5ನೇ ಹಂತದ ಚುನಾವಣೆ: ಶೇ.12ರಷ್ಟು ಮಾತ್ರ ಮಹಿಳಾ ಅಭ್ಯರ್ಥಿಗಳು

| Published : May 13 2024, 12:08 AM IST / Updated: May 13 2024, 04:26 AM IST

5ನೇ ಹಂತದ ಚುನಾವಣೆ: ಶೇ.12ರಷ್ಟು ಮಾತ್ರ ಮಹಿಳಾ ಅಭ್ಯರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

5ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಶೇ.12ರಷ್ಟು ಮಂದಿ ಮಾತ್ರ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಮೇ 20 ರಂದು ನಡೆಯಲಿರುವ 5ನೇ ಹಂತದ ಚುನಾವಣೆಯಲ್ಲಿ 695 ಮಂದಿ ಅಭ್ಯರ್ಥಿಗಳಿದ್ದು, ಅದರಲ್ಲಿ 82 ಮಂದಿ ಮಾತ್ರ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ನವದೆಹಲಿ: 5ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಶೇ.12ರಷ್ಟು ಮಂದಿ ಮಾತ್ರ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಮೇ 20 ರಂದು ನಡೆಯಲಿರುವ 5ನೇ ಹಂತದ ಚುನಾವಣೆಯಲ್ಲಿ 695 ಮಂದಿ ಅಭ್ಯರ್ಥಿಗಳಿದ್ದು, ಅದರಲ್ಲಿ 82 ಮಂದಿ ಮಾತ್ರ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡಲು ಇತ್ತೀಚೆಗೆ ಸಂಸತ್‌ ತನ್ನ ಅನುಮೋದನೆ ನೀಡಿದ್ದರೂ, ಅದರ ಜಾರಿಗೆ ರಾಜಕೀಯ ಪಕ್ಷಗಳು ಮುಂದಾಗದೇ ಇರುವುದನ್ನು ವರದಿ ಒತ್ತಿ ಹೇಳಿದೆ.

ಮೊದಲನೇ ಹಂತದಲ್ಲಿ ಶೇ.8 ರಷ್ಟು ಮಂದಿ ಅಂದರೆ 135 ಮಂದಿ ಮಹಿಳಾ ಅಭ್ಯರ್ಥಿಗಳು, 2ನೇ ಹಂತದ ಚುನಾವಣೆಯಲ್ಲಿ 100 ಮಹಿಳಾ ಅಭ್ಯರ್ಥಿಗಳು ಅಂದರೆ ಶೇ.8 ಹಾಗೂ 3ನೇ ಹಂತದಲ್ಲಿ 123 ಮಂದಿ ಮಹಿಳೆಯರು ಅಂದರೆ ಶೇ.9 ರಷ್ಟು ಮತ್ತು 4ನೇ ಹಂತದಲ್ಲಿ ಶೇ.10 ರಷ್ಟು ಅಂದರೆ 170 ಮಂದಿ ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.