ಅಂಬಾನಿ- ಅದಾನಿ ಹಣದ ಕುರಿತು ರಾಹುಲ್‌ ಮೌನಕ್ಕೆ ಶರಣಾಗಿರುವುದರ ಹಿಂದೆ ಟೆಂಪೋ ತುಂಬಾ ಹಣ ರವಾನೆಯಾಗಿದ್ದು ಕಾರಣವಿರಬೇಕು ಎಂಬ ಮೋದಿ ಆರೋಪದ ಬೆನ್ನಲ್ಲೇ, ಹಣ ಬಂದರೆ ಅವರ ವಿರುದ್ಧ ಟೀಕೆ ನಿಲ್ಲಿಸುತ್ತೇವೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಹೇಳಿದ್ದಾರೆ.

ನವದೆಹಲಿ: ಅಂಬಾನಿ- ಅದಾನಿ ಹಣದ ಕುರಿತು ರಾಹುಲ್‌ ಮೌನಕ್ಕೆ ಶರಣಾಗಿರುವುದರ ಹಿಂದೆ ಟೆಂಪೋ ತುಂಬಾ ಹಣ ರವಾನೆಯಾಗಿದ್ದು ಕಾರಣವಿರಬೇಕು ಎಂಬ ಮೋದಿ ಆರೋಪದ ಬೆನ್ನಲ್ಲೇ, ಹಣ ಬಂದರೆ ಅವರ ವಿರುದ್ಧ ಟೀಕೆ ನಿಲ್ಲಿಸುತ್ತೇವೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅಧೀರ್‌, ‘ನಾನು ಬಡವನಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲೂ ನನ್ನ ಬಳಿ ಹಣವಿಲ್ಲ. ಹಾಗಾಗಿ ಅಂಬಾನಿ-ಅದಾನಿ ನನಗೆ ಬ್ಯಾಗ್‌ಗಟ್ಟಲೆ ಹಣ ಕಳುಹಿಸಿದ್ದೇ ಆದಲ್ಲಿ ಅವರ ಕುರಿತು ಟೀಕೆ ಮಾಡುವುದನ್ನು ನಿಲ್ಲಿಸುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆ.

ಬಿಜೆಪಿ ಆಕ್ರೋಶ:

ಅಧೀರ್‌ ಅವರ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಪಶ್ಚಿಮ ಬಂಗಾಳದ ಸಹ ಉಸ್ತುವಾರಿಯಾಗಿರುವ ಅಮಿತ್‌ ಮಾಳವೀಯ ಕಾಂಗ್ರೆಸ್‌ನಿಂದ ರಾಜಕೀಯ ಸುಲಿಗೆ ಮತ್ತೆ ಆರಂಭವಾಗಿದೆ. ಇದೇ ರೀತಿ ಸುಲಿಗೆ ಮಾಡಿ ಕಾಂಗ್ರೆಸ್‌ ಯುಪಿಎ ಅವಧಿಯಲ್ಲಿ 12 ಲಕ್ಷ ಕೋಟಿ ರು. ಬಾಚಿತ್ತು ಎಂದು ಆರೋಪಿಸಿದ್ದಾರೆ.