ಸೂಪರ್ ಬೈಕ್ ರ್ಯಾಲಿಯೊಂದಿಗೆ ಮೊದಲ ವಾರ್ಷಿಕೋತ್ಸವ

| Published : Sep 09 2025, 01:00 AM IST

ಸೂಪರ್ ಬೈಕ್ ರ್ಯಾಲಿಯೊಂದಿಗೆ ಮೊದಲ ವಾರ್ಷಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಐಬಿಸ್ ಸ್ಟೈಲ್ಸ್ ಮೈಸೂರಿನಲ್ಲಿ ರೈಡರ್ ಗಳು, ಹೋಟೆಲ್ ಸಿಬ್ಬಂದಿ ಮತ್ತು ಅತಿಥಿಗಳನ್ನು ಒಗ್ಗೂಡುವುದರೊಂದಿಗೆ ಆರಂಭಗೊಂಡವು.

- ಐಬಿಸ್ ಸ್ಟೈಲ್ಸ್ ಮೈಸೂರು

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಐಬಿಸ್ ಸ್ಟೈಲ್ಸ್ ತನ್ನ ಮೊದಲ ವಾರ್ಷಿಕೋತ್ಸವವನ್ನು ನಗರದ ಚೈತನ್ಯ ಮತ್ತು ಹೋಟೆಲ್ ನ ವಿಶಿಷ್ಟ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಭವ್ಯ ಬೈಕ್‌ ರ್ಯಾಲಿಯೊಂದಿಗೆ ಆಯೋಜಿಸಿತ್ತು.

ಈ ಮೈಲಿಗಲ್ಲನ್ನು ಗೌರವಿಸಲು, 2018 ರಲ್ಲಿ ಸ್ಥಾಪನೆಯಾದ ಮತ್ತು 200ಕ್ಕೂ ಹೆಚ್ಚು ಸೂಪರ್ ಬೈಕ್ ಉತ್ಸಾಹಿಗಳನ್ನು ಒಳಗೊಂಡ ಬೆಂಗಳೂರು ಮೂಲದ ಸಮುದಾಯವಾದ ಸ್ಪೆಷಲ್ ಇನಿಶಿಯೇಟಿವ್ ರೈಡರ್ಸ್ ಸಹಭಾಗಿತ್ವದಲ್ಲಿ ಹೋಟೆಲ್ ಉತ್ಸಾಹಭರಿತ ಸೂಪರ್ ಬೈಕ್ ರ್ಯಾಲಿ ಆಯೋಜಿಸಿತ್ತು.

ಐಬಿಸ್ ಸ್ಟೈಲ್ಸ್ ಮೈಸೂರಿನಲ್ಲಿ ರೈಡರ್ ಗಳು, ಹೋಟೆಲ್ ಸಿಬ್ಬಂದಿ ಮತ್ತು ಅತಿಥಿಗಳನ್ನು ಒಗ್ಗೂಡುವುದರೊಂದಿಗೆ ಆರಂಭಗೊಂಡವು. ಸಮಾರಂಭದಲ್ಲಿ ಉಪಾಹಾರ, ಆಸಕ್ತಿದಾಯಕ ಸಂವಾದ ಮತ್ತು ಎಲ್ಲರನ್ನೂ ಒಗ್ಗೂಡಿಸಿದ ಹಬ್ಬದ ವಾತಾವರಣದಿಂದಾಗಿ ಇಡೀ ಪರಿಸರವು ಉತ್ಸಾಹದಿಂದ ಕೂಡಿತ್ತು. ಬೆಳಗ್ಗೆ 9ಕ್ಕೆ ರ್ಯಾಲಿಗೆ ಚಾಲನೆ ನೀಡಲಾಯಿತು. ಇಂಜಿನ್ ಗಳ ಗರ್ಜನೆಯು ವಾತಾವರಣವನ್ನು ತುಂಬಿ, ಸಾಹಸ ಮತ್ತು ಒಗ್ಗಟ್ಟಿನ ದಿನಕ್ಕೆ ನಾಂದಿ ಹಾಡಿತು.

ಈ ರ್ಯಾಲಿಯು ಜವಾಬ್ದಾರಿಯುತ ಸವಾರಿಯ ಮಹತ್ವವನ್ನು ತಿಳಿಸಿಕೊಟ್ಟಿತು. ರಸ್ತೆ ಸುರಕ್ಷತೆ, ಸುರಕ್ಷಿತ ಸವಾರಿ ಪದ್ಧತಿ, ಜಾಗೃತಿ ಮತ್ತು ರಸ್ತೆಗಳಲ್ಲಿ ಪರಸ್ಪರ ಗೌರವ ಉತ್ತೇಜಿಸಿತು. ಬೈಕ್ ರ್ಯಾಲಿಯ ಮಾರ್ಗವು ರೈಲು ವಸ್ತು ಸಂಗ್ರಹಾಲಯ, ಮೈಸೂರು ಅರಮನೆ, ಚಾಮುಂಡಿ ಬೆಟ್ಟ ಮತ್ತು ಲಲಿತ್ ಮಹಲ್ ಸೇರಿದಂತೆ ಮೈಸೂರಿನ ಕೆಲವು ಪ್ರತಿಷ್ಠಿತ ಹೆಗ್ಗುರುತುಗಳ ಮೂಲಕ ಸವಾರರನ್ನು ಕರೆದೊಯ್ದು ಈ ಅನುಭವವನ್ನು ಸುಂದರ ಮತ್ತು ಸ್ಮರಣೀಯವಾಗಿಸಿತು.

ಈ ಕುರಿತು ಮಾತನಾಡಿದ ಐಬಿಸ್ ಸ್ಟೈಲ್ಸ್ ಮೈಸೂರಿನ ವ್ಯವಸ್ಥಾಪಕ ಗಣೇಶರಾಮ್ ಅಯ್ಯರ್, ಮೈಸೂರಿನಲ್ಲಿ ಒಂದು ವರ್ಷ ಪೂರ್ಣಗೊಳಿಸಿರುವುದು ನಿಜವಾಗಿಯೂ ವಿಶೇಷ. ತನ್ನ ಅನನ್ಯ ಪರಂಪರೆ ಮತ್ತು ಬೆಳೆಯುತ್ತಿರುವ ಆತಿಥ್ಯ ಉದ್ಯಮದೊಂದಿಗೆ ಈ ನಗರವು ನಮ್ಮನ್ನು ಪೂರ್ಣ ಹೃದಯದಿಂದ ಸ್ವಾಗತಿಸಿದೆ. ಸ್ಪೆಷಲ್ ಇನಿಶಿಯೇಟಿವ್ ರೈಡರ್ಸ್ ಸಹಯೋಗದೊಂದಿಗೆ ಈ ಸೂಪರ್ ಬೈಕ್ ರ್ಯಾಲಿಯನ್ನು ಆಯೋಜಿಸಿರುವುದು, ಸಂಪ್ರದಾಯ ಮತ್ತು ಆಧುನಿಕತೆಗಳು ಸೇರಿಸುತ್ತದೆ ಎಂದರು.

ಬೆಂಗಳೂರಿನ ಸ್ಪೆಷಲ್ ಇನಿಶಿಯೇಟಿವ್ ರೈಡರ್ಸ್ ಸಂಸ್ಥಾಪಕ ಡಿ. ಗಣೇಶ್ ಪ್ರಸಾದ್ ಮಾತನಾಡಿ, ಈ ವಾರ್ಷಿಕೋತ್ಸವದ ರ್ಯಾಲಿಗಾಗಿ ಐಬಿಸ್ ಸ್ಟೈಲ್ಸ್ ಮೈಸೂರು ಜೊತೆಗಿನ ನಮ್ಮ ಸಹಯೋಗವು ಒಂದು ಸ್ಮರಣೀಯ ಅನುಭವ ನೀಡುತ್ತಿದೆ ಎಂದರು.