ಸಾರಾಂಶ
ಕನ್ನಡಪ್ರಭವಾರ್ತೆ ಮೂಲ್ಕಿ
ರಾಮ ನಾಮ ತಾರಕ ಮಂತ್ರದ ಫಲ ಮಹತ್ವದಾಗಿದ್ದು ಈ ಅಭಿಯಾನವನ್ನು ಸಾರ್ಥಕ ಗೊಳಿಸಲು ಎಲ್ಲರ ಸಹಕಾರ ಬೇಕು ಎಂದು ಕಿನ್ನಿಗೋಳಿ ರಾಮ ಮಂದಿರ ಪ್ರಧಾನ ಅರ್ಚಕ ವೇ. ಮೂ. ಗಿರೀಶ್ ಭಟ್ ಹೇಳಿದರು.ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ಗೋಕರ್ಣ ಮಠದ ಶ್ರೀ ಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯ ಅಜ್ಞಾನುಸಾರವಾಗಿ 550 ದಿನಗಳ ಸಾರ್ಧಪಂಚಶತಕೋಟಿ ರಾಮ ತಾರಕ ಮಂತ್ರ ಜಪ ಅಭಿಯಾನದ ಕುರಿತು ಶ್ರೀಪಾದಂಗಳವರ ಆಜ್ಞಾನುಸಾರ ನಿರ್ಧರಿಸಲಾಗಿದೆ ಈ ಅಭಿಯಾನದಲ್ಲಿ ಜಪವೂ 17 ಏಪ್ರಿಲ್ 2024 ರಿಂದ ಆರಂಭಿಸಿ 18 ಅ. 2025 ರ ತನಕ 550 ದಿನಗಳ ಕಾಲ ನಿರಂತರವಾಗಿ ನಡೆಯತ್ತದೆ. ಇದರ ವಿಶೇಷತೆ ಏನೆಂದರೆ ರಾಮನಾಮಜಪಕರು ಜಪವನ್ನು ತಮ್ಮ ತಮ್ಮ ಮನೆಗಳಲ್ಲಿ ಮಾಡದೇ ನಾವು ನಿಗದಿ ಪಡಿಸಿದ ಸ್ಥಳದಲ್ಲಿ ಸಾಮೂಹಿಕವಾಗಿ ವೈದಿಕರ ಮಾರ್ಗದರ್ಶನದೊಂದಿಗೆ ಶ್ರೀಪಾದಂಗಳವರು ಸೂಚಿಸಿದ ನಿಯಮಗಳಿಗೆ ಅನುಸಾರಿಯಾಗಿ ಜಪವನ್ನು ಮಾಡಿ ಶ್ರೀ ಸಂಸ್ಥಾನದ ಆರಾಧ್ಯದೇವರಾದ ಶ್ರೀ ರಾಮದೇವರ ಕೃಪೆಗೆ ಪಾತ್ರರಾಗುವುದು. ಜಪದ ಮಂತ್ರ ರಾಮ ತ್ರಯೋದಶಾಕ್ಷರಿ -ಶ್ರೀರಾಮ ಜಯ ರಾಮ ಜಯ ಜಯ ರಾಮ ರಾಮನಾಮ ಜಪಕ್ಕೆ ದೇಶ-ಕಾಲ-ಅವಸ್ಥೆ ಮುಂತಾದವುಗಳ ನಿರ್ಭಂದವಿಲ್ಲದಿದ್ದರೂ, ರಾಮನಾಮಜಪದ ಮಹತ್ವಕ್ಕಾಗಿ ಮತ್ತು ಸಮಾಜದ ಇತರರಿಗೆ ಮಾದರಿಯಾಗಿ ಸ್ತ್ರೀಯರು ಮತ್ತು ಪುರುಷರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ರಾಮನಾಮಜಪವನ್ನು ಮಾಡುವುದು ಶ್ರೇಯಸ್ಕರವಾಗಿದೆ . ಜನನಾಶೌಚ , ಮರಣಾಶೌಚದ ಸಮಯದಲ್ಲಿ ಅಥವಾ ಇನ್ನಾವುದೇ ಮೈಲಿಗೆ ಮುಂತಾದ ಸಂದರ್ಭದಲ್ಲಿ ತಾವೇ ಸ್ವಯಂ ಪ್ರೇರಿತರಾಗಿ ರಾಮನಾಮಜಪ ಅಭಿಯಾನದಿಂದ ದೂರವಿದ್ದು ಅಶೌಚ ಮುಗಿದ ನಂತರ ಶುದ್ಧರಾಗಿ ಪುನಃ ಅಭಿಯಾನವನ್ನು ಸೇರಿಕೊಳ್ಳುವುದು.
ಕಿನ್ನಿಗೋಳಿ ಜಿಎಸ್‌ಬಿ ಸಭಾದ ಅಧ್ಯಕ್ಷ ರಾಜೇಶ್ ನಾಯಕ್ , ಮಂಜುನಾಥ ಮಲ್ಯ, ಮಾತೃ ಮಂಡಳಿಯ ಅಧ್ಯಕ್ಷೆ ಭಾರತೀ ಶೆಣೈ, ರಾಧಾ ಶೆಣೈ, ಸೀಮಾ ಭಟ್ , ಸಂದ್ಯಾ ಮಲ್ಯ ಮತ್ತಿತರು ಉಪಸ್ಥಿತರಿದ್ದರು.