ಸಾರಾಂಶ
ಅಧಿಕಾರಿಗಳು ಸ್ಥಳಕ್ಕೆ ಹೋಗಿ ಸರ್ವೆ ಮಾಡಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
ಉಡುಪಿ: ರಾಜ್ಯಾದ್ಯಂತ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಹಿಂದಿನ ವರ್ಷಗಳಿಗಿಂತಲೂ ಈ ಬಾರಿ ಭಾರಿ ಮಳೆಯಾಗಿದೆ. ಆದರೆ ಅತೀವೃಷ್ಟಿಯಿಂದ ಹಾನಿಗೊಳಗಾದ ಕೃಷಿ ಭೂಮಿ ಪ್ರಮಾಣವನ್ನು ಅಧಿಕಾರಿಗಳು ಕಡಿಮೆ ಹೇಳುತಿದ್ದಾರೆ. ಆದ್ದರಿಂದ ಅಧಿಕಾರಿಗಳು ಮತ್ತೇ ಸರ್ವೆ ನಡೆಸಿ ಸರಿಯಾದ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.ಅವರು ಶುಕ್ರವಾರ ಜಿಲ್ಲಾ ಕೆಡಿಪಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುಡಿದರು. ಕಳೆದ ವರ್ಷ ಮಳೆಯಿಂದ ಸುಮಾರು 2300 ಹೆಕ್ಟೇರ್ ಕೃಷಿ ಹಾನಿಯಾಗಿತ್ತು. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಮಳೆಯಾಗಿದೆ, ಇನ್ನೂ ಮಳೆಯಾಗುತ್ತಿದೆ, ಆದರೆ ಅಧಿಕಾರಿಗಳು ಇದುವರೆಗೆ ಕೇವಲ 600 ಹೆಕ್ಟೇರ್ ನಷ್ಟು ಕೃಷಿ ಹಾನಿಯಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಸಚಿವೆ ಅಚ್ಚರಿ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ನಿಯಮಗಳಿಂದಾಗಿ ಈ ಬಾರಿ ಹಾನಿಗೊಳಗಾದ ಕೃಷಿ ಭೂಮಿ ಪ್ರಮಾಣ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಮತ್ತೊಮ್ಮೆ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪುನಃ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದರು.ಮೆಸ್ಕಾಂಗೆ 2 ಕೋಟಿ ಬಾಕಿ !ಉಡುಪಿಯ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಿಂದ ಮೆಸ್ಕಾಂಗೆ ವಿದ್ಯುತ್ ಬಿಲ್ 3 ಕೋಟಿ ರು. ಬಾಕಿ ಇರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ, ಆಸ್ಪತ್ರೆ ಮತ್ತು ಮೆಸ್ಕಾಂ ಎಕಡೂ ಸರ್ಕಾರದ ಇಲಾಖೆಗಳು, ಆರೋಗ್ಯ ಇಲಾಖೆ ಸಚಿವ ಮತ್ತು ಇಂಧನ ಇಲಾಖೆ ಸಚಿವರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಕೆಡಿಪಿ ಸಮಿತಿ ಸದಸ್ಯರಾದ ಪ್ರಸನ್ನಕುಮಾರ್ ಶೆಟ್ಟಿ, ವೀಣಾ ಶೆಟ್ಟಿ, ಐಡಾ ಗಿಲ್ಬರ್ಟ್ ಡಿಸೋಜ ವೇದಿಕೆಯಲ್ಲಿದ್ದರು.ಸರ್ಕಾರಿ ಬಸ್‌ಗಳಿಗೆ ತಡೆಯಾಜ್ಞೆ !ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳನ್ನು ಓಡಿಸದಂತೆ ಖಾಸಗಿ ಬಸ್ಸುಗಳ ಮಾಲಕರ ಲಾಬಿ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಡ, ಕಾರ್ಮಿಕ, ಬಿಪಿಎಲ್ ಮಹಿಳೆಯರಿಗೆ ಅನಕೂಲವಾಗಲಿ ಎಂದು ರಾಜ್ಯ ಸರ್ಕಾರ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೆ ತಂದಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ಸುಗಳಿಲ್ಲದೆ ಮಹಿಳೆಯರಿಗೆ ಈ ಯೋಜನೆ ಲಾಭ ಸಿಗುತ್ತಿಲ್ಲ ಎಂದು ಸರ್ಕಾರಿ ಬಸ್ಸುಗಳನ್ನು ಓಡಿಸಿದರೇ, ಅವುಗಳಿಗೆ ಖಾಸಗಿ ಬಸ್ಸಿನ ಮಾಲಕರು ತಡೆಯಾಜ್ಞೆ ತಂದಿದ್ದಾರೆ. ನಾವು ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದರೆ, ಈ ಖಾಸಗಿ ಬಸ್ಸು ಮಾಲಕರು ಜನರಿಗೆ ತೊಂದರೆ ಕೊಡುತಿದ್ದಾರೆ ಎಂದರು.
;Resize=(128,128))
;Resize=(128,128))
;Resize=(128,128))