ಬೆಂಗಳೂರು: ಹರಿಯಾಣದ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಜುಲೈ 31ರಿಂದ ಆಗಸ್ಟ್ 2ರವರೆಗೆ ನಡೆದ 13ನೇ Students Olympic National Games 2026-27ರ ತೈಕ್ವಾಂಡೋ ಸ್ಪರ್ಧೆಯಲ್ಲಿ ಬೆಂಗಳೂರಿನ ವಿದ್ಯಾಪೀಠ ತೈಕ್ವಾಂಡೋ ಕೇಂದ್ರದಿಂದ ಭಾಗವಹಿಸಿದ್ದ ಏಳು ವಿದ್ಯಾರ್ಥಿಗಳು ಏಳು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ, ರಾಷ್ಟ್ರೀಯ ಮಟ್ಟದ ಈ ಕ್ರೀಡಾಕೂಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ವಿದ್ಯಾಪೀಠ ತೈಕ್ವಾಂಡೋ ಕೇಂದ್ರದ ಎಲ್ಲಾ ಏಳು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದಿರುವುದು ಕೇಂದ್ರದ ತರಬೇತಿ, ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಪೋಷಕರ ಬೆಂಬಲಕ್ಕೆ ಸಾಕ್ಷಿಯಾಗಿದೆ.ಈ ಸಾಧನೆ ಮಾಡಿದ ವಿದ್ಯಾರ್ಥಿಗಳ ಗೋಲ್ಡ್ ಮೆಡಲ್ ಸನ್ಮಾನ ಹಾಗೂ ಅಭಿನಂದನಾ ಸಮಾರಂಭವನ್ನು ವಿದ್ಯಾರ್ಥಿಗಳ ಪೋಷಕರು, ಶ್ರೀ ಕ್ಷಿಪ್ರ ಪ್ರಸಾದ ಸೇವಾ ಟ್ರಸ್ಟ್ ಸಹಯೋಗದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಯ ಹಿಂದೆ ಅವರ ನಿರಂತರ ಅಭ್ಯಾಸ ಮತ್ತು ಪರಿಶ್ರಮದ ಜೊತೆಗೆ ವಿದ್ಯಾಪೀಠ ತೈಕ್ವಾಂಡೋ ಕೇಂದ್ರದ ಕೋಚ್ ಶ್ರೀ ಎಂ. ಪ್ರಕಾಶ್ ಅವರ ಮಾರ್ಗದರ್ಶನವೂ ಪ್ರಮುಖ ಪಾತ್ರ ವಹಿಸಿದೆ. ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿಯ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದ ಮಹತ್ವವನ್ನು ಬೆಳೆಸುವಲ್ಲಿ ಅವರ ಮಾರ್ಗದರ್ಶನ ಸಹಕಾರಿಯಾಗಿದೆ.ಕಾರ್ಯಕ್ರಮದಲ್ಲಿ ಬಸವನಗುಡಿ ಶಾಸಕರಾದ ಎಲ್.ಎ. ರವಿಸುಬ್ರಹ್ಮಣ್ಯ, ವಿದ್ಯಾಪೀಠ ವಾರ್ಡ್‌ನ ಮಾಜಿ BBMP ಸದಸ್ಯರಾದ ಸಂಗತಿ ವೆಂಕಟೇಶ್, ದಾವಣಗೆರೆ ತೈಕ್ವಾಂಡೋ ಅಸೋಸಿಯೇಷನ್ ಅಧ್ಯಕ್ಷರಾದ ಪ್ರಭಾಕರ್,
ಕ್ಷಿಪ್ರ ಪ್ರಸಾದ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಸುಹಾಸ್,ಬೆಂಗಳೂರು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಅನಿಲ್ ಹಾಗೂ ಸೇರಿದಂತೆ ಗಣ್ಯರು, ಪೋಷಕರು, ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.