ಉಳ್ಳಾಲ ಖಾಝಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅಧಿಕಾರ ಸ್ವೀಕಾರ

| Published : Aug 19 2024, 12:46 AM IST

ಸಾರಾಂಶ

ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಖಾಝಿ ಅಧಿಕಾರ ಸ್ವೀಕಾರ ಭವಿಷ್ಯದ ಉಳ್ಳಾಲದ ಅಭಿವೃದ್ಧಿಗೆ ಪೂರಕವಾದ ಅವಕಾಶವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಗುರುಗಳ, ಹಿರಿಯರ ಆಶೀರ್ವಾದದಿಂದ ಧಾರ್ಮಿಕ ಶಿಕ್ಷಣ ಪಡೆದ ಬಳಿಕ ಧಾರ್ಮಿಕ ಶಿಕ್ಷಣ ನೀಡುವತ್ತ ಹೆಜ್ಜೆ ಇಟ್ಟೆ. ಅದರಿಂದ ಇಲ್ಲಿಯವರೆಗೆ ತಲುಪಿದೆ, ಮಡವೂರು ಶೈಖ್ ಅವರ ಸೂಚನೆ ಮೇರೆಗೆ ಮರ್ಕಝ್ ಕಾಲೇಜು ಸ್ಥಾಪನೆ ಮಾಡಲಾಯಿತು ಎಂದು ಉಳ್ಳಾಲ ನೂತನ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರ ಹೇಳಿದರು.

ಅವರು ಉಳ್ಳಾಲ ಜುಮಾ ಮಸೀದಿ ಹಾಗೂ ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ ಶನಿವಾರರ ಉಳ್ಳಾಲ ದರ್ಗಾ ವಠಾರದಲ್ಲಿ ನಡೆದ ಸಯ್ಯಿದ್ ಮದನಿ ಶರೀಅತ್ ಕಾಲೇಜು ಕಟ್ಟಡ ಶಿಲಾನ್ಯಾಸ ನೆರವೇರಿಸಿ ಹಾಗೂ ಖಾಝಿ ಸ್ಥಾನ ಸ್ವೀಕಾರ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ,ಉಳ್ಳಾಲ ದರ್ಗಾ ಸೌಹಾರ್ದಯುತವಾದ ವಾತಾವರಣಕ್ಕೆ ಹಲವು ಯೋಜನೆಗಳನ್ನು ಕೈಗೊಂಡು ಎಲ್ಲರೂ ಭಾವೈಕ್ಯತೆಯಿಂದ, ಪ್ರೀತಿ, ಪರಸ್ಪರ ಗೌರವಿಸುವ ವಾತಾವರಣ ನಿರ್ಮಿಸುವ ಮುಖೇನ ಉತ್ತಮ ಸಂದೇಶ ನೀಡಿದೆ ಎಂದರು.

ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಖಾಝಿ ಅಧಿಕಾರ ಸ್ವೀಕಾರ ಭವಿಷ್ಯದ ಉಳ್ಳಾಲದ ಅಭಿವೃದ್ಧಿಗೆ ಪೂರಕವಾದ ಅವಕಾಶವಾಗಿದೆ ಎಂದರು. ದರ್ಗಾ ಅಧ್ಯಕ್ಷ ಹನೀಫ್ ಪ್ರಾಸ್ತಾವಿಕ ಮಾತನಾಡಿದರು.

ಸಯ್ಯಿದ್ ಅಲಿ ಬಾಫಖೀ ತಂಙಳ್ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮ ಉದ್ಘಾಟಿಸಿದರು. ರಈಸುಲ್ ಉಲಮಾ ಇ.ಸುಲೈಮಾನ್ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು.