ಒತ್ತಡದ ನಡುವೆಯೂ ಉತ್ತಮ ಶಿಕ್ಷಣ ನೀಡಬೇಕಾದ ಸ್ಥಿತಿ

| Published : Mar 25 2025, 12:47 AM IST

ಸಾರಾಂಶ

ಸರ್ಕಾರದ ಹಲವಾರು ಒತ್ತಡಗಳ ನಡುವೆಯೂ ಉತ್ತಮ ಶಿಕ್ಷಣ ನೀಡಬೇಕಾದ ಪರಿಸ್ಥಿತಿ ಶಿಕ್ಷಕರ ಮೇಲಿದೆ. ಹೀಗಾಗಿ ಪ್ರಾಥಮಿಕ ಶಾಲೆ ಶಿಕ್ಷಕರ (1 ರಿಂದ 5) ಸಮಸ್ಯೆಯನ್ನು ಸುಗ್ರೀವಾಜ್ಞೆಯ ಮೂಲಕವಾದರೂ ಪರಿಹರಿಸಿಕೊಳ್ಳಲು ಪ್ರಯತ್ನಿಸುವುದಾಗಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಬಾಗ

ಸರ್ಕಾರದ ಹಲವಾರು ಒತ್ತಡಗಳ ನಡುವೆಯೂ ಉತ್ತಮ ಶಿಕ್ಷಣ ನೀಡಬೇಕಾದ ಪರಿಸ್ಥಿತಿ ಶಿಕ್ಷಕರ ಮೇಲಿದೆ. ಹೀಗಾಗಿ ಪ್ರಾಥಮಿಕ ಶಾಲೆ ಶಿಕ್ಷಕರ (1 ರಿಂದ 5) ಸಮಸ್ಯೆಯನ್ನು ಸುಗ್ರೀವಾಜ್ಞೆಯ ಮೂಲಕವಾದರೂ ಪರಿಹರಿಸಿಕೊಳ್ಳಲು ಪ್ರಯತ್ನಿಸುವುದಾಗಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಹೇಳಿದರು.

ತಾಲೂಕಿನ ಹಾರೂಗೇರಿ ಪಟ್ಟಣದ ಕಾಳಿಕಾ ದೇವಸ್ಥಾನ ಸಭಾಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ತಾಲೂಕು ಘಟಕ ರಾಯಬಾಗ ಹಮ್ಮಿಕೊಂಡ ದಶಮಾನೋತ್ಸವ ಸಂಭ್ರಮ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತವಾಗಿ ಅಕ್ಷರದವ್ವ ಮತ್ತು ಅಕ್ಷರ ಸಾರಥಿ, ಅಕ್ಷರ ಸಿರಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ, ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಪವಿತ್ರವಾದದ್ದು. ನಮ್ಮನ್ನು ನಮ್ಮ ಕುಟುಂಬ ಮರೆತರೂ ನಮ್ಮ ವಿದ್ಯಾರ್ಥಿ ಬಳಗ ಯಾವತ್ತೂ ಮರೆಯುವುದಿಲ್ಲ. ಶಿಕ್ಷಕ ವೃತ್ತಿ ಪಾಠ ಬೋಧನೆಗೆ ಮಾತ್ರ ಇರದೆ ಸರ್ಕಾರದ ಬೇರೆ ಬೇರೆ ಯೋಜನೆಗಳ ಅನುಷ್ಠಾನವನ್ನು ಕೂಡ ಒತ್ತಡದಲ್ಲಿ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಶಿಕ್ಷಣ ನೀಡಬೇಕಾದ ಪರಿಸ್ಥಿತಿ ಈಗ ಉದ್ಭವವಾಗಿದೆ. ಇಂತಹ ಕಾರ್ಯ ಮಾಡುತ್ತಿರುವ ಶಿಕ್ಷಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂಘದ ಉತ್ತಮ ಕೆಲಸವಾಗಿದೆ. ಈಗಿನ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಹಳೆಯ ಪಿಂಚನೆ ಯೋಜನೆಯನ್ನು ಜಾರಿಗೆ ತರುವ ವಿಶ್ವಾಸವಿದೆ ಎಂದರು.ಜಿಲ್ಲಾಧ್ಯಕ್ಷ ಎಸ್.ಎಂ.ಲೋಕನ್ನವರ ಮಾತನಾಡಿ, ಸಂಘವು ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಶಿಕ್ಷಕರ ಸೇವೆಯನ್ನು ಮಾಡಲು ಸದಾ ಸಜ್ಜಾಗಿರುತ್ತದೆ ಎಂದು ಭರವಸೆ ನೀಡಿದರು.ಹುಕ್ಕೆರಿ ಬಿಇಒ ಪ್ರತಿಭಾ ಪಾಟೀಲ ಮಾತನಾಡಿ, ಇತಿಹಾಸ ಕಾಲದಿಂದಲೂ ಮಹಿಳೆ ಯಾವಾಗಲೂ ಪುರುಷ ಸಮಾನವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾಳೆ. ಅಕ್ಕಮಹಾದೇವಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ, ಇತ್ತೀಚೆಗೆ ಹಲವಾರೂ ಮಹಿಳೆಯರು ಪುರುಷ ಸಮಾನರಾಗಿ ಕೆಲಸ ಮಾಡಿ, 9 ತಿಂಗಳವರೆಗೆ ಬಾಹ್ಯಾಕಾಶ ಅಧ್ಯಯನ ಮಾಡಿದ ಸುನಿತಾ ವಿಲಿಯಮ್ಸ್‌ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.ರಾಯಬಾಗ ಬಿಇಒ ಬಸವರಾಜಪ್ಪ.ಆರ್ ಮಾತನಾಡಿ, ಪ್ರಶಸ್ತಿಗಳು ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ. ನಮ್ಮ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿರಬೇಕು ಎಂದು ತಿಳಿಸಿದರು. ರಾಯಬಾಗ ಘಟಕದ ಅಧ್ಯಕ್ಷ ವಿಷ್ಣು ಅರಗೆ ಮಾತನಾಡಿ, ಸಂಘವು ಪ್ರಾಮಾಣಿಕವಾಗಿ ಭ್ರಷ್ಟಾಚಾರ ರಹಿತವಾಗಿ ಶಿಕ್ಷಕರ ಸೇವೆ ಮಾಡುತ್ತಿದೆ. ನಿಮ್ಮಲ್ಲರ ಪ್ರೀತಿ ವಿಸ್ವಾಸಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದರು.ಸಿದ್ದೇಶ್ವರ ಮಹಾಸ್ವಾಮಿಗಳು, ಮೈಲಾರ ಲಿಂಗೇಶ್ವರ ದೇವಸ್ಥಾನ ಸಿದ್ದೇಸ್ವರ ಆಶ್ರಮ ಇಟನಾಳ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಕಾರ್ಯದರ್ಶಿ ವೈ.ಎಸ್.ಬುಡ್ಡಗೋಳ, ಜಿ.ಎಂ.ಹಿರೇಮಠ, ಬಿ.ಎನ್.ಕಾಂಬಳೆ, ತಾಲೂಕು ಅಧ್ಯಕ್ಷ ಉಮೇಶ ಪೋಳ, ಎಂ.ಬಿ.ಬಡಿಗೇರ, ಪ್ರತಾಪ ಜೋಡಟ್ಟಿ, ಉಮೇಶ ಜಾದವ, ಎನ್.ಜಿ.ಪಾಟೀಲ್, ವಿ.ಡಿ.ಬಡಿಗೇರ, ಶೀಲಾ ಚೌಗಲಾ, ಅಕ್ಷರದವ್ವ ಮತ್ತು ಅಕ್ಷರ ಸಾರಥಿ ಹಾಗೂ ಅಕ್ಷರ ಸಿರಿ ಪ್ರಶಸ್ತಿ ಪುರಸ್ಕೃತರು, ರಾಯಮಾನೆ ಸಿದಗೌಡ ಪಾಟೀಲ, ಸುಭಾಷ ಬಡಿಗೇರ, ಬಸವರಾಜ ಕಸೆಟ್ಟಿ ಉಪಸ್ಥಿತರಿದ್ದರು. ಶಾರದಾ.ಬಿ.ಎಲ್ ನಿರೂಪಿಸಿದರು. ಶ್ರೀಧರ ಚೌಗಲಾ ಮಾತನಾಡಿದರು.