ಲಂಚ ಪಡೆಯುವ ಸಂದರ್ಭದಲ್ಲಿ ಎಸ್‌ಡಿಎ ಲೋಕಾಯುಕ್ತ ಬಲೆಗೆ

| Published : Oct 07 2023, 02:19 AM IST

ಲಂಚ ಪಡೆಯುವ ಸಂದರ್ಭದಲ್ಲಿ ಎಸ್‌ಡಿಎ ಲೋಕಾಯುಕ್ತ ಬಲೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಡಿವೈಎಸ್‌ಪಿ ಏಲೇಕರ್‌ ನೇತೃತ್ವದಲ್ಲಿ ಲೋಕಾಯುಕ್ತರ ದಾಳಿ
ಡಿವೈಎಸ್‌ಪಿ ಏಲೇಕರ್‌ ನೇತೃತ್ವದಲ್ಲಿ ಲೋಕಾಯುಕ್ತರ ದಾಳಿ 10 ಸಾವಿರ ರು.ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದ ಎಸ್‌ಡಿಎ ಪಿಎಚ್‌ಸಿ ಸಿಬ್ಬಂದಿ ಸುನೀಲಕುಮಾರ್‌ನಿಂದ ಲಂಚಕ್ಕೆ ಬೇಡಿಕೆ ಕನ್ನಡಪ್ರಭ ವಾರ್ತೆ ಹುಮನಾಬಾದ್ ತಾಲೂಕಿನ ಹುಡುಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಸ್‌ಡಿಎ ಸುನೀಲಕುಮಾರ ಕಾಜಿ ಆರೋಗ್ಯ ನಿರೀಕ್ಷರ ವೇತನ ಹಾಗೂ ಪ್ರಯಾಣ ಭತ್ಯೆ ಬಿಲ್‌ ಮಾಡಲು 10 ಸಾವಿರ ಬೇಡಿಕೆ ಮೇರೆಗೆ ಹಣ ಪಡೆಯುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾನೆ. ಬೇನಚಿಂಚೋಳಿ ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ ಅವರ 1 ತಿಂಗಳ ವೇತನ ಹಾಗೂ 10 ತಿಂಗಳ ಪ್ರಯಾಣ ಭತ್ತೆಯ ಬಿಲ್‌ ಮಾಡಲು 10 ಸಾವಿರ ರು. ಬೇಡಿಕೆ ಇಟ್ಟಿದ್ದ ಸನೀಲ್‌ಕುಮಾರ್‌, ಬೀದರ್‌ನ ಚನ್ನಬಸವ ನಗರದ ಖಾಸಗಿ ಜಮೀನಿನಲ್ಲಿ ಶ್ರೀನಿವಾಸ ರೆಡ್ಡಿ ಅವರನ್ನು ಸುನೀಲಕುಮಾರ ಕರೆದಿದ್ದರು ಆ ಸಂದರ್ಭದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಶುಕ್ರವಾರ ಮಧ್ಯಾಹ್ನ ಹುಡಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಳಿಕ ಮುಂದಿನ ಕಾರ್ಯಾಚರಣೆ ನಡೆದಿದ್ದು, ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳಿಂದ ಶೋಧನೆ ಕಾರ್ಯ ಜಾರಿಯಲ್ಲಿದೆ. ಸದರಿ ಸುನಿಲಕುಮಾರ ಕಾಜಿ ಅವರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2007ನೇ ಸಾಲಿನಿಂದ ಇಲ್ಲಿಯವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹುಡುಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ತಿಳಿದು ಬಂದಿದೆ. ಡಿಎಸ್‌ಪಿ ಎನ್‌.ಎಂ.ಒಲೇಕರ್‌ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಿಐ ಸಂತೋಷ ರಾಠೋಡ, ಪ್ರದೀಪ ಕೊಳ್ಳಾ, ವಹೀದ್‌ ಹುಸೇನ್‌ ಕೊತವಾಲ್‌, ಸಿಬ್ಬಂದಿಗಳಾದ ವಿಷ್ಣುರೆಡ್ಡಿ, ಭರತ ದಾಗೆ, ಶ್ಲೋಕಜನ್‌ ಜ್ಯೋತಿ, ಅಡೆಪ್ಪ, ಕಿಶೋರ, ಸರಸ್ವತಿ ಸೇರಿದಂತೆ ಅನೇಕರು ಇದ್ದರು. ----