ಕನ್ನಡಪ್ರಭ ವಾರ್ತೆ ಸೈದಾಪುರ
ಪಟ್ಟಣ ಸೇರಿದಂತೆ ವಿವಿಧೆಡೆ 71ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಕನ್ನಡದ ಕಂಪು ಎಲ್ಲೆಡೆ ಪಸರಿಸುವಂತೆ ಧ್ವಜಾರೋಹಣ, ಕನ್ನಡ ಪುಸ್ತಕ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡಾಭಿಮಾನ ಮೆರೆದರು.ಪಟ್ಟಣದಲ್ಲಿ ಕರ್ನಾಟಕ ಸೇನೆಯ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಸೇರಿದಂತೆ ನಾಡಿನ ಹೆಸರಾಂತ ಕನ್ನಡ ಕವಿಗಳ ಪುಸ್ತಕಗಳನ್ನು ವಿತರಿಸಲಾಯಿತು.
ಕರ್ನಾಟಕ ಸೇನೆಯ ತಾಲೂಕಾಧ್ಯಕ್ಷ ವೀರೇಶ ಸಜ್ಜನ್ ಮಾತನಾಡಿ, ಕನ್ನಡದ ಮೇಲಿನ ಪ್ರೀತಿ ಮುಂದಿನ ಪೀಳಿಗೆಗೂ ಸಹಜವಾಗಿ ತಲುಪಬೇಕು. ಪ್ರತಿಯೊಂದು ಮನೆಯಲ್ಲೂ ಕನ್ನಡದ ಮಾತುಗಳು ಮಧುರವಾಗಿ ಮೊಳಗಬೇಕು. ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಆತ್ಮೀಯತೆ ಮತ್ತು ಅಭಿಮಾನ ಬೆಳೆಸಲು ಪುಸ್ತಕ ಓದುವ ಹವ್ಯಾಸ ರೂಢಿಸಬೇಕು. ಕನ್ನಡ ಶಾಲೆಗಳ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡದ ಬಳಕೆಗೆ ಪ್ರೋತ್ಸಾಹ ನೀಡುವುದರ ಜತೆಗೆ ನಾಡಿನ ನೆಲ, ಜಲ, ಪ್ರಕೃತಿ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.ಈ ಸಂದರ್ಭ ಭೀಮರೆಡ್ಡಿ ಪಾಟೀಲ್ ಶೆಟ್ಟಿಹಳ್ಳಿ, ತಾಲೂಕಾಧ್ಯಕ್ಷ ವೀರೇಶ ಸಜ್ಜನ್, ಯಲ್ಲಪ್ಪ ಮುನಗಾಲ, ಹನುಮಂತ ದೊಡ್ಡಮನಿ, ದೇವಪ್ಪಗೌಡ ರಾಚನಹಳ್ಳಿ, ರವೀಂದ್ರ ಕುಮಾರ್ ಕಡೇಚೂರ್, ಸಿದ್ದು ಪೂಜಾರಿ, ಪರ್ವತರೆಡ್ಡಿ ದದ್ದಲ್, ಸಚಿನ್ ಪವಾರ್, ದೇವು ಗಂಟಿ ಬಾಡಿಯಲ್, ಅಯ್ಯಪ್ಪ ಬಾಡೊಯಾಳ, ಭಾಸ್ಕರ್ ಹೊಂಗಸಂದ್ರ, ಭೀಮು ಬಾಡಿಯಾಳ, ರಾಘು, ಅರುಣ್, ಆಕಾಶ್, ಪ್ರವೀಣ್, ಪ್ರಕಾಶ್, ರಂಗನಾಥ್, ನಾಗರಾಜ್ ಸೇರಿದಂತೆ ಸೇನೆಯ ಕಾರ್ಯಕರ್ತರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಸರ್ಕಾರಿ ಶಾಲೆಯಲ್ಲಿ ಧ್ವಜಾರೋಹಣ: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರು ಶರಣಬಸಪ್ಪ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಶಿಕ್ಷಕರಾದ ಶಿವಕಾಂತಮ್ಮ, ಮಹಿಪಾಲರೆಡ್ಡಿ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಾಸವಿ ವಿದ್ಯಾಸಂಸ್ಥೆಯಲ್ಲಿ ಆಚರಣೆ: ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ ಪಾಲಾದಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮುಖ್ಯಗುರು ಬಿ.ಬಿ. ವಡವಟ್, ದೇವೇಂದ್ರ ಕುಮಾರ ಬಾಗ್ಲಿ, ಬಸಮ್ಮ ಕಲಬುರಗಿ, ಚಂದ್ರಕಲಾ, ಶಾರದಾ, ತೇಜಸ್ವಿನಿ ಸ್ವಾಮಿ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.