ಸಂವಿಧಾನದ ಆಶಯಗಳನ್ನ ಯುವಜನತೆ ಮೈಗೂಡಿಸಿಕೊಳ್ಳಬೇಕು

| Published : Nov 10 2025, 12:15 AM IST

ಸಂವಿಧಾನದ ಆಶಯಗಳನ್ನ ಯುವಜನತೆ ಮೈಗೂಡಿಸಿಕೊಳ್ಳಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯದ ಭಾವನೆಗಳನ್ನು ಯುವಜನತೆ ಬೆಳೆಸಿಕೊಳ್ಳುವ ದೃಢಸಂಕಲ್ಪ ಮಾಡಬೇಕೆಂದು ಪ್ರಾಂಶುಪಾಲ ಎಂ.ಡಿ ಶಿವಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ನಮ್ಮ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯದ ಭಾವನೆಗಳನ್ನು ಯುವಜನತೆ ಬೆಳೆಸಿಕೊಳ್ಳುವ ದೃಢಸಂಕಲ್ಪ ಮಾಡಬೇಕೆಂದು ಪ್ರಾಂಶುಪಾಲ ಎಂ.ಡಿ ಶಿವಕುಮಾರ್ ತಿಳಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲೆ, ಛಾಯಾಗ್ರಹಣ ಹಾಗೂ ಭಾಷಣ ಸ್ಪರ್ಧೆಗಳ ಕಾರ್ಯಕ್ರಮವನ್ನು ನ್ಯಾಯಮೂರ್ತಿ ನಾಗಮೋಹನ್‌ದಾಸ್‌ರವರ ಸಂವಿಧಾನ ಓದು ಕೃತಿಯನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಮತ ನನ್ನ ಹಕ್ಕು ಶಿರ್ಷಿಕೆಯಡಿ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಸೋಲೇ ಗೆಲುವಿನ ಸೋಪಾನ ಎಂಬುದನ್ನರಿತು ವಿದ್ಯಾರ್ಥಿಗಳು ಸ್ಪರ್ಧಾ ಸ್ಫೂರ್ತಿಯಿಂದ ಈ ಸ್ಪರ್ಧಗಳಲ್ಲಿ ಉತ್ಸುಕರಾಗಿ ಭಾಗವಹಿಸಬೇಕು. ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಸುಭದ್ರ, ಪಾರದರ್ಶಕ ಆಡಳಿತ ನೀಡುವ ಸರ್ಕಾರ ತರಲು ಯುವಜನರು ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಂಡು ಪವಿತ್ರ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕ್ರಮವಾಗಿ ರು. ೧೫೦೦೦, ರೂ.೧೦೦೦೦, ಹಾಗೂ ರು. ೫೦೦೦ ಗಳ ನಗದು ಬಹುಮಾನವನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ತುಮಕೂರಿನಲ್ಲಿ ನಡೆಯುವ ಮಕ್ಕಳ ದಿನಾಚರಣೆಯಲ್ಲಿ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್ ನೀಡಲಿದ್ದಾರೆ ಎಂದರು. ಚಿತ್ರಕಲೆ ಸ್ಪರ್ಧೆಯಲ್ಲಿ ಬಾಲಕರ ಸ.ಪ.ಪೂ ಕಾಲೇಜಿನ ಭವ್ಯಶ್ರಿ ಪ್ರಥಮ ಸ್ಥಾನ, ಬಸವೇಶ್ವರ ಕಾಲೇಜಿನ ಅನಿಲ ದ್ವಿತೀಯ, ಮೊರಾಜಿ ದೇಸಾಯಿ ಅಲ್ಪ ಸಂಖ್ಯಾತರ ವಸತಿ ಶಾಲೆಯ ತ್ರಿಶಾ ತೃತೀಯ ಸ್ಥಾನ ಪಡೆದುಕೊಂಡರು. ಛಾಯಾಗ್ರಹಣ ಸ್ಪರ್ಧೆಯಲ್ಲಿ ಬಾಲಕರ ಕಾಲೇಜಿನ ಕೆ.ಎಂ. ಲಾವಣ್ಯ ಪ್ರಥಮ, ಸರ್ಕಾರಿ ಹೊನ್ನವಳ್ಳಿ ಕಾಲೇಜಿನ ಪ್ರವೀಣ ದ್ವಿತೀಯ ಹಾಗೂ ಬಾಲಕರ ಕಾಲೇಜಿ ಬಿ. ಮೋನಿಷಾ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾಷಣ ಸ್ಪರ್ಧೆಯಲ್ಲಿ ಎಸ್.ಎಸ್ ಪಿಯು ಕಾಲೇಜಿನ ಮನುಜಾ ಪ್ರಥಮ, ಗುರುಕುಲ ಪಿಯು ಕಾಲೇಜಿನ ಚಂದ್ರಶೇಖರ ದ್ವಿತೀಯ, ಬಾಲಕಿಯರ ಕಾಲೇಜಿನ ಪವಿತ್ರ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸ್ಪರ್ಧೆಗಳ ತೀರ್ಪುಗಾರರಾಗಿ ನೊಣವಿನಕೆರೆ ಕಾಲೇಜಿನ ಉಪನ್ಯಾಸಕ ಜಿ.ಎಸ್. ರಘು, ಬಸವೇಶ್ವರ ಕಾಲೇಜಿನ ಉಪನ್ಯಾಸಕ ಜಯರಾಮ್, ಬಾಲಕರ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಜಿ.ಆರ್. ಪ್ರಕಾಶ್ ಭಾಗವಹಿಸಿದ್ದರು.