ಭಾರತೀಯ ನ್ಯಾಯ ಸಂಹಿತೆ ಜಾರಿಯಿಂದ ತ್ವರಿತ ನ್ಯಾಯ: ಉಮೇಶ್‌ ಜಾಧವ್

| Published : Apr 27 2024, 01:02 AM IST

ಭಾರತೀಯ ನ್ಯಾಯ ಸಂಹಿತೆ ಜಾರಿಯಿಂದ ತ್ವರಿತ ನ್ಯಾಯ: ಉಮೇಶ್‌ ಜಾಧವ್
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಐಪಿಸಿ ಕಾನೂನಿಗೆ ತಿದ್ದುಪಡಿ ತಂದು ನೂತನವಾಗಿ ಭಾರತೀಯ ನ್ಯಾಯ ಸಂಹಿತೆ ಜಾರಿ ಮಾಡಿರುವುದರಿಂದ ಜನಸಾಮಾನ್ಯರಿಗೆ ತ್ವರಿತ ನ್ಯಾಯ ಲಭಿಸಲಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೇಂದ್ರ ಗೃಹ ಸಚಿವ ಅಮಿತ್ ಷಾರವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಐಪಿಸಿ ಕಾನೂನಿಗೆ ತಿದ್ದುಪಡಿ ತಂದು ನೂತನವಾಗಿ ಭಾರತೀಯ ನ್ಯಾಯ ಸಂಹಿತೆ ಜಾರಿ ಮಾಡಿರುವುದರಿಂದ ಜನಸಾಮಾನ್ಯರಿಗೆ ತ್ವರಿತ ನ್ಯಾಯ ಲಭಿಸಲಿದೆ ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಹೇಳಿದರು.

ಕಲಬುರಗಿ ಹೈ ಕೋರ್ಟ್‌ನ ಗುಲ್ಬರ್ಗ ಬಾರ್ ಅಸೋಸಿಯೇಷನ್ ಗೆ ಭೇಟಿ ನೀಡಿ ಚುನಾವಣಾ ಪ್ರಚಾರಾಭಿಯಾನದಲ್ಲಿ ಪಾಲ್ಗೊಂಡು ವಕೀಲರನ್ನು ಉದ್ದೇಶಿಸಿ ಮಾತನಾಡಿ, ಬ್ರಿಟಿಷರು ಜಾರಿಗೆ ತಂದ ಐಪಿಸಿ ಕಾನೂನುಗಳನ್ನು ಭಾರತೀಯ ಮನೋಧರ್ಮದ ಚೌಕಟ್ಟಿನಲ್ಲಿ ಪುನರ್ರಚನೆ ಮಾಡಿ ಭಾರತೀಯರಿಗೆ ಅತ್ಯಂತ ಸುಲಭವಾಗಿ ಮತ್ತು ತ್ವರಿತವಾಗಿ ನ್ಯಾಯ ಕೈಗೆಟಕುವಂತೆ ಭಾರತೀಯ ನ್ಯಾಯ ಸಂಹಿತೆಯನ್ನು ರಚನೆ ಮಾಡಿದ್ದಾರೆಂದರು.

ಇದು ಬ್ರಿಟಿಷ್ ದಾಸ್ಯತನದಿಂದ ನಮ್ಮನ್ನು ಮುಕ್ತಗೊಳಿಸಿ ಭಾರತೀಯ ಮನೋಧರ್ಮಕ್ಕ ನುಗುಣವಾಗಿ ಕಾನೂನುಗಳನ್ನು ಅಮಿತ್ ಷಾ ಅವರು ರಚನೆ ಮಾಡುವುದರ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದರೂ ಬ್ರಿಟಿಷರು ರಚಿಸಿದ ಕಾನೂನುಗಳನ್ನೇ ಅನುಸರಿಸಲಾಗುತ್ತಿತ್ತು. ಇದರಿಂದ ಅತ್ಯಂತ ಕ್ಲಿಷ್ಟಕರವಾದ ವಿಧಾನಗಳ ಕಾರಣದಿಂದಾಗಿ ಜನಸಾಮಾನ್ಯರಿಗೆ ಕಾನೂನುಗಳ ಸೇವೆಯನ್ನು ಪಡೆಯಲು ಅಸಮರ್ಥವಾಗಿ ಬಡವರ ಪಾಲಿಗೆ ನ್ಯಾಯ ಗಗನಕುಸುಮವಾಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಷಾರವರು ಭಾರತೀಯರ ಮನೋಧರ್ಮಕ್ಕೆ ಅನುಗುಣವಾದ ಮತ್ತು ಸುಲಭವಾಗಿ ಹಾಗೂ ತ್ವರಿತವಾಗಿ ನ್ಯಾಯದಾನ ನೀಡಲು ಇಂತಹ ಕ್ರಾಂತಿಕಾರಿ ಹೆಜ್ಜೆಯನ್ನು ಕೈಗೊಂಡಿರುವುದು ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ ನ್ಯಾಯವನ್ನು ಕೊಡಮಾಡುವ ವಕೀಲರುಗಳಿಗೂ ಕೂಡ ಸಂತಸ ತಂದ ವಿಷಯವಾಗಿದೆ ಎಂದರು.

ನ್ಯಾಯದ ವಿಳಂಬ ಹಾಗೂ ಅರ್ಹರಿಗೆ ನ್ಯಾಯ ಕೈಗೆಟಕದಿರು ವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ದೊಡ್ಡ ಅನ್ಯಾಯವಾಗುತ್ತದೆ. ಇದಕ್ಕಾಗಿ ನೂತನವಾಗಿ ರಚನೆಗೊಂಡ ಭಾರತೀಯ ನ್ಯಾಯ ಸಂಹಿತೆಯ ಮೂಲಕ ತಕ್ಷಣದಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ದೇಶದ ಯಾವುದೇ ಕಡೆಯಲ್ಲೂ ಇದ್ದುಕೊಂಡು ದೂರು ಸಲ್ಲಿಸಿ ಎಫ್ಐಆರ್ ದಾಖಲೆ ಮಾಡುವ ಅವಕಾಶ ಲಭಿಸಿದೆ. ದೌರ್ಜನ್ಯ, ದರೋಡೆ ವಂಚನೆ, ಮುಂತಾದ ಘಟನೆಗಳಿಂದ ಸಕಾಲದಲ್ಲಿ ನ್ಯಾಯ ಪಡೆಯಲು ಜನಪರವಾದ ಕಾನೂನುಗಳನ್ನು ಜಾರಿಗೆ ತಂದು ನ್ಯಾಯಾಂಗ ವ್ಯವಸ್ಥೆಯನ್ನು ಜನಮುಖಿಯನ್ನಾಗಿ ಮಾಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವರಾದ ಅಮಿತ್ ಷಾ ಅವರ ಕೆಲಸಕ್ಕೆ ಭಾರತೀಯರು ಒಕ್ಕೊರಲಿನಿಂದ ಪ್ರಶಂಸೆ ವ್ಯಕ್ತಪಡಿಸಿರುವುದು ಮೋದಿ ಆಡಳಿತದ ದೊಡ್ಡ ಸಾಧನೆಯಾಗಿದೆ. ಪ್ರಜ್ಞಾವಂತರಾದ ನ್ಯಾಯವಾದಿಗಳು ಮೋದಿಯವರ ಜನಪರ ಆಡಳಿತವನ್ನು ಹಾಗೂ ಕ್ರಾಂತಿಕಾರಿ ಕಾನೂನುಗಳ ಬದಲಾವಣೆ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಅಗತ್ಯವಿದೆ. ಆ ಮೂಲಕ ಯಾವೊಬ್ಬನೂ ನ್ಯಾಯದಿಂದ ವಂಚಿತರಾಗದೆ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಜಾಧವ್ ಹೇಳಿದರು.

ಭಾರತದಲ್ಲಿ ಎಲ್ಲ ರಂಗಗಳಲ್ಲಿಯೂ ಕೂಡ ಅದ್ಭುತವಾದ ಸಾಧನೆಗಳನ್ನು ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವದಲ್ಲೇ ಅತ್ಯುನ್ನತ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದರಿಂದ ಅವರನ್ನು ಮೂರನೇ ಬಾರಿಗೆ ಕೂಡ ಪ್ರಧಾನಿ ಸ್ಥಾನಕ್ಕೇರಿಸಲು ಪ್ರತಿಯೊಬ್ಬ ಜಾಗೃತ ಮತದಾರ ಮುಂದಾಗಬೇಕಾಗಿದೆ.ನ್ಯಾಯವಾದಿಗಳು ಕೂಡ ಇದಕ್ಕೆ ಪೂರ್ಣ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರಲ್ಲದೆ, ಮೇ 7ರಂದು ಶೇ.100ರಷ್ಟು ಮತದಾನ ಆಗುವಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಉಮೇಶ್ ಜಾದವ್ ಅವರನ್ನು ಹೈಕೋರ್ಟಿನ ಬಾರಿಸಲು ಪದಾಧಿಕಾರಿಗಳು ಹೃತ್ಪೂರ್ವಕವಾಗಿ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು ಈ ಸಂದರ್ಭದಲ್ಲಿ ಹೈಕೋರ್ಟಿನ ನ್ಯಾಯವಾದಿಗಳಾದ ಎಸ್ ಎಸ್ ಅಸ್ಪಳ್ಳಿ, ಹಾಲಹಳ್ಳಿ ಸಂತೋಷ್ ಪಾಟೀಲ್, ಗುರುರಾಜ್ ಹಾಸಿಲ್ಕರ್ ಚಂದ್ರಕಾಂತ್ ಕೌಜಲಗಿ, ಸಿದ್ದಣ್ಣ ಎಸ್ ಹಾಲಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.