೆಚ್ಚಾಗಿ ವೈಯಕ್ತಿಕ ಆರ್ಥಿಕ ನಿರ್ವಹಣೆಗೆ ಒಲವು ತೋರಬೇಕು. ಗಳಿಕೆ ಜೊತೆಗೆ ಉಳಿತಾಯದಿಂದ ಆರ್ಥಿಕತೆಯ ಸುಧಾರಣೆ ಸಾಧ್ಯ ಎಂದರು.

ವರಮಾನ ಯಾವುದೇ ಮೂಲದಿಂದ ಬಂದರೂ ಯಾವ ಕ್ಷೇತ್ರದಲ್ಲಿ ಹುಡಿಕೆ ಮಾಡಬೇಕು ಎಂಬ ಜ್ಞಾನ ಮುಖ್ಯ. ಉಳಿತಾಯ ಮತ್ತು ಹೂಡಿಕೆಗಳಲ್ಲಿ ಹೆಚ್ಚು ವ್ಯತ್ಯಾಸವಾದರೆ ಆರ್ಥಿಕ ಅಪಾಯ ಎದುರಾಗುತ್ತದೆ. ನಮಗೆ ನಾವೇ ಅರ್ಥೈಸಿಕೊಂಡು ಮಾಡುವ ಪರ್ಸನಲ್ ಫೈನಾನ್ಸ್ ಜೀವನದ ಪ್ರಧಾನ ಅಂಶವಾಗಿದೆ. ಹೂಡಿಕೆಯ ಪ್ರಜ್ಞೆಯಿಂದಲೂ ವೈಯಕ್ತಿಕ ಆರ್ಥಿಕತೆ ಸುಧಾರಣೆ ಸಾಧ್ಯ ಎಂದರು.

ಬೆಂಗಳೂರಿನ ಅಕೌಂಟೆಂಟ್ ಜನರಲ್ ಕಛೇರಿಯ ನಿವೃತ್ತ ಅಧಿಕಾರಿ ವಿರುಪಾಕ್ಷ ಮಾತನಾಡಿ, ಪರ್ಸನಲ್ ಫೈನಾನ್ಸ್ ಹೊರದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಓದುತ್ತಾರೆ. ಹಣದ ಉಳಿತಾಯಕ್ಕೆ ಹಲವು ದಾರಿಗಳಿವೆ. ಆರ್ಥಿಕ ಮೌಲ್ಯದ ಬಗೆಗೆ ಹೆಚ್ಚು ಒತ್ತು ನೀಡುವ ಮೂಲಕ ವೈಯಕ್ತಿಕ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂದರು.

ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್‌ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡಿಗರು ಹೆಚ್ಚು ಸೇರಬೇಕಾಗಿದೆ. ಭಾರತೀಯ ಸ್ವಾಯತ್‌ ಸಂಸ್ಥೆಯಲ್ಲಿ ಹಲವು ಹುದ್ದೆಗಳಿಗೆ ಇಲ್ಲಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಾಗಿ ಎಂದರು.

ಗುಜರಾತನಲ್ಲಿ ಹತ್ತನೇ ತರಗತಿ ಮುಗಿದ ನಂತರವೇ ಸ್ಟಾಕ್ ಮಾರ್ಕೆಟ್‌, ಷೇರುಪೇಟೆ ಬಗೆಗೆ ತರಬೇತಿ ನೀಡುತ್ತಾರೆ. ಗಳಿಕೆ ಜತೆಗೆ ಉಳಿಕೆಗೆ ಪ್ರಾಮುಖ್ಯತೆ ನೀಡಿದರೆ ವೈಯಕ್ತಿಕ ಹಣಕಾಸು ನಿರ್ಹಹಣೆ ಚನ್ನಾಗಿ ಆಗುತ್ತದೆ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, ಹಣದ ಅವಶ್ಯಕತೆ ಎಲ್ಲರಿಗೂ ಇದೆ. ಅದರ ಗಳಿಕೆ ಎಷ್ಟು ಮುಖ್ಯವೋ ಉಳಿತಾಯವು ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ಅನಾವಶ್ಯಕ ಖರ್ಚು ಮಾಡದೇ ತಂದೆ ತಾಯಿ ನೀಡಿದ ಹಣವನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಆರ್ಥಿಕ ಪ್ರಜ್ಞೆ ಎಂಬುದು ವ್ಯವಹಾರ ಜ್ಞಾನ ಮತ್ತು ಲೋಕಜ್ಞಾನವಾಗಿರುತ್ತದೆ. ಪ್ರತಿಯೊಬ್ಬರ ಕೆಲಸಕ್ಕೂ ಸಮಾಜದಲ್ಲಿ ಒಂದು ಮೌಲ್ಯವಿರುತ್ತದೆ. ಕೃಷಿಕರ, ಜನಪರ, ಮನುಷ್ಯತ್ವದ ಪರವಾದ ಆರ್ಥಿಕ ನೀತಿಗಳು ಜನರ ಬದುಕು ಸುಧಾರಿಸುತ್ತವೆ. ಹಣದ ಜತೆಗೆ ಅದರ ವಿನಿಮಯದ ಬಗೆಗೆ ವಿವೇಕ ಮತ್ತು ಪ್ರಜ್ಞೆ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಮೈಸೂರಿನ ಶ್ರೀಶೈಲ್, ರೋಶನ್ ಬಿ, ವಿವೇಕಾನಂದ ಶಿಂಧೆ, ಚನ್ನಬಸಪ್ಪ ಗೌರ, ಜಗದೇವಿ ಜವಳಗೆ, ಡಾ. ಬಸವರಾಜ ಖಂಡಾಳೆ, ಪ್ರವೀಣ ಬಿರಾದಾರ, ಶ್ರೀನಿವಾಸ ಉಮಾಪೂರೆ, ಗುರುದೇವಿ ಕಿಚಡೆ, ಸಚಿನ ಬಿಡವೆ, ಪ್ರಶಾಂತ ಬುಡಗೆ ಇದ್ದರು.

ಗಂಗಾಧರ ಸಾಲಿಮಠ ಸ್ವಾಗತಿಸಿದರು. ಸಂಗೀತಾ ಮಹಾಗಾಂವೆ ನಿರೂಪಿಸಿದರೆ ಡಾ. ಶಾಂತಲಾ ಪಾಟೀಲ ವಂದಿಸಿದರು.

--

ಚಿತ್ರ 27ಬಿಡಿಆರ್51

ಬಸವಕಲ್ಯಾಣ ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯುಎಸಿಯಿಂದ ‘ವೈಯಕ್ತಿಕ ಹಣಕಾಸಿನ ನಿರ್ವಹಣೆ’ ಕುರಿತ ಉಪನ್ಯಾಸ ನಡೆಯಿತು.

--