ಮಳೆಗಾಗಿ ಪಾಡಿ ಇಗ್ಗುತ್ತಪ್ಪನಿಗೆ ಮಹಿಳೆಯರಿಂದ ಕಾಲ್ನಡಿಗೆ ಸೇವೆ: ಸುರಿದ ಮಳೆ

| Published : Apr 23 2024, 12:45 AM IST / Updated: Apr 23 2024, 12:46 AM IST

ಮಳೆಗಾಗಿ ಪಾಡಿ ಇಗ್ಗುತ್ತಪ್ಪನಿಗೆ ಮಹಿಳೆಯರಿಂದ ಕಾಲ್ನಡಿಗೆ ಸೇವೆ: ಸುರಿದ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಮಳೆ ಇಲ್ಲದೆ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂದರ್ಭ ಮಡಿಕೇರಿಯ ಉಳ್ಳಿಯಡ ಡಾಟಿ ಪೂವಯ್ಯ ಅವರ ನೇತೃತ್ವದಲ್ಲಿ ಸೋಮವಾರ ಕೊಡಗಿನ ನಾಲ್ಕು ದಿಕ್ಕುಗಳಿಂದ ಆಗಮಿಸಿದ ಮಹಿಳೆಯರು ಇಗ್ಗುತಪ್ಪನಿಗೆ ಸೇವೆ ನೆರವೇರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗಿನಲ್ಲಿ ಮಳೆಗಾಗಿ ಪಾಡಿ ಇಗ್ಗುತ್ತಪ್ಪನಿಗೆ ಕಾಲ್ನಡಿಗೆಯ ಮೂಲಕ ಮಹಿಳೆಯರು ವಿಶೇಷ ಸೇವೆ ನಡೆಸಿದ್ದು, ಕಾಕತಾಳೀಯ ಎಂಬಂತೆ ಸೋಮವಾರ ಕೊಡಗಿನ ವಿವಿಧ ಕಡೆ ಮಳೆಯಾಗಿದೆ.ಜಿಲ್ಲೆಯಲ್ಲಿ ಮಳೆ ಇಲ್ಲದೆ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂದರ್ಭ ಮಡಿಕೇರಿಯ ಉಳ್ಳಿಯಡ ಡಾಟಿ ಪೂವಯ್ಯ ಅವರ ನೇತೃತ್ವದಲ್ಲಿ ಸೋಮವಾರ ಕೊಡಗಿನ ನಾಲ್ಕು ದಿಕ್ಕುಗಳಿಂದ ಆಗಮಿಸಿದ ಮಹಿಳೆಯರು ಇಗ್ಗುತಪ್ಪನಿಗೆ ಸೇವೆ ನೆರವೇರಿಸಿದ್ದಾರೆ.ತಮ್ಮ ಸಾಂಪ್ರದಾಯಿಕ ಉಡುಗೆ ತೊಟ್ಟು ಕಕ್ಕಬೆಯ ಪಟ್ಟಣದ ಸ್ವಾಗತ ಕಮಾನಿನಿಂದ ಪಾಡಿ ಇಗ್ಗುತ್ತಪ್ಪ ದೇವಾಲಯದ ವರೆಗೆ 2 ಕೆಜಿ ಅಕ್ಕಿ, ಒಂದು ಕೆಜಿ ಬೆಲ್ಲ, ಒಂದು ತೆಂಗಿನ ಕಾಯಿಯನ್ನು ಶುದ್ಧವಾದ ಬಿಳಿ ಬಟ್ಟೆಯಲ್ಲಿ ಕಟ್ಟಿಕೊಂಡು, ಕಟ್ಟುನ್ನು ತಲೆಯ ಮೇಲಿಟ್ಟು ಚಪ್ಪಲಿ ಧರಿಸದೆ ಕಾಲ್ನಡಿಗೆಯಲ್ಲಿ ದೇವರನ್ನು ಧ್ಯಾನಿಸುತ್ತಾ ಪಾದಯಾತ್ರೆ ನಡೆಸಿದರು.ದೇವಾಲಯದಲ್ಲಿ ಮಳೆಗಾಗಿ ಭಕ್ತಿ ಪೂರ್ವಕವಾಗಿ ಪೂಜೆ ನೆರವೇರಿಸಿದ್ದಾರೆ. ಪೂಜೆ ನೆರವೇರಿಸಿ ಮಹಿಳೆಯರು ದೇವಾಲಯದಿಂದ ಹಿಂದಿರುಗುವ ಸಂದರ್ಭ, ಮಧ್ಯಾಹ್ನದ ನಂತರ ಜಿಲ್ಲೆಯಲ್ಲಿ ಬಹುತೇಕ ಕಡೆ ಮಳೆಯಾಗಿದೆ.