ಅಭಿವೃದ್ಧಿಗೆ ಪೂರಕ ರೋಬೋಟಿಕ್ಸ್‌, ಕೃತಕ ಬುದ್ಧಿಮತ್ತೆ

| Published : Oct 19 2024, 12:21 AM IST

ಸಾರಾಂಶ

ಹೊಸ ಆವಿಷ್ಕಾರ ಮತ್ತು ಅನ್ವೇಷಣೆಗಳಿಂದ ಸಮಾಜ ಸಾಕಷ್ಟು ಅಭಿವೃದ್ಧಿ ಮತ್ತು ಬೆಳವಣಿಗೆ ಕಾಣಲಿದೆ. ಮನುಷ್ಯ ತಂತ್ರಜ್ಞಾನವನ್ನು ಒಳ್ಳೆಯದಕ್ಕಾಗಿ ಬಳಸುವುದಕ್ಕಿಂತ ಕೆಟ್ಟದ್ದಾಗಿಯೇ ಹೆಚ್ಚು ಬಳಸುತ್ತಿರುವುದು ತಪ್ಪು.

ಧಾರವಾಡ:

ಮುಂದಿನ ದಿನಗಳಲ್ಲಿ ಮನುಷ್ಯನ ಎಲ್ಲ ಕಾರ್ಯಚಟುವಟಿಕೆಗಳು ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪನ್ಯಾಸಗಳ ಪ್ರಯೋಜನ ಪಡೆದುಕೊಂಡು ತಂತ್ರಜ್ಞಾನ ಅರಿತುಕೊಂಡು ಉತ್ತಮ ಅನ್ವೇಷಣೆ ಮಾಡಬೇಕೆಂದು ಕರ್ನಾಟಕ ವಿವಿ ಕುಲಸಚಿವ ಡಾ. ಎ. ಚೆನ್ನಪ್ಪ ಹೇಳಿದರು.

ಇಲ್ಲಿಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಆಶ್ರಯದಲ್ಲಿ ನಡೆದ “ಆವಿಷ್ಕಾರ ಇನ್ನೋವೇಶನ್” ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹೊಸ ಆವಿಷ್ಕಾರ ಮತ್ತು ಅನ್ವೇಷಣೆಗಳಿಂದ ಸಮಾಜ ಸಾಕಷ್ಟು ಅಭಿವೃದ್ಧಿ ಮತ್ತು ಬೆಳವಣಿಗೆ ಕಾಣಲಿದೆ. ಮನುಷ್ಯ ತಂತ್ರಜ್ಞಾನವನ್ನು ಒಳ್ಳೆಯದಕ್ಕಾಗಿ ಬಳಸುವುದಕ್ಕಿಂತ ಕೆಟ್ಟದ್ದಾಗಿಯೇ ಹೆಚ್ಚು ಬಳಸುತ್ತಿರುವುದು ತಪ್ಪು. ಹೊಸ ಅನ್ವೇಷಣೆಗಳು ಮತ್ತು ತಂತ್ರಜ್ಞಾನಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ದೇಶದ ಅಭಿವೃದ್ಧಿ ಮಾಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಟಿ.ಕೆ. ಮಧು, ಬಸವರಾಜ ಗಾಡದ, ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಮತ್ತು ಡ್ರೋನ್ ತಂತ್ರಜ್ಞಾನದ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಉಪನ್ಯಾಸ ನೀಡಿದರು. ವಿಶಾಲಾಕ್ಷಿ ಎಸ್.ಜೆ. ನಿರೂಪಿಸಿದರು. ಸಿ.ಎಫ್. ಚಂಡೂರ ವಂದಿಸಿದರು. ಜಿಲ್ಲೆಯ ಡಿಪ್ಲೊಮಾ ವಿದ್ಯಾರ್ಥಿಗಳು ಇದ್ದರು.