ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಅಂಚೆ ನೌಕರರ ಪ್ರತಿಭಟನೆ

| Published : Dec 15 2023, 01:31 AM IST

ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಅಂಚೆ ನೌಕರರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಅಂಚೆ ನೌಕರವಿವಿಧ ಬೇಡಿಕೆಗಳ್ನ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದಿಂದ ಗುರುವಾರ ಗದಗ ನಗರದ ಅಂಚೆ ಇಲಾಖೆ ಹಾಗೂ ಸಂಸದರ ಕಾರ್ಯಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.

ಗದಗ: ಗ್ರಾಮೀಣ ಅಂಚೆ ನೌಕರವಿವಿಧ ಬೇಡಿಕೆಗಳ್ನ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದಿಂದ ಗುರುವಾರ ನಗರದ ಅಂಚೆ ಇಲಾಖೆ ಹಾಗೂ ಸಂಸದರ ಕಾರ್ಯಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.

ಈ ವೇಳೆ ವಿಭಾಗೀಯ ಕಾರ್ಯದರ್ಶಿ ಎಂ.ಎನ್. ಕುರಹಟ್ಟಿ ಮಾತನಾಡಿ, ೮ ಗಂಟೆಗಳ ಕೆಲಸ ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ನೀಡಬೇಕು. ೧೨, ೨೪, ೩೬ ವರ್ಷ ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಇನ್‌ಕ್ರಿಮೆಂಟ್ ನೀಡಬೇಕು. ಕಮಲೇಶಚಂದ್ರ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು. ಎಲ್ಲಾ ಪ್ರೋತ್ಸಾಹಕ ಯೋಜನೆಗಳು, ವ್ಯವಸ್ಥೆಗಳನ್ನು ರದ್ದುಗೊಳಿಸಿ ಮತ್ತು ಜಿಡಿಎಸ್,ಐಪಿಪಿಬಿ, ಪಿ.ಎಲ್.ಐ.ಆರ್.ಪಿ.ಎಲ್.ಐ ಉಳಿತಾಯ ಯೋಜನೆಗಳು ಮತ್ತು ಎಂ.ಜಿ.ಎನ್.ಆರ್.ಇ.ಜಿ.ಎಸ್ ನಂತಹ ಎಲ್ಲಾ ಕೆಲಸಗಳನ್ನು ಅವರ ಕೆಲಸದ ಹೊರೆ ಮೌಲ್ಯಮಾಪನದಲ್ಲಿ ಸೇರಿಸಬೇಕು. ಗುಂಪು ವಿಮೆ ಮೊತ್ತವನ್ನು ರು.೫ ಲಕ್ಷಗಳವರೆಗೆ ಹೆಚ್ಚಿಸಬೇಕು. ನಿವೃತ್ತಿಯ ರಜೆಯಲ್ಲಿ ೧೮೦ ದಿನಗಳವರೆಗೆ ಎನ್‌ಕ್ಯಾಶ್ ಮಾಡಬಹುದಾದ ಶೇಖರಣೆಯ ಸೌಲಭ್ಯದೊಂದಿಗೆ ವಾರ್ಷಿಕ ೩೦ ದಿನಗಳ ರಜೆಯ ಅನುದಾನ ನೀಡಬೇಕು. ಐಡಿಎಸ್‌ಗೆ ವೈದ್ಯಕೀಯ ಸೌಲಭ್ಯದ ಅನುದಾನ ನೀಡಬೇಕು. ಗ್ರಾಚ್ಯುಟಿ ಮೊತ್ತವನ್ನು ೧.೫ ಲಕ್ಷದಿಂದ ೫ ಲಕ್ಷಗಳವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಗ್ರಾಮೀಣ ಅಂಚೆ ನೂರಾರು ನೌಕರರು ಇದ್ದರು.