ಸಚಿವ ಪರಮೇಶ್ವರ್‌ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು

| Published : Jan 02 2024, 02:15 AM IST

ಸಚಿವ ಪರಮೇಶ್ವರ್‌ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು
Share this Article
  • FB
  • TW
  • Linkdin
  • Email

ಸಾರಾಂಶ

ವಿಕ್ರಂ ಸಿಂಹ ಬಂಧನ ವಿಷಯದಲ್ಲಿ ಪ್ರತಾಪ್ ಸಿಂಹ ರಾಜಕಾರಣ ಮಾಡುತ್ತಿದ್ದಾರೆ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ಪ್ರತಾಪ್‌ಸಿಂಹ ಪ್ರತಿಕ್ರಿಯಿಸಿದ್ದು, ಸಚಿವ ಮಧು ಬಂಗಾರಪ್ಪ ಅವರ ಚೆಕ್ ಬೌನ್ಸ್ ಪ್ರಕರಣ ಮುಚ್ಚಲು ಮಾಧ್ಯಮಗಳ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿಸಚಿವ ಮಧು ಬಂಗಾರಪ್ಪ ಅವರ ಚೆಕ್ ಬೌನ್ಸ್ ಪ್ರಕರಣ ಮುಚ್ಚಲು ಮಾಧ್ಯಮಗಳ ಗಮನ ಬೇರೆಡೆ ಸೆಳೆದು ವಿಷಯಾಂತರ ಮಾಡಲು ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಿದ್ದೀರಾ. ಆದರೆ ‘ಕೋರ್ಟಿನಲ್ಲಿ ಜಡ್ಜ್ ನಿಮಗೆ ಮಂಗಳಾರತಿ ಮಾಡಿದ್ದಾರೆ. ರಾಜಕಾರಣ ಮಾಡುತ್ತಿರುವವರು ನೀವು ಸರ್’ ಎಂದು ಸಂಸದ ಪ್ರತಾಪ ಸಿಂಹ ಗೃಹ ಸಚಿವ ಪರಮೇಶ್ವರ್ ಅವರಿಗೆ ತಿರುಗೇಟು ನೀಡಿದ್ದಾರೆ.

ಸಂಪಾಜೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ರಂ ಸಿಂಹ ಬಂಧನ ವಿಷಯದಲ್ಲಿ ಪ್ರತಾಪ್ ಸಿಂಹ ರಾಜಕಾರಣ ಮಾಡುತ್ತಿದ್ದಾರೆ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ,

ನನಗೆ ಜಿ. ಪರಮೇಶ್ವರ್ ಸಾಹೇಬ್ರ ಬಗ್ಗೆ ಅಪಾರವಾದ ಗೌರವವಿದೆ. ನಾನು ಇಷ್ಟಪಡುವ ರಾಜಕಾರಣಿಗಳಲ್ಲಿ ಜಿ. ಪರಮೇಶ್ವರ್ ಅವರೂ ಒಬ್ಬರು ಎಂದರು.

ಡಿ.20 ರಂದು ಅಕ್ರಮವಾಗಿ ಮರ ಕಡಿದಿದ್ದಾರೆ ಎಂದು ಎಫ್ಐಆರ್ ದಾಖಲಾಗಿದೆ. ಎ1 ರಾಕೇಶ್ ಶೆಟ್ಟಿ, ಎ2 ಜಯಮ್ಮ

ಜೊತೆಗೆ ಇತರರು ಎಂದು ದೂರಿನಲ್ಲಿ ದಾಖಲಾಗಿದೆ. ತಲೆಮರೆಸಿಕೊಂಡಿರುವವರು ರವಿ ಎಂದು ದಾಖಲಾಗುತ್ತದೆ. ಈ ಕುರಿತು ಡಿ.24ರಂದು ನಾನು ಕೆಲವು ವಿಚಾರಗಳ ಬಗ್ಗೆ ಹೇಳಿಕೆ ಕೊಟ್ಟೆ. ನಾನು ಹೇಳಿಕೆ ಕೊಟ್ಟ ಎರಡು ಗಂಟೆಯಲ್ಲಿ ಕಾಂಗ್ರೆಸ್ ನ ಟ್ವಿಟರ್ ಮತ್ತು ಫೇಸ್ ಬುಕ್ ಖಾತೆಯಲ್ಲಿ ಟ್ವೀಟ್ ಮಾಡಲಾಗುತ್ತದೆ. ಪ್ರತಾಪ್ ಸಿಂಹನ ತಮ್ಮ ಮರಗಳ್ಳ, ಇವನು ನಾಡಗಳ್ಳ ಎಂದು ಟ್ವೀಟ್ ಮಾಡಲಾಗುತ್ತದೆ. ಇಲ್ಲಿ ರಾಜಕಾರಣ ಮಾಡುತ್ತಿರುವವರು ಕಾಂಗ್ರೆಸ್ ಎಂದು ಸಂಸದ ಅಸಮಾಧಾನ ವ್ಯಕ್ತಪಡಿಸಿದರು. ಆ ಎಫ್ಐಆರ್ ನಲ್ಲಿ ನನ್ನ ತಮ್ಮನ ಹೆಸರಿದೆಯಾ? ರಾಜಕಾರಣ ಮಾಡಿದ್ದು ಕಾಂಗ್ರೆಸ್. ಪ್ರಕರಣದಲ್ಲಿ ಎ1 ಮತ್ತು ಎ2 ಇಬ್ಬರಿಗೂ ಸ್ಟೇಷನ್ ನಲ್ಲಿ ಬೇಲ್ ಆಗುತ್ತದೆ. ನನ್ನ ತಮ್ಮ ಬಳಿಯೂ ಡಿ.22ಂದು ಹೇಳಿಕೆ ಪಡೆದಿದ್ದಾರೆ. ಹೇಳಿಕೆ ಕೊಟ್ಟ ಬಳಿಕ ಬೆಂಗಳೂರಿಗೆ ಹೋಗಿದ್ದಾನೆ. ಅದಾದ ಬಳಿಕ ತರೆಮರೆಸಿಕೊಂಡು ಹೋಗಿದ್ದಾನೆ ಎಂದು ರಾಜಕಾರಣ ಮಾಡಿದ್ಯಾರು? ತರೆಮರೆಸಿಕೊಂಡು ಹೋಗುವವರು ಸ್ವಂತ ಕಾರು ಮೊಬೈಲ್ ತೆಗೆದುಕೊಂಡು ಹೋಗುತ್ತಾರೆಯೇ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು. ನಿಮ್ಮ ಬಳಿ ಎಲ್ಲಾ ಅಧಿಕಾರವಿದೆ. ತನಿಖೆ ಮಾಡಲು ಅಲ್ಲಿಗೆ ಎಲ್ಲರನ್ನು ಕಳುಹಿಸಿ. ಯಾರು ಮರ ಕಡಿದಿದ್ದಾರೆ ತಿಳಿಸಿ ಸರ್.

ಇದರಲ್ಲಿ ರಾಜಕಾರಣ ಮಾಡುತ್ತಿರುವವರು ನೀವು ಸರ್ ಎಂದು ಪರಮೇಶ್ ಅವರಿಗೆ ತಿರುಗೇಟು ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2024 ಲೋಕಸಭೆ ಚುನಾವಣೆಯಲ್ಲಿ ಕೊಡಗು ಮೈಸೂರು ಕ್ಷೇತ್ರದಲ್ಲಿ ಅವರ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲ್ಲ ಅಂತ ಗೊತ್ತಿದೆ. ಪ್ರತಾಪ್ ಸಿಂಹನನ್ನು ರಾಜಕೀಯವಾಗಿ ಮುಗಿಸಬೇಕು, ಟಿಕೆಟ್ ತಪ್ಪಿಸಬೇಕು. ಇಲ್ಲದಿದ್ದರೆ ಪ್ರತಾಪ್ ಸಿಂಹ ವಿರುದ್ಧ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲ್ಲ ಅಂತ ಗೊತ್ತಿದೆ. ಹಾಗಾಗಿ ನನ್ನನ್ನು ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪ್ರತಾಪ್ ಸಿಂಹ ಪುನರುಚ್ಛರಿಸಿದರು.