ಸಾರಾಂಶ
ಕಳೆದ 40 ವರ್ಷಗಳಿಂದ ಗುಜರಾತ್ ಕಾಂಗ್ರೆಸ್‌ನ ಆಧಾಸಸ್ತಂಭವಾಗಿದ್ದ ಹಿರಿಯ ಮುಖಂಡ, ಗುಜರಾತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಜುನ್ ಮೋಧ್ವಾಡಿಯಾ ಸೋಮವಾರ ಶಾಸಕತ್ವ ಹಾಗೂ ಪಕ್ಷದ ಎಲ್ಲ ಸ್ಥಾನಮಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಗಾಂಧಿನಗರ: ಕಳೆದ 40 ವರ್ಷಗಳಿಂದ ಗುಜರಾತ್ ಕಾಂಗ್ರೆಸ್‌ನ ಆಧಾಸಸ್ತಂಭವಾಗಿದ್ದ ಹಿರಿಯ ಮುಖಂಡ, ಗುಜರಾತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಜುನ್ ಮೋಧ್ವಾಡಿಯಾ ಸೋಮವಾರ ಶಾಸಕತ್ವ ಹಾಗೂ ಪಕ್ಷದ ಎಲ್ಲ ಸ್ಥಾನಮಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಕಾಂಗ್ರೆಸ್‌ನಲ್ಲಿನ ‘ನಿರ್ಗಮನ ಪರ್ವ’ ಮುಂದುವರಿದಿದೆ. ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ.ರಾಮಮಂದಿರ ಉದ್ಘಾಟನೆಗೆ ಪಕ್ಷದ ಬಹಿಷ್ಕಾರ ಸಮರ್ಥನೀಯವಲ್ಲ ಹಾಗೂ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಸ್ಸಾಂನಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ನಡೆದುಕೊಂಡ ರೀತಿ ಸರಿ ಇರಲಿಲ್ಲ. ಈ ಎಲ್ಲ ವಿದ್ಯಮಾನಗಳಿಂದ ಕಾಂಗ್ರೆಸ್ ಜನರ ಮನಸ್ಸಿನಿಂದ ದೂರ ಆಗತೊಡಗಿದೆ ಎಂದು ಹೇಳಿ ಅವರು ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜನರೊಂದಿಗಿನ ಸಂಪರ್ಕವನ್ನು ಕಳೆದುಕೊಂಡಾಗ ಅದು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ದೇಶದ ಜನರು ರಾಮಮಂದಿರ ನಿರ್ಮಾಣವಾಗಬೇಕೆಂದು ಬಯಸಿದ್ದರು. ಆ ಪ್ರಕಾರ ಸುಪ್ರೀಂ ಕೋರ್ಟ್ ಆದೇಶ ನೀಡಿತು ಆದಾಗ್ಯೂ.ಪ್ರಾಣ ಪ್ರತಿಷ್ಠಾಪನೆ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿತು. ಇದಕ್ಕೆ ನಾನು ಆಕ್ಷೇಪಿಸಿ, ಜನರ ಭಾವನೆಗೆ ಧಕ್ಕೆ ತರುವ ಇಂಥ ನಿರ್ಧಾರ ಬೇಡ ಎಂದಿದ್ದೆ. ಆದರೂ ನನ್ನ ಮಾತು ಯಾರೂ ಕೇಳಿಲ್ಲ. ಪಕ್ಷಕ್ಕೆ ಜನರ ಜತೆಗೆ ಸಂವಹನ ಕೊರತೆ ಇದೆ. ಅಂತಿಮವಾಗಿ, ನಾನು ಇಂದು ರಾಜೀನಾಮೆ ನೀಡಲು ನಿರ್ಧರಿಸಿದೆ’ ಎಂದರು.;Resize=(128,128))
;Resize=(128,128))
;Resize=(128,128))