ಬೈಂದೂರು: ಇಲ್ಲಿನ ಕೊಡೇರಿ ಹಕ್ರೆಮಠ ಶ್ರೀ ರಾಮ ಭಜನಾ ಮಂದರಿದಲ್ಲಿ ರಾಮ ನವಮಿ ಅಂಗವಾಗಿ ಶ್ರೀ ರಾಮ ತೊಟ್ಟಿಲೋತ್ಸವ ಶುಕ್ರವಾರ ಮಂದಿರಲ್ಲಿ ಅದ್ದೂರಿಯಾಗಿ ನಡೆಯಿತು. ಬೆಳಗ್ಗೆ ಉದಯ ಕಾಲದ ಪೂಜೆಯೊಂದಿಗೆ ಏಕಾಹ ಭಜನೆ ಆರಂಭಗೊಂಡು, ತೊಟ್ಟಿಲೋತ್ಸವ ಪ್ರಯುಕ್ತ ಬಾಲರಾಮನ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ತೊಟ್ಟಿಲೊಳಗೆ ಇಟ್ಟು ಮಾತೆಯರ ಒಡಗೂಡಿ ತೊಟ್ಟಿಲು ತೂಗುವ ಶಾಸ್ತ್ರ ನಡೆಯಿತು.ಅನಂತರ ತುಲಾಭಾರ ಸೇವೆ, ಅನ್ನಸಂತರ್ಪಣೆ ಜರುಗಿತು. ಸಂಜೆ ದೇವರ ಪುರಮೆರವಣಿಗೆ ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದವರೆಗೂ ಸಾಗಿ ಮಂದಿರಕ್ಕೆ ಹಿಂತಿರಗಿತು. ಊರ, ಪರವೂರ ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಮಂದಿರದ 107ನೇ ವರ್ಷದ ತ್ರಿಕಾಲ ಭಜನಾ ಮಂಗಲೋತ್ಸವ ಶನಿವಾರ ಬೆಳಗ್ಗೆ ಸಂಪನ್ನಗೊಳ್ಳಲಿದೆ.