ದೆಹಲಿಯಲ್ಲಿ ಸಿಎಂ ಸಿದ್ದು-ಡಿಕೆಸು ಪ್ರತ್ಯೇಕ ಮಾತುಕತೆ ಕುತೂಹಲ

| Published : Nov 18 2025, 12:45 AM IST

ದೆಹಲಿಯಲ್ಲಿ ಸಿಎಂ ಸಿದ್ದು-ಡಿಕೆಸು ಪ್ರತ್ಯೇಕ ಮಾತುಕತೆ ಕುತೂಹಲ
Share this Article
  • FB
  • TW
  • Linkdin
  • Email

ಸಾರಾಂಶ

ಸಂಪುಟ ಪುನಾರಚನೆ ಸಂಬಂಧ ತೀವ್ರ ಬೆಳವಣಿಗೆಗಳು ನಡೆದಿರುವ ಬೆನ್ನಲ್ಲೇ ದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೋದರ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ಸೋಮವಾರ ಕೆಲ ಹೊತ್ತು ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

- ಸಂಪುಟ ಪುನಾರಚನೆ ಬೆಳವಣಿಗೆ ನಡುವೆ ಚರ್ಚೆ

---

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಪುಟ ಪುನಾರಚನೆ ಸಂಬಂಧ ತೀವ್ರ ಬೆಳವಣಿಗೆಗಳು ನಡೆದಿರುವ ಬೆನ್ನಲ್ಲೇ ದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೋದರ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ಸೋಮವಾರ ಕೆಲ ಹೊತ್ತು ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ವಿಶೇಷ ವಿಮಾನದಲ್ಲಿ ದೆಹಲಿಗೆ ಆಗಮಿಸಿದ ಸಿದ್ದರಾಮಯ್ಯ ಕರ್ನಾಟಕ ಭವನಕ್ಕೆ ತೆರಳಿದರು. ಅಲ್ಲಿ ಸಿದ್ದರಾಮಯ್ಯ ಅವರು ಭೋಜನ ಸೇವಿಸುವ ವೇಳೆ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್‌ ಸಹೋದರರು ಆಗಮಿಸಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಸಿಎಂ ಅವರೊಂದಿಗೆ ಭೋಜನ ಸೇವಿಸಿದ್ದಾರೆ.

ನಂತರ ಡಿ.ಕೆ.ಶಿವಕುಮಾರ್‌ ಸ್ಥಳದಿಂದ ತೆರಳಿದ್ದು, ಸ್ಥಳದಲ್ಲೇ ಉಳಿದ ಡಿ.ಕೆ.ಸುರೇಶ್‌ ಅವರು ಸಿದ್ದರಾಮಯ್ಯ ಅವರ ಜತೆಗೆ ಪ್ರತ್ಯೇಕವಾಗಿ ಕೆಲ ಕಾಲ ಮಾತುಕತೆ ನಡೆಸಿದರು. ಉಭಯ ನಾಯಕರು ನಡುವೆ ಯಾವ ವಿಚಾರ ಕುರಿತು ಮಾತುಕತೆ ನಡೆಯಿತು ಎಂಬುದು ಬಹಿರಂಗವಾಗಿಲ್ಲ.

ಸಂಪುಟ ಪುನಾರಚನೆ ಹಾಗೂ ಅಧಿಕಾರ ಹಸ್ತಾಂತರದ ಬಗ್ಗೆ ರಾಜ್ಯ ಕಾಂಗ್ರೆಸ್‌ನ ಉಭಯ ಬಣಗಳು ತಮ್ಮದೇ ಆದ ದಾಳ ಪ್ರಯೋಗಿಸುತ್ತಿರುವ ಈ ಹಂತದಲ್ಲಿ ಈ ಇಬ್ಬರು ನಾಯಕರ ಪ್ರತ್ಯೇಕ ಮಾತುಕತೆ ತೀವ್ರ ಕುತೂಹಲ ಕೆರಳಿಸಿದೆ.