ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ವಿದ್ಯಾರ್ಥಿ ಜೀವನದಲ್ಲಿ ನಿರಂತರ ಅಧ್ಯಯನ ರೂಢಿಸಿಕೊಂಡರೆ ಸುಲಭವಾಗಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಅಮೇರಿಕಾದ ಹಾರ್ವ್‌ರ್ಡ್ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಹಾಗೂ ಸಂಶೋಧನಾರ್ಥಿ ವಿಶಾಲ ಯಳಮೇಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿವಿದ್ಯಾರ್ಥಿ ಜೀವನದಲ್ಲಿ ನಿರಂತರ ಅಧ್ಯಯನ ರೂಢಿಸಿಕೊಂಡರೆ ಸುಲಭವಾಗಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಅಮೇರಿಕಾದ ಹಾರ್ವ್‌ರ್ಡ್ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಹಾಗೂ ಸಂಶೋಧನಾರ್ಥಿ ವಿಶಾಲ ಯಳಮೇಲಿ ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ತಾಯಿ ತನ್ನ ಮಗುವನ್ನು ಗರ್ಭದಲ್ಲಿ ಒಂಬತ್ತು ತಿಂಗಳು ಇಟ್ಟುಕೊಳ್ಳುವ ಜೊತೆಗೆ ಮಗುವಿನ ಜೀವನ ಚೆನ್ನಾಗಿ ಇರಬೇಕೆಂದು ಜೀವನವನ್ನು ಮೇಣದ ಬತ್ತಿಯಂತೆ ಸವೆಸಿ ಬೆಳಕು ನೀಡುತ್ತಾಳೆ. ಹಾಗೆ ವಿದ್ಯಾರ್ಥಿಗಳು ಜೀವನದಲ್ಲಿ ಅಧ್ಯಯನದಲ್ಲಿ ಶ್ರಮವಹಿಸಿದರೆ ತಾವು ಸಾಧಕರಾಗಿ ಕಂಗೊಳಿಸುವದರಲ್ಲಿ ಎರಡು ಮಾತಿಲ್ಲ ಎಂದರು.
ವಿದ್ಯಾರ್ಥಿಗಳಿಗೆ ಡಾ.ಎಪಿಜೆ ಅಬ್ದುಲ್ ಕಲಾಂ, ಸರ್ ಎಂ.ವಿಶ್ವೇಶ್ವರಯ್ಯನಂತಹ ಸಾಧಕರು ಆದರ್ಶಪ್ರಾಯರಾಗಬೇಕಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ಚಿಕ್ಕ ಗ್ರಂಥಾಲಯ ಹೊಂದುವಂತಾಗಬೇಕು. ಇದರಿಂದ ತಮ್ಮ ಓದಿಗೆ ಪೂರಕವಾಗುತ್ತದೆ. ನಿರಂತರವಾಗಿ ಓದುವುದನ್ನು ರೂಢಿಸಿಕೊಂಡರೆ ಯಶಸ್ಸು ಪಡೆಸಲು ಸಾಧ್ಯ ಎಂದರು. ಪ್ರಾಚಾರ್ಯ ಆರ್.ಎ.ಪವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ, ಪ್ರೊ.ಎಂ.ಕೆ.ಯಾಧವ, ಪ್ರೊ.ಎಸ್.ಎಸ್.ನಾಯ್ಕೋಡಿ, ಎ.ಪಿ.ದಂಡಾವತಿ, ಎಂ.ಆರ್.ಮಮದಾಪುರ, ಎಲ್.ಡಿ.ಬ್ಯಾಡಗಿ, ಟಿ.ವೈ.ಮಣ್ಣೂರ, ಪಿ.ಜಿ.ಪಾಟೀಲ, ವ್ಹಿ.ಎನ್.ರಜಪೂತ, ಸೊಹೆಲ್ ಮುಲ್ಲಾ ಇತರರು ಇದ್ದರು. ಸ್ವಾತಿ ಬಂಗಾರಿ, ಸೃಷ್ಟಿ ಹಂಗರಗಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಒಳಾಂಗಣ ಕ್ರೀಡೆಗಳನ್ನು ಆಯೋಜಿಸಿ ಕ್ರೀಡೆಯಲ್ಲಿ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಿದರು.