ಸಾರಾಂಶ
ನಗರದ ಬನ್ನಂಜೆ ಭಾರತೀಯ ಸ್ಟೇಟ್ ಬ್ಯಾಂಕ್‌ನ ಪ್ರಾದೇಶಿಕ ವ್ಯವಹಾರ ಕಚೇರಿಯ ಕಟ್ಟಡದಲ್ಲಿ ಎಸ್‌ಬಿಐ ಮಿನಿ ಗೃಹ ಸಾಲ ಕೇಂದ್ರವನ್ನು ಬ್ಯಾಂಕಿನ ಬೆಂಗಳೂರು ವೃತ್ತದ ಮಹಾ ಪ್ರಬಂಧಕ ಪ್ರಫುಲ್ಲ ಕುಮಾರ ಜೇನಾ ಮತ್ತು ಮಂಗಳೂರು ಆಡಳಿತ ಕಚೇರಿಯ ಉಪಮಹಾ ಪ್ರಬಂದಕ ಕೃಷ್ಣ ಮೋಹನ್ ಎಂ. ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಬನ್ನಂಜೆ ಭಾರತೀಯ ಸ್ಟೇಟ್ ಬ್ಯಾಂಕ್‌ನ ಪ್ರಾದೇಶಿಕ ವ್ಯವಹಾರ ಕಚೇರಿಯ ಕಟ್ಟಡದಲ್ಲಿ ಎಸ್‌ಬಿಐ ಮಿನಿ ಗೃಹ ಸಾಲ ಕೇಂದ್ರವನ್ನು ಬ್ಯಾಂಕಿನ ಬೆಂಗಳೂರು ವೃತ್ತದ ಮಹಾ ಪ್ರಬಂಧಕ ಪ್ರಫುಲ್ಲ ಕುಮಾರ ಜೇನಾ ಮತ್ತು ಮಂಗಳೂರು ಆಡಳಿತ ಕಚೇರಿಯ ಉಪಮಹಾ ಪ್ರಬಂದಕ ಕೃಷ್ಣ ಮೋಹನ್ ಎಂ. ಉದ್ಘಾಟಿಸಿದರು.ಪ್ರಾದೇಶಿಕ ವ್ಯವಹಾರ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಪ್ರಕಾಶ್ ಅಡಿಗ ಮಾತನಾಡಿ, ಗೃಹ ಸಾಲ ಗ್ರಾಹಕರ ಅನುಕೂಲಕ್ಕಾಗಿ ಈ ಕೇಂದ್ರವನ್ನು ತೆರೆದಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ಕೃಷ್ಣರಾಜ ಭಟ್ ಕೀಳಂಜೆ, ಅಧಿಕಾರಿಗಳಾದ ಮಹದೇವಮ್ಮ, ಅಬಾ ಲಾಲ್, ಹಿರಿಯ ಗ್ರಾಹಕರಾದ ಕರುಣಾಕರ ಸಾಲಿಯಾನ್ ಉಪಸ್ಥಿತರಿದ್ದರು. ಅಮೃತ ಕಾರ್ಯಕ್ರಮ ನಿರ್ವಹಿಸಿದರು.