ಸಾರಾಂಶ
ಡಲ್ಲಾಸ್: ಭಾನುವಾರ ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ವಿರುದ್ಧ ಆಡಿದ ಕೆನಡಾ ತಂಡದಲ್ಲಿ ಕೆನಡಾದ ಯಾವೊಬ್ಬ ಆಟಗಾರರನೂ ಇಲ್ಲದಿದ್ದಿದ್ದು ವಿಶೇಷ. ಭಾರತ ಮೂಲದ ನಾಲ್ವರು, ಪಾಕ್‌ನ ಇಬ್ಬರು, ಗಯಾನಾದ ಇಬ್ಬರು, ಕುವೈತ್, ಬಾರ್ಬಡೊಸ್, ಜಮೈಕಾ ಮೂಲದ ತಲಾ ಓರ್ವ ಆಟಗಾರ ಕೆನಡಾ ತಂಡ ಪ್ರತಿನಿಧಿಸಿದರು.
ಕೆನಡಾ-ಯುಎಸ್ ತಂಡದಲ್ಲಿ 10 ದೇಶಗಳ ಆಟಗಾರರು!
ಉದ್ಘಾಟನಾ ಪಂದ್ಯವಾಡಿದ ಕೆನಡಾ-ಅಮೆರಿಕ ತಂಡಗಳಲ್ಲಿ ಒಟ್ಟು 10 ದೇಶಗಳ ಆಟಗಾರರು ಕಣಕ್ಕಿಳಿದರು. ಈ ಪೈಕಿ ಭಾರತೀಯ ಮೂಲದವರೇ 7 ಮಂದಿ ಇದ್ದರು. ಅಮೆರಿಕ ತಂಡದಲ್ಲಿ ಮೂವರು, ಕೆನಡಾ ತಂಡದಲ್ಲಿ ನಾಲ್ವರು ಭಾರತ ಮೂಲಕ ಆಟಗಾರರಿದ್ದರು. ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಜಮೈಕಾ, ಬಾರ್ಬಡೊಸ್ ಸೇರಿದಂತೆ ಇತರ ಕೆಲ ದೇಶಗಳ ಆಟಗಾರರೂ ಈ ಪಂದ್ಯದಲ್ಲಿ ಕಣಕ್ಕಿಳಿದರು.
ಕನ್ನಡಿಗ ಶ್ರೇಯಸ್ ಸ್ಫೋಟಕ ಆಟ
ರಾಜ್ಯದ ದಾವಣಗೆರೆಯಲ್ಲಿ ಆಡಿ ಬೆಳೆದ ಯುವಕ ಶ್ರೇಯಸ್ ಮೋವಾ ಟಿ20 ವಿಶ್ವಕಪ್‌ನ ಚೊಚ್ಚಲ ಪಂದ್ಯದಲ್ಲೇ ಕೆನಡಾ ಪರ ಅಬ್ಬರಿಸಿದ್ದಾರೆ. ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಶ್ರೇಯಸ್ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿ 16 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್‌ನೊಂದಿಗೆ 32 ರನ್ ಸಿಡಿಸಿದರು.
03ನೇ ಗರಿಷ್ಠ: ಅಮೆರಿಕ ತಂಡ ಚೇಸ್ ಮಾಡಿದ 195 ರನ್ ಟಿ20 ವಿಶ್ವಕಪ್ ಇತಿಹಾಸದಲ್ಲೇ 3ನೇ ಗರಿಷ್ಠ.
10 ಸಿಕ್ಸರ್: ಪಂದ್ಯದಲ್ಲಿ ಅಮೆರಿಕದ ಜಾನ್ಸ್ 10 ಸಿಕ್ಸರ್ ಸಿಡಿಸಿದರು. ಇದು ಟಿ20 ವಿಶ್ವಕಪ್‌ನ ಇನ್ನಿಂಗ್ಸ್‌ನಲ್ಲಿ ಆಟಗಾರನ ಜಂಟಿ 2ನೇ ಗರಿಷ್ಠ. ಗೇಲ್ 11 ಸಿಕ್ಸರ್ ಬಾರಿಸಿರುವುದು ದಾಖಲೆ.