ಸಾರಾಂಶ
ಫ್ಯಾಮಿಲಿ ಯೋಗ ಅಕಾಡೆಮಿ ಕ್ಯಾಂಡಿ ಮತ್ತು ರೋಟರಿ ಬೆಂಗಳೂರು ಗ್ಲೋಬಲ್ ಯೋಗ ವತಿಯಿಂದ ಭಾರತ-ಲಂಕಾ ಗ್ಲೋಬಲ್ ಯೋಗ ಫೆಸ್ಟಿವಲ್ ಜು.13ರಂದು ಶ್ರೀಲಂಕಾದ ಕ್ಯಾಂಡಿಯ ಬೊಗಂಬರ ಸ್ಟೇಡಿಯಂ ಹೆಲೆಪೋಲ ಮವಥಾದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಹಾಗೂ ಸ್ಟೇನ್ ರಸ್ತೆಯ ಪೋಸ್ಟಲ್ ಕಾಂಪ್ಲೆಕ್ಸ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಶ್ರೀಲಂಕಾದ ಕ್ಯಾಂಡಿ ನಗರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.ಫ್ಯಾಮಿಲಿ ಯೋಗ ಅಕಾಡೆಮಿ ಕ್ಯಾಂಡಿ ಮತ್ತು ರೋಟರಿ ಬೆಂಗಳೂರು ಗ್ಲೋಬಲ್ ಯೋಗ ವತಿಯಿಂದ ಭಾರತ-ಲಂಕಾ ಗ್ಲೋಬಲ್ ಯೋಗ ಫೆಸ್ಟಿವಲ್ ಜು.13ರಂದು ಶ್ರೀಲಂಕಾದ ಕ್ಯಾಂಡಿಯ ಬೊಗಂಬರ ಸ್ಟೇಡಿಯಂ ಹೆಲೆಪೋಲ ಮವಥಾದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಹಾಗೂ ಸ್ಟೇನ್ ರಸ್ತೆಯ ಪೋಸ್ಟಲ್ ಕಾಂಪ್ಲೆಕ್ಸ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಭಾಗವಹಿಸುವರು. ಪ್ರವಾಸೋದ್ಯಮ ಮತ್ತು ಭೂಮಿ ಸಚಿವಾಲಯ, ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವಾಲಯದ ಹರಿನ್ ಫೆನಾಂಡೋ, ಅಂತಾರಾಷ್ಟ್ರೀಯ ಯೋಗ ತಜ್ಞ ರಾಘವೇಂದ್ರ ಪೈ, ರೋಟರಿ ಬೆಂಗಳೂರು ಗ್ಲೋಬಲ್ ಯೋಗದ ಸಂಸ್ಥಾಪಕ ಅಧ್ಯಕ್ಷ ಡಾ.ಯೋಗಿ ದೇವರಾಜ್, ನಿವೃತ್ತ ಆಯುಷ್ ಅಧಿಕಾರಿ ಮತ್ತು ತ್ರಿನೇತ್ರ ಅಂತಾರಾಷ್ಟ್ರೀಯ ಯೋಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನಾಗೇಶ್, ನಿವೃತ್ತ ಸ್ಥಾಯಿ ವೈದ್ಯಾಧಿಕಾರಿ ಮತ್ತು ಶ್ರೀತ್ರಿನೇತ್ರ ಅಂತಾರಾಷ್ಟ್ರೀಯ ಯೋಗ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಎಂ.ಎಸ್. ಮಧುಮತಿ ಹಾಗೂ ವಿಶ್ವನಾಥ್ ಗುರೂಜಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.ಜಾಮಿಯಾ ಮಸೀದಿ ವಿವಾದ ಕೋರ್ಟ್‌ಗೆ ಹಾಜರಾಗಲು ನೋಟಿಸ್
ಮಂಡ್ಯ:ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಸಂಬಂಧ ಬುಧವಾರ ಹೈಕೋರ್ಟ್ ನಲ್ಲಿ ವಿಚಾರಣೆ ಆರಂಭಗೊಂಡಿದ್ದು, ರಾಜ್ಯ ಮುಖ್ಯ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ, ಮುಜರಾಯಿ ಅಧಿಕಾರಿಗಳಿಗೆ ಕೋರ್ಟ್ ಗೆ ಹಾಜರಾಗುವಂತೆ ನ್ಯಾಯಾಲಯ ನೋಟಿಸ್ ನೀಡಿದೆ. ಟಿಪ್ಪು ಸುಲ್ತಾನ್ ಆಡಳಿತದ ವೇಳೆ ಹನುಮ ಮಂದಿರ ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಬಜರಂಗಸೇನೆಯ 101 ಮಂದಿ ಹನುಮ ಭಕ್ತರು ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೇ, ಆಂಜನೇಯ ದೇವಾಲಯ ಕುರುಹು ನಾಶ ಮಾಡಲು ಮೂಲ ಕಟ್ಟಡ ಹಾನಿ ಮಾಡಲಾಗುತ್ತಿದೆ. ಜಾಮಿಯಾ ಮಸೀದಿಯಲ್ಲಿ ಅಕ್ರಮವಾಗಿ ಮದರಸ ನಡೆಯುತ್ತಿದೆ. ಮಸೀದಿಯ ಜಾಗದಲ್ಲಿ ಮತ್ತೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ಸ್ಥಾಪನೆ ಆಗಬೇಕು. ಅಕ್ರಮ ಮದರಸವನ್ನು ಕೂಡಲೇ ತೆರವು ಮಾಡಬೇಕು ಎಂದು ಹೈಕೋರ್ಟ್‌ನಲ್ಲಿ ಬಜರಂಗ ಸೇನೆಯ ಹನುಮ ಭಕ್ತರುಧಾವೆ ಹೂಡಿದ್ದಾರೆ.