ಸರ್ಕಾರಕ್ಕೆ ಗೋ ಮಾತೆಯ ಶಾಪ ತಟ್ಟದೆ ಬಿಡಲ್ಲ

| Published : Jan 17 2025, 12:46 AM IST

ಸಾರಾಂಶ

ಶಿವಮೊಗ್ಗ: ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕಟ್ ಮಾಡಿದ ಕಿಡಿಕೇಡಿಗಳ ವಿರುದ್ಧ ಶಿವಮೊಗ್ಗದಲ್ಲಿ ರಾಷ್ಟ್ರಭಕ್ತ ಬಳಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ, ಗೋ ಮಾತೆಯ ಕೆಚ್ಚಲು ಕಟ್ ಮಾಡಿದ್ದಾರೋ ಅದು ಒಬ್ಬ ವ್ಯಕ್ತಿಯ ಪ್ರಯತ್ನ ಅಲ್ಲ, ನೀವು ಗೋ ಮುಟ್ಟಿದ್ದೀರಾ ಈ ಶಾಪದಿಂದ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದ ಅವರು, ಗೋಮಾತೆಗೆ ನಡೆದ ಅಪಮಾನ ನಮ್ಮೆಲ್ಲರಿಗೂ ಆದ ಅಪಮಾನ. ಕಾಂಗ್ರೆಸ್ ನವರು ಯಾರೂ ಗೋ ಮಾತೆಯ ಕೆಚ್ಚಲು ಕಟ್ ಮಾಡಿರುವವರ ವಿರುದ್ಧ ಮಾತಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಾವು ಹಿಂದು ಎನ್ನುತ್ತಾರೆ. ತಾವು ಹಿಂದೂ ಆಗಿದ್ದರೆ, ಗೋಮಾತೆಯನ್ನು ಹಿಂಸಿಸಿದವರಿಗೆ ಕಠಿಣ ಶಿಕ್ಷೆ ಕೊಡಿಸಲಿ ಎಂದು ಆಗ್ರಹಿಸಿದ ಅವರು, ಈ ಸರ್ಕಾರಕ್ಕೆ ಗೋ ಮಾತೆಯ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಹರಿಹಾಯ್ದರು.

ಗೋ ಮಾತೆಯ ಶಾಪ ತಟ್ಟಿದ್ದರೆ ನೀವು ಇಬ್ಬರು ಮುಖ್ಯಮಂತ್ರಿ ಆಗಲ್ಲ, ಬೇರೆ ಯಾರೋ ಬಂದು ಮುಖ್ಯಮಂತ್ರಿ ಆಗ್ತಾರೆ, ಹಂತಕರಿಗೆ ಶಿಕ್ಷೆ ಕೊಡಿಸಿ ಆಗ ನಿಮ್ಮ ಮೈಯಲ್ಲಿ ಹಿಂದೂ ರಕ್ತ ಹರಿಯುತ್ತಿದೆ ಅಂತ ಗೊತ್ತಾಗುತ್ತೆ ಎಂದು ಸಿಎಂ ಹಾಗೂ ಡಿಸಿಎಂ ಗೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಮಹಾಲಿಂಗಯ್ಯ ಶಾಸ್ತ್ರಿ, ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್‌ ಸೇರಿದಂತೆ ಹಲವರು ಇದ್ದರು.