ಸಾರಾಂಶ
ಶಾಲೆ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಯ್ದುಕೊಂಡ ಅವರು ಅನಾರೋಗ್ಯದ ಕಾರಣ ನಮ್ಮಿಂದ ಕೆಲ ತಿಂಗಳ ಹಿಂದೆ ದೂರಾಗಿದ್ದಾರೆ. ಶಾಲಾ ರಂಗ ಮಂದಿರಕ್ಕೆ ‘ಶ್ರೀನಿವಾಸ್ ರಂಗಮಂದಿರ’ ಎಂದು ಹೆಸರಿಟ್ಟು ಅವರ ಸಾಧನೆಯನ್ನು ಸ್ಮರಿಸುವಂತಾಗಲಿ.
ಕನ್ನಡಪ್ರಭ ವಾರ್ತೆ ಹಲಗೂರು
ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ. ಪೋಷಕರ ಕನಸು ನನಸು ಮಾಡಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ವಸತಿ ಶಿಕ್ಷಣ ಸಂಘದ ಜಿಲ್ಲಾ ಸಮನ್ವಯಾಧಿಕಾರಿ ಅವಿನಾಶ್ ತಿಳಿಸಿದರು.ಬ್ಯಾಡರಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಗುರುವಂದನಾ ಮತ್ತು ಪ್ರಾಂಶುಪಾಲ ಶ್ರೀನಿವಾಸ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ ಪ್ರಾಂಶುಪಾಲರಾಗಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್ ಅವರನ್ನು ಕಳೆದುಕೊಂಡಿದ್ದು ಶಾಲೆಗೆ ನಿಜಕ್ಕೂ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಆರಂಭದಲ್ಲಿ ಪೋಷಕರ ಸಹಕಾರದೊಂದಿಗೆ ಹಲವಾರು ಮೂಲ ಸೌಕರ್ಯ ಒದಗಿಸುವಲ್ಲಿ ಶ್ರೀನಿವಾಸ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಶಾಲೆ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಯ್ದುಕೊಂಡ ಅವರು ಅನಾರೋಗ್ಯದ ಕಾರಣ ನಮ್ಮಿಂದ ಕೆಲ ತಿಂಗಳ ಹಿಂದೆ ದೂರಾಗಿದ್ದಾರೆ. ಶಾಲಾ ರಂಗ ಮಂದಿರಕ್ಕೆ ‘ಶ್ರೀನಿವಾಸ್ ರಂಗಮಂದಿರ’ ಎಂದು ಹೆಸರಿಟ್ಟು ಅವರ ಸಾಧನೆಯನ್ನು ಸ್ಮರಿಸುವಂತಾಗಲಿ ಎಂದರು.ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕರಾದ ಪುಟ್ಟಸ್ವಾಮಿ, ಪಾರ್ವತಿ, ಹೇಮಾವತಿ ತಿಪ್ಪೇಸ್ವಾಮಿ, ನವಾಜ್, ರಾಜಮ್ಮ, ಪವಿತ್ರ, ಪ್ರಭಾವತಿ, ರೇಖಾ, ಅವಿನಾಶ್, ಶಿಲ್ಪಾ, ಪರಶಿವಮೂರ್ತಿ, ಆಶಾ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಮೂಹ ನೃತ್ಯ, ಪೂಜಾ ಕುಣಿತ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ವೇಳೆ ದಳವಾಯಿ ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಉದಯ್ ಕುಮಾರ್, ಗ್ರಾಪಂ ಸದಸ್ಯ ಬಿ.ಡಿ.ರಾಜೇಂದ್ರ, ಅಂಕನಹಳ್ಳಿ ಪುಟ್ಟಸ್ವಾಮಿ, ಪೋಷಕ ಸಮಿತಿ ಸದಸ್ಯರಾದ ಸಂಪತ್ ಕುಮಾರ್, ದುಗ್ಗನಹಳ್ಳಿ ಸುರೇಶ್, ಪ್ರಾಂಶುಪಾಲರಾದ ಸತೀಶ್, ಅನಿಲ್ ಕುಮಾರ್, ಸುರೇಶ್, ಶಿಕ್ಷಕರಾದ ವಿಜಯ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.