ಪರಿಸರದ ಬಗ್ಗೆ ಯೋಚಿಸುವಂತೆ ಮಾಡಿದ ತೇಜಸ್ವಿ: ನರೇಂದ್ರ ರೈ ದೇರ್ಲ

| Published : Mar 26 2025, 01:31 AM IST

ಪರಿಸರದ ಬಗ್ಗೆ ಯೋಚಿಸುವಂತೆ ಮಾಡಿದ ತೇಜಸ್ವಿ: ನರೇಂದ್ರ ರೈ ದೇರ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗವು ಪದವಿ ಕನ್ನಡ ಪಠ್ಯಗಳಿಗೆ ಪೂರಕವಾಗಿ ಏರ್ಪಡಿಸಿದ್ದ ‘ತೇಜಸ್ವಿ ಬರಹಗಳ ಅವಲೋಕನ’ ವಿಶೇಷ ಉಪನ್ಯಾಸದ ಸಂಪನ್ಮೂಲ ವ್ಯಕ್ತಿಯಾಗಿ ಲೇಖಕ, ನಿವೃತ್ತ ಕನ್ನಡ ಉಪನ್ಯಾಸಕ ಡಾ. ನರೇಂದ್ರ ರೈ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಮಣ್ಣು, ನೀರು, ಗಾಳಿ, ಕಾಡು ಈ ಬಗ್ಗೆ ಬರೆದು ಈ ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡಿದ ಕನ್ನಡ ಲೇಖಕರಲ್ಲಿ ಪೂರ್ಣಚಂದ್ರ ತೇಜಸ್ವಿ ಅಗ್ರಗಣ್ಯರು ಎಂದು ಲೇಖಕ, ನಿವೃತ್ತ ಕನ್ನಡ ಉಪನ್ಯಾಸಕ ಡಾ. ನರೇಂದ್ರ ರೈ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗವು ಪದವಿ ಕನ್ನಡ ಪಠ್ಯಗಳಿಗೆ ಪೂರಕವಾಗಿ ಏರ್ಪಡಿಸಿದ್ದ ‘ತೇಜಸ್ವಿ ಬರಹಗಳ ಅವಲೋಕನ’ ವಿಶೇಷ ಉಪನ್ಯಾಸದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು.

ಕಥೆ, ಕಾದಂಬರಿ, ನಾಟಕ ಮೊದಲಾದವು ತಮ್ಮ ತಲೆಯಲ್ಲಿ ಬರುವ ಕೆನೆ ಪದರದ ರೂಪಗಳಷ್ಟೆ. ಬದುಕಿಗೆ ಅನ್ನ, ನೀರು, ಗಾಳಿ ಇವು ಚೆನ್ನಾಗಿರಬೇಕೆಂಬ ಚಿಂತನೆ ತೇಜಸ್ವಿಯವರದಾಗಿತ್ತು. ಈ ಕಾರಣದಿಂದ ಅರಾಜಕ ಕಾಡನ್ನು ತೇಜಸ್ವಿ ಶೋಧಿಸಿದರು. ಭಾರತವನ್ನು ಡೆಲ್ಲಿಯಿಂದಲ್ಲ ಹಳ್ಳಿಯಿಂದ ನೋಡಬೇಕೆಂಬ ಆಲೋಚನೆ ತೇಜಸ್ವಿಯವರದಾಗಿತ್ತು. ಅವರ ಸಾಹಿತ್ಯ ಇದರ ಪ್ರತಿಬಿಂಬ ಎಂದವರು ಹೇಳಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ ಸ್ವಾಗತಿಸಿದರು. ಉಪನ್ಯಾಸಕ ಡಾ. ನಾಗರಾಜ ಜಿ. ಪಿ. ಧನ್ಯವಾದವಿತ್ತರು. ಕಾರ್ಯಕ್ರಮ ಸಂಯೋಜಕ ಡಾ. ಸತೀಶ್ ನಿರೂಪಿಸಿದರು. ಡಾ. ಶಿವಕುಮಾರ ಅಳಗೋಡು ಉಪಸ್ಥಿತರಿದ್ದರು.