ಸಾರಾಂಶ
ಕನ್ನಡಪ್ರಭ ವಾರ್ತೆ ಬನ್ನೂರು ಪಟ್ಟಣದ ಸಮೀಪದ ಕಂಚನಹಳ್ಳಿಯ ಶ್ರೀ ಪ್ರಜ್ಞಾ ಗುರುಕುಲ ಶಿಕ್ಷಣ ಸಂಸ್ಥೆ ವತಿಯಿಂದ ಗುರುವಾರ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಿಸಿ, ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ನಡೆಯಿತು.ಸಂಸ್ಥೆಯ ಅಧ್ಯಕ್ಷ ಸಿದ್ದೇಗೌಡ ಮಾತನಾಡಿ, ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಪ್ರತಿವರ್ಷ ನಮ್ಮ ಶಾಲೆಯಲ್ಲಿ ಅಚರಣೆ ಮಾಡುವ ಮೂಲಕ ದೇಶದ ಸ್ವತಂತ್ರಕ್ಕಾಗಿ ಹೋರಾಟ ಮಾಡಿದಂತ ವೀರನಿಗೆ ನಮನ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರು ಅವರ ಅದರ್ಶವನ್ನು ಬೆಳಸಿಕೊಳ್ಳುವ ಮೂಲಕ ದೇಶ ಪ್ರೇಮ ಬೆಳಸಿಕೊಳ್ಳಬೇಕು ಎಂದು ಹೇಳಿದರು.ನಂತರ ಜಾಥಾ ಕಾರ್ಯಕ್ರಮಕ್ಕೆ ಸಿಪಿಐ ಮನೋಜ್ ಕುಮಾರ್, ಎಸ್ಐ ಕಾಶೀನಾಥ ಚಾಲನೆ ನೀಡಿದರು. ಪಟ್ಟಣದ ಬಸ್ ನಿಲ್ದಾಣದ ಸಮೀಪದ ಕೋದಂಡರಾಮ ದೇವಾಲಯದಿಂದ ಹೊರಟ ಜಾಥಾ, ತೇರಿನಬೀದಿ, ದೊಡ್ಡಂಗಡಿಬೀದಿ, ಎಸ್.ಆರ್.ಪಿ ರಸ್ತೆ, ಎಂ.ಎಂ. ರಸ್ತೆ ಮೂಲಕ ಸಾಗಿ ಬಸವೇಶ್ವರ ವೃತ್ತ ತಲುಪಿ ಜಯಘೋಷವನ್ನು ಕೂಗುವ ಮೂಲಕ ದೇಶ ಪ್ರೇಮಿಗೆ ಗೌರವ ವಂದನೆ ಸಲ್ಲಿಸಿದರು. ಪ್ರಾಂಶುಪಾಲ ಶಂಕರೇಗೌಡ, ಮುಖ್ಯಶಿಕ್ಷಕಿ ಗಗನ ಇದ್ದರು.