ಮೇ ತಿಂಗಳಲ್ಲಿ ರಂಭಾಪುರಿ ಶ್ರೀಗಳ ಪ್ರವಾಸ

| Published : Apr 30 2024, 02:13 AM IST

ಸಾರಾಂಶ

ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮೇ ತಿಂಗಳಿನಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರು ತಿಳಿಸಿದ್ದಾರೆ.

ಮೇ 1ರಂದು ಬಾಣಾವರದಲ್ಲಿ ಶ್ರೀ ಬಾಣೇಶ್ವರ ದೇವಸ್ಥಾನ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮೇ ತಿಂಗಳಿನಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರು ತಿಳಿಸಿದ್ದಾರೆ.ಮೇ 1ರಂದು ಅರಸೀಕೆರೆ ತಾಲೂಕು ಬಾಣಾವರದಲ್ಲಿ ಶ್ರೀ ಬಾಣೇಶ್ವರ ದೇವಸ್ಥಾನ ಉದ್ಘಾಟನೆ, 2ರಂದು ಚಿಕ್ಕಮಗಳೂರು ಜಿಲ್ಲೆಯ ಬೇರುಗಂಡಿ ಬೃಹನ್ಮಠದಲ್ಲಿ ಶ್ರೀ ಸಿದ್ಧೇಶ್ವರ ದೇವಸ್ಥಾನದ ಕಳಸಾರೋಹಣ ಹಾಗೂ ರೇಣುಕ ಮಹಾಂತ ಶ್ರೀಗಳ ಪಟ್ಟಾಧಿಕಾರದ ದ್ವಾದಶ ವರ್ಧಂತಿ ಸಮಾರಂಭ, 3ರಂದು ಹುಬ್ಬಳ್ಳಿಯಲ್ಲಿ ಆರ್.ಎಂ. ಹಿರೇಮಠರ ಅಮೃತ ಮಹೋತ್ಸವ ಸಮಾರಂಭ, 4ರಂದು ಬೆಂಗಳೂರಿನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸುವರು. ೧೦ರಂದು ಹರಿಹರ ತಾಲೂಕಿನ ಮಲೇಬೆನ್ನೂರು ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಷ್ಟಲಿಂಗ ಮಹಾಪೂಜಾ, 12ರಂದು ಚನ್ನರಾಯಪಟ್ಟಣ ತಾಲೂಕು ನಾಗರನವಿಲೆಯಲ್ಲಿ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಮಾರಂಭ ನಡೆಸುವರು. 15ರಂದು ಕಲಬುರ್ಗಿ ಜಿಲ್ಲೆ ಶ್ರೀನಿವಾಸ ಸರಡಗಿಯಲ್ಲಿ ರೇವಣಸಿದ್ಧೇಶ್ವರ ಶ್ರೀಗಳ ಷಷ್ಟಬ್ಧಿ ಸಮಾರಂಭ, 16ರಂದು ಬೆಳಿಗ್ಗೆ 11 ಗಂಟೆಗೆ ಬೀದರ್ ನಗರದಲ್ಲಿ ಶಾಲಾ ಸಮಾರಂಭ, ಸಂಜೆ 5 ಗಂಟೆಗೆ ಮಹಾರಾಷ್ಟ್ರ ರಾಜ್ಯ ಉದ್ಗೀರದಲ್ಲಿ ಶ್ರೀ ಹಾವಲಿಂಗೇಶ್ವರ ಗದ್ದುಗೆ ಕಳಸಾರೋಹಣ ಸಮಾರಂಭ, 17ರಂದು ಕಲಬುರ್ಗಿ ಜಿಲ್ಲೆ ಕಾಳಗಿಯಲ್ಲಿ ಜಗದ್ಗುರು ರೇಣುಕಾ ಚಾರ್ಯ ಜಯಂತಿ ಸಮಾರಂಭ, 19ರಂದು ಅಜ್ಜಂಪುರ ತಾಲೂಕಿನ ಗೊಂಡೇದಹಳ್ಳಿ ಗ್ರಾಮದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸುವರು. 23ರಂದು ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಅಂಗವಾಗಿ ವಾಸ್ತವ್ಯವಿದ್ದು ಭಕ್ತಾದಿಗಳಿಗೆ ದರ್ಶನಾ ಶೀರ್ವಾದ ನೀಡುವರು. 27ರಂದು ಶಿರಸಿ ಮತ್ತು ಸೊರಬ ತಾಲೂಕಿನಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸುವರು ಎಂದು ತಿಳಿಸಿದ್ದಾರೆ.೨೯ಬಿಹೆಚ್‌ಆರ್ ೩: ರಂಭಾಪುರಿ ಶ್ರೀ