ಕಲಿಕಾ ಹಬ್ಬದ ಮೂಲಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವುದು ಹಾಗೂ ಪುಸ್ತಕದ ಹೊರೆಯನ್ನು ಕಡಿಮೆ ಮಾಡಿ ಚಟುವಟಿಕೆಗಳ ಮೂಲಕ ಮೂಲಶಿಕ್ಷಣ ಮತ್ತು ಸಂಖ್ಯಾಗಣಿತ ಕಲಿಕೆಯ ಸುಲಭ ಮಾರ್ಗಗಳನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಕಲಿಕ ಹಬ್ಬದ ಗುರಿಯಾಗಿದೆ ಎಂದು ಉಪ ಪ್ರಾಂಶುಪಾಲರಾದ ಚಂದ್ರಪ್ಪ ಕರಿಭೀಮಣ್ಣ ತಿಳಿಸಿದರು. ಬಸವಾಪಟ್ಟಣ ಕಸ್ಟರ್ ಮಟ್ಟದ ಕಲಿಕಾ ಹಬ್ಬ ಮತ್ತು ವಿವೇಕಾನಂದರ ಜ್ಞಾನದಿನದ ಅಂಗವಾಗಿ ನೆಡೆದ ರಾಷ್ಟ್ರೀಯ ಯುವದಿನದ ಮಹತ್ವದ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಕಲಿಕಾ ಹಬ್ಬವು ಶಾಲೆಗಳಲ್ಲಿ ಮಕ್ಕಳ ಪ್ರತಿಭೆ ಹೊರತರಲು ಒಂದು ವೇದಿಕೆಯಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಕಲಿಕಾ ಹಬ್ಬದ ಮೂಲಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವುದು ಹಾಗೂ ಪುಸ್ತಕದ ಹೊರೆಯನ್ನು ಕಡಿಮೆ ಮಾಡಿ ಚಟುವಟಿಕೆಗಳ ಮೂಲಕ ಮೂಲಶಿಕ್ಷಣ ಮತ್ತು ಸಂಖ್ಯಾಗಣಿತ ಕಲಿಕೆಯ ಸುಲಭ ಮಾರ್ಗಗಳನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಕಲಿಕ ಹಬ್ಬದ ಗುರಿಯಾಗಿದೆ ಎಂದು ಉಪ ಪ್ರಾಂಶುಪಾಲರಾದ ಚಂದ್ರಪ್ಪ ಕರಿಭೀಮಣ್ಣ ತಿಳಿಸಿದರು.ಅವರು ಬಸವಾಪಟ್ಟಣ ಕಿ.ಪಿ.ಎಸ್ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿದ ಬಸವಾಪಟ್ಟಣ ಕಸ್ಟರ್ ಮಟ್ಟದ ಕಲಿಕಾ ಹಬ್ಬ ಮತ್ತು ವಿವೇಕಾನಂದರ ಜ್ಞಾನದಿನದ ಅಂಗವಾಗಿ ನೆಡೆದ ರಾಷ್ಟ್ರೀಯ ಯುವದಿನದ ಮಹತ್ವದ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಕಲಿಕಾ ಹಬ್ಬವು ಶಾಲೆಗಳಲ್ಲಿ ಮಕ್ಕಳ ಪ್ರತಿಭೆ ಹೊರತರಲು ಒಂದು ವೇದಿಕೆಯಾಗಿದೆ ಎಂದು ತಿಳಿಸಿದರು.ಇದೇ ವೇಳೆ ಬಸವಾಪಟ್ಟಣ ಗ್ರಾಮ ಪಂಚಾಯ್ತಿ ಅಬಿವೃದ್ದಿ ಅಧಿಕಾರಿಗಳಾದ ಮಂಜುನಾಥ ಅವರು, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಎಲ್ಲಾ ಸ್ಪರ್ಧೆಗಳಲ್ಲಿ ಸೋಲು ಗೆಲವು ಇದ್ದೆಇರುತ್ತದೆ. ಸೋಲನ್ನು ಸ್ವೀಕರಿಸಿ ಗೆಲುವಿಗೆ ಸೋಪಾನ ಮಾಡಿಕೊಳ್ಳಬೇಕು. ಎಲ್ಲೂ ಹತಶರಾಗದೆ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಸವಾಪಟ್ಟಣ ಗ್ರಾಮ ಪಂಚಾಯ್ತಿ ಅದ್ಯಕ್ಷರಾದ ರಾಶೇಖರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಬಸವಾಪಟ್ಟಣ ಗ್ರಾಮ ಪಂಚಾಯ್ತಿ ಮಾಜಿ ಅದ್ಯಕ್ಷರಾದ ಬಿ ವಿ ಮಹೇಂದ್ರಕುಮಾರ್ , ಶಿಕ್ಷಣ ಇಲಾಖೆಯ ಮಲ್ಲಿಕಾರ್ಜುನ, ಕೇಶವಮೂರ್ತಿ, ಮಂಜೇಗೌಡ ಸೇರಿದಂತೆ ಹಲವರು ಕಲಿಕಹಬ್ಬ ಮತ್ತು ರಾಷ್ಟ್ರೀಯ ಯುವದಿನದ

ಮಹತ್ವದ ಬಗ್ಗೆ ತಿಳಿಸಿದರು. ಗ್ರಾಪಂ ಉಪಾಧ್ಯಕ್ಷರಾದ ಬಿ ಜೆ ಕುಮಾರ್, ಕೆ.ಪಿ ಎಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ, ತಾಲೂಕು ಶಿಕ್ಷಣ ಸಂಘದ ಪದಾಧಿಕಾರಿಗಳು, ಬಸವಾಪಟ್ದಣ ಕ್ಲಸ್ಟರ್‌ನ 9 ಶಾಲೆಗಳು ಭಾಗವಹಿಸಿದ್ದವು. ಬಸವಾಪಟ್ಟಣ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ವಿಶ್ವೇಶ್ವರಯ್ಯ ಸ್ವಾಗತಿಸಿದರು. ಶಿಕ್ಷಕ ಗಿಡ್ಡೆಗೌಡ ಕಾರ್ಯಕ್ರಮ ನಿರೂಪಿಸಿದರು.