ಯಲ್ಲಾಪುರ: ತಾಲೂಕಿನ ಹಾಸಣಗಿ ಸೊಸೈಟಿ ಸಭಾಭವನದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘ ಜಿಲ್ಲಾ ಹಾಗೂ ತಾಲೂಕು ಘಟಕದ ಪದದೀಕ್ಷಾ ಸಮಾರಂಭವನ್ನು ಸಾವಿತ್ರಿಬಾಯಿ ಫುಲೆ ಸಂಘದ ರಾಷ್ಟ್ರೀಯ ಅಧ್ಯಕ್ಷೆ, ಧಾರವಾಡದ ಡಾ. ಲತಾ ಎಸ್. ಮುಳ್ಳೂರು ಅವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಸಂಘಟನೆಯನ್ನು ಕಷ್ಟಪಟ್ಟು ಮಾಡದೇ ಇಷ್ಟಪಟ್ಟು ಮಾಡಿದರೆ ಯಶಸ್ಸು ಸಾಧ್ಯ. ಸಮಾನತೆಗಾಗಿ ಮಹಿಳೆಯರ ಅಸ್ತಿತ್ವಕ್ಕಾಗಿ ಸಂಘಟನೆ ಹುಟ್ಟು ಹಾಕಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿ ಸಹಾಯವಾಣಿ ಸ್ಥಾಪಿಸಲಾಗಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಹಿತ್ಯಿಕವಾಗಿ ಜತೆಗೆ ಮಹಿಳಾ ದೌರ್ಜನ್ಯ, ಕಾನೂನು, ಆರೋಗ್ಯ ಅರಿವು ಹೀಗೆ ಹಲವು ನಿಟ್ಟಿನಲ್ಲಿ ಸಂಘ ಸಕ್ರಿಯವಾಗಿದೆ. ಇಡೀ ರಾಜ್ಯದ ಜತೆಗೆ ದೇಶದ ಹಲವೆಡೆ ಸಂಘಟನೆ ಮಾಡಲಾಗುತ್ತಿದೆ ಎಂದರು.ಜಿಲ್ಲಾಧ್ಯಕ್ಷೆ ಉಷಾ ವಿ. ನಾಯಕ ಅಧ್ಯಕ್ಷತೆ ವಹಿಸಿದ್ದರು. ವಿಶ್ವದರ್ಶನ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸುಬ್ರಾಯ ಬಿದ್ರೆಮನೆ, ಪತ್ರಕರ್ತ ಕೆ.ಎಸ್. ಭಟ್ಟ ಆನಗೋಡ, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ಪಟಗಾರ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜೇಯ ನಾಯ್ಕ ಮಾತನಾಡಿದರು. ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ, ಪ್ರಮುಖರಾದ ಅಜೇಯ ನಾಯಕ, ಸುರೇಶ ಗೌಡ, ನಂದನ ಬಾಳಗಿ, ವಿಶಾಲ ನಾಯಕ, ಶೋಭಾ ನಾಯಕ, ಜಯಶ್ರೀ ಆಚಾರಿ, ಗುರು ಭಟ್ಟ ಹಾಸಣಗಿ, ಸುವರ್ಣಲತಾ ಪಟಗಾರ, ಸಾವಿತ್ರಿ ಸಜ್ಜೇಶ್ವರ, ಕಲ್ಪನಾ, ನಿರ್ಮಲಾ ಭಾಗ್ವತ್, ಸುಧಾ ಭಟ್ಟ, ಸುಮನಾ ಹೆಗಡೆ, ನಾಗರತ್ನ ಸುಧಾರಾಣಿ ನಾಯ್ಕ ಸಿದ್ದಾಪುರ, ರಾಧಾ ಭಟ್ಟ ವಜ್ರಳ್ಳಿ ವಿವಿಧ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ನಾಗಶ್ರೀ ಭಟ್ಟ ಪ್ರಾರ್ಥಿಸಿದರು. ತಾಲೂಕು ಅಧ್ಯಕ್ಷೆ ಆಶಾ ಶೆಟ್ಟಿ ಶಿಕ್ಷಕ ಸತೀಶ ಶೆಟ್ಟಿ, ಕಲ್ಪನಾ ನಾಯ್ಕ ನಿರೂಪಿಸಿದರು. ಇದೇ ವೇಳೆ ನಯನಾ ಪಟಗಾರ ಉಮಚಗಿ ಶಿಷ್ಯರಿಂದ ಭರತನಾಟ್ಯ, ಸುಜಾತಾ ಸಿದ್ದಿ ತಂಡದಿಂದ ಡಮಾಮಿ ನೃತ್ಯ, ವಜ್ರಳ್ಳಿ ತಂಡದಿಂದ ಸ್ವಾಗತ ನೃತ್ಯ, ಸಮಾರಂಭಕ್ಕೆ ಕಳೆಕಟ್ಟಿತು.
ಸಂಘಟನೆ ಇಷ್ಟಪಟ್ಟು ಮಾಡಿದರೆ ಯಶಸ್ಸು: ಡಾ. ಲತಾ ಎಸ್. ಮುಳ್ಳೂರು
ಸಂಘಟನೆಯನ್ನು ಕಷ್ಟಪಟ್ಟು ಮಾಡದೇ ಇಷ್ಟಪಟ್ಟು ಮಾಡಿದರೆ ಯಶಸ್ಸು ಸಾಧ್ಯ. ಸಮಾನತೆಗಾಗಿ ಮಹಿಳೆಯರ ಅಸ್ತಿತ್ವಕ್ಕಾಗಿ ಸಂಘಟನೆ ಹುಟ್ಟು ಹಾಕಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿ ಸಹಾಯವಾಣಿ ಸ್ಥಾಪಿಸಲಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.