ದಿಲ್ಲಿ ಇಸ್ರೇಲ್‌ ದೂತಾವಾಸ ಬಳಿ ‘ಸ್ಫೋಟ’ ಸದ್ದು: ಪತ್ರ, ಧ್ವಜ ಪತ್ತೆ

| Published : Dec 27 2023, 01:31 AM IST / Updated: Dec 27 2023, 01:32 AM IST

ದಿಲ್ಲಿ ಇಸ್ರೇಲ್‌ ದೂತಾವಾಸ ಬಳಿ ‘ಸ್ಫೋಟ’ ಸದ್ದು: ಪತ್ರ, ಧ್ವಜ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ದಿಲ್ಲಿ ಇಸ್ರೇಲ್‌ ದೂತಾವಾಸ ಕಚೇರಿಯ ಬಳಿ ಸ್ಫೋಟಕ ಸದ್ದು ಕೇಳಿಸಿದ್ದು ಈ ಕುರಿತು ಸೂಕ್ತ ತನಿಖೆ ನಡೆಸುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ನವದೆಹಲಿ: ಇಸ್ರೇಲ್‌-ಹಮಾಸ್‌ ಯುದ್ಧ ನಡೆದಿರುವ ನಡುವೆಯೇ ದೆಹಲಿಯಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟದ ಸದ್ದು ಕೇಳಿದೆ ಎಂದು ಮಂಗಳವಾರ ದೆಹಲಿ ಪೊಲೀಸರಿಗೆ ಬಂದ ಕರೆಯೊಂದು ಬಂದು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.ಆದರೆ ಕರೆಯನ್ನು ಆಧರಿಸಿ ಸ್ಥಳಕ್ಕೆ ಹೋಗಿ ಪೊಲೀಸರು ಪರಿಶೀಲನೆ ನಡೆಸಿದಾಗ ಯಾವುದೇ ಸ್ಫೋಟ ನಡೆದಿರುವ ಬಗ್ಗೆಯಾಗಲೀ ಸ್ಫೋಟಕ ವಸ್ತುವಾಗಲೀ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆದರೆ ಕಚೇರಿಯಿಂದ ಕೆಲವೇ ಮೀಟರ್ ದೂರದಲ್ಲಿರುವ ಖಾಲಿ ಜಮೀನಿನಲ್ಲಿ, ಇಸ್ರೇಲಿ ರಾಯಭಾರಿಯನ್ನು ಉದ್ದೇಶಿಸಿ ಬರೆದ ಪತ್ರ ಪೊಲೀಸರಿಗೆ ಸಿಕ್ಕಿದೆ. ಪತ್ರದೊಂದಿಗೆ ಸುತ್ತಿದ ಧ್ವಜವ ಕೂಡ ಲಭಿಸಿದೆ. ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿನ ಅಂಶಗಳ ಮಾಹಿತಿ, ಧ್ವಜದ ಮಾಹಿತಿ ಬಹಿರಂಗವಾಗಿಲ್ಲ.‘ಸಂಜೆ 5.47ರ ಸುಮಾರಿಗೆ ದೆಹಲಿ ಪೊಲೀಸರ ಕಂಟ್ರೋಲ್‌ ರೂಮ್‌ಗೆ ಸ್ಫೋಟದ ಸದ್ದು ಕೇಳಿದ್ದರ ಬಗ್ಗೆ ಕರೆ ಬಂದಿದೆ. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿ ತೀವ್ರ ಶೋಧ ನಡೆಸಿದ್ದಾರೆ. ಸ್ಥಳದಲ್ಲಿ ಯಾವುದೇ ಸ್ಫೋಟದ ಕುರುಹು ಲಭಿಸಿಲ್ಲ. ಪತ್ರ, ಧ್ವಜದ ಬಗ್ಗೆ ತನಿಖೆ ಮಾಡಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.