ಇಶಾ ಫೌಂಡೇಶನ್‌ನಿಂದ ಪೊನ್ನಾಡ್ ಫಾರ್ಮರ್‌ ಪ್ರೊಡ್ಯೂಸರ್ ಕಂಪನಿ ಪ್ರಮುಖರಿಗೆ ಸನ್ಮಾನ

| Published : Feb 28 2025, 12:45 AM IST

ಇಶಾ ಫೌಂಡೇಶನ್‌ನಿಂದ ಪೊನ್ನಾಡ್ ಫಾರ್ಮರ್‌ ಪ್ರೊಡ್ಯೂಸರ್ ಕಂಪನಿ ಪ್ರಮುಖರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಪೊನ್ನಾಡ್‌ ಫಾರ್ಮರ್‌ ಪ್ರೊಡ್ಯುಸರ್‌ ಕಂಪನಿ ಲಿಮಿಟೆಡ್‌ ಪ್ರಮುಖರನ್ನು ಇಶಾ ಫೌಂಡೇಶನ್‌ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪ್ರತಿಷ್ಠಿತ ಸಿಐಐ – ಎಫ್‌ಪಿಒ ಎಕ್ಸಲೆನ್ಸಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್‌ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ನ ಪ್ರಮುಖರನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ನಲ್ಲಿ ಬುಧವಾರ ನಡೆದ ಮಹಾಶಿವರಾತ್ರಿ ಆಚರಣೆ ಸಂದರ್ಭ ಇಶಾ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಮಸ್ತ ರೈತರ ಪರವಾಗಿ ನಾಪೋಕ್ಲುವಿನ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ನ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ನಿರ್ದೇಶಕರಾದ ಕೇಟೋಳಿರ ರತ್ನ ಚರ್ಮಣ ಹಾಗೂ ಕೋಡಿರ ಪ್ರಸನ್ನ ಅವರನ್ನು ಇಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ್ ಅವರು ಸನ್ಮಾನಿಸಿದರು.

ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸನ್ಮಾನ ಸ್ವೀಕರಿಸುವ ಸಂದರ್ಭ ಗೃಹ ಸಚಿವ ಅಮಿತ್ ಶಾ, ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಮುರುಗನ್ ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.