ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ದೇಶದಲ್ಲಿ ಸದೃಢ ಹಾಗೂ ಸಮರ್ಥ ಆಡಳಿತ ನೀಡುತ್ತಿದೆ. ಬಿಜೆಪಿ ರಾಷ್ಟ್ರೀಯ ಸದಸ್ಯತ್ವ ಅಭಿಯಾನ ಮತ್ತೊಂದು ದಾಖಲೆಯಾಗಲಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.ಅವರು ಭಾರತೀಯ ಜನತಾ ಪಕ್ಷ ನಗರಮಂಡಲ ವತಿಯಿಂದ ನವನಗರದ 20ನೇ ವಾರ್ಡ್‌ನ ಸೆಕ್ಷರ್ ನಂ 50ರಲ್ಲಿನ 187ನೇ ಬೂತ್ ಅಧ್ಯಕ್ಷ ಮಾಂತೇಶ ಬಾದೋಡಗಿ ಅವರ ಮನೆಯ ಆವರಣದಲ್ಲಿ ಸೋಮವಾರ ನಡೆದ 2024ರ ಬಿಜೆಪಿ ರಾಷ್ಟ್ರೀಯ ಸದಸ್ಯತ್ವ ಅಭಿಯಾನಕ್ಕೆ ಭಾರತಮಾತೆಗೆ ಪುಷ್ಪಾಂಜಲಿ ಸಲ್ಲಿಸಿ ಮೊಬೈಲ್‌ನಿಂದ ಸದಸ್ಯತ್ವ ನೋಂದಣಿ ನಂಬರ್‌ಗೆ ಕಾಲ್ ಮಾಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದಿನ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಿಂದ 4 ಲಕ್ಷ 31 ಸಾವಿರ ಜನರನ್ನು ಹಾಗೂ ಬಾಗಲಕೋಟೆ ಮತಕ್ಷೇತ್ರದಿಂದ 63 ಸಾವಿರ ಸದಸ್ಯರನ್ನು ನೋಂದಣಿ ಮಾಡಿ ರಾಜ್ಯದಲ್ಲಿಯೇ 4ನೇ ಸ್ಥಾನದಲ್ಲಿದ್ದಿದ್ದು ನಮ್ಮ ಹೆಗ್ಗಳಿಕೆ. ದೇಶದಲ್ಲಿ ಬಿಜೆಪಿ ಸದೃಢ ಹಾಗೂ ಸಮರ್ಥ ಆಡಳಿತ ನೀಡುತ್ತಿದೆ. ಆದ್ದರಿಂದ ಈ ಅಭಿಯಾನ ಇಂದು ಪ್ರಾರಂಭವಾಗಿ ಅಕ್ಟೋಬರ್ 15ರ ವರೆಗೆ ಇರುವುದರಿಂದ ಮತಕ್ಷೇತ್ರದಲ್ಲಿ 75 ಸಾವಿರಕ್ಕೂ ಹೆಚ್ಚು ಹೊಸ ಸದಸ್ಯರ ನೋಂದಣಿ ಮಾಡಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ್, ನಗರಸಭೆ ಸದಸ್ಯೆ ನಾಗರತ್ನಾ ಹೆಬ್ಬಳ್ಳಿ, ಭಾಗೀರಥಿ ಪಾಟೀಲ, ಲಕ್ಷ್ಮೀ ನಾರಾಯಣ ಕಾಸಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಶಿವಾನಂದ ಟವಳಿ, ಸತ್ಯನಾರಾಯಣ ಹೆಮಾದ್ರಿ, ಅನಿತಾ ಸರೋದೆ, ಜಿ.ಎಸ್.ಬಡಿಗೇರ, ವಿಶ್ವನಾಥ ಪಾಟೀಲ, ರಾಮಣ್ಣ ಜುಮನಾಳ, ಗಣೇಶ ಲಗಳಿ, ಸಾಗರ ಬಂಡಿ, ಯಲ್ಲಪ್ಪ ನಾರಾಯಣಿ, ಶಿವು ಹನಮಕ್ಕನವರ,ದಶರಥ ಪತಂಗೆ, ಆನಂದ ಕೋಟಗಿ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ,ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ ಸೇರಿದಂತೆ ಅನೇಕರು ಭಾಗವಹಿಸಿದ್ದರು.---
ಕೋಟ್ಅಕ್ಟೋಬರ್ 15ರ ವರೆಗೆ ಇರುವುದರಿಂದ ಮತಕ್ಷೇತ್ರದಲ್ಲಿ 75 ಸಾವಿರಕ್ಕೂ ಹೆಚ್ಚು ಹೊಸ ಸದಸ್ಯರ ನೋಂದಣಿ ಮಾಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿ.
-ಡಾ.ವೀರಣ್ಣ ಚರಂತಿಮಠ ಮಾಜಿ ಶಾಸಕ