ಸಿಎಂ ಭೇಟಿಯಾದ ಸುರಪುರ ಶಾಸಕ ಆರ್‌ವಿಎನ್‌

| Published : Sep 13 2025, 02:04 AM IST

ಸಾರಾಂಶ

Surapura MLA RVN meets CM

- ಒಳಚರಂಡಿ ಕಾಮಗಾರಿಗೆ ಅನುದಾನ: ಸಿಎಂಗೆ ಮನವಿಯಾದಗಿರಿ: ನಗರದ 2ನೇ ಹಂತದ ಒಳಚರಂಡಿ ಯೋಜನೆ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಜಿಲ್ಲೆಯ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಬೆಂಗಳೂರಿನಲ್ಲಿ ಈ ಸಂಬಂಧ ಸಿಎಂ ಅವರನ್ನು ಭೇಟಿಯಾದ ಅವರು, ಸುರಪುರ ನಗರದ 2ನೇ ಹಂತದ ಒಳಚರಂಡಿ ಯೋಜನೆಗೆ 241.70 ಕೋಟಿ ರು.ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಕೋರಿದರು. ತಕ್ಷಣ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆಯ ಭರವಸೆ ನೀಡಿದರು. ಅದೇ ರೀತಿ ಅಲ್ಲಿಯೇ ಇದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಕೂಡ ಅನುಮೋದನೆ ನೀಡುವುದಾಗಿ ಶಾಸಕ ಆರ್‌ವಿಎನ್‌ಗೆ ತಿಳಿಸಿದರು.

-

12ವೈಡಿಆರ್‌9 : ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಮಗಾರಿಯ ಅನುಮೋದನೆಗಾಗಿ ಮನವಿ ಮಾಡಿದರು.