ಹೈದರಾಬಾದ್: ಚೀನಾದ ಸೈಬರ್ ಅಪರಾಧಿಗಳು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 3000 ಭಾರತೀಯರನ್ನು ಕಾಂಬೋಡಿಯಾಕ್ಕೆ ಮಾನವ ಕಳ್ಳಸಾಗಣೆ ಮುಖಾಂತರ ಕರೆದೊಯ್ದಿದ್ದಾರೆ ಹಾಗೂ ಅವರಿಂದ ನಗ್ನ ಕರೆಗಳನ್ನು ಮಾಡಿಸಿ ಜನರನ್ನು ಹನಿ-ಟ್ರ್ಯಾಪ್ ಮಾಡಿಸುತ್ತಿದ್ದಾರೆ ಎಂಬ ಹೇಯ ಕೃತ್ಯ ಬೆಳಕಿಗೆ ಬಂದಿದೆ.
ಈ ಸೈಬರ್ ಕ್ರಿಮಿನಲ್‌ಗಳ ಕಾರ್ಯವೈಖರಿಯನ್ನು ಖುದ್ದು ಈ ಸಂಚಿನ ಸಂತ್ರಸ್ತರಾದ ತೆಲಂಗಾಣ ಮೂಲದ ಸಿವಿಲ್ ಇಂಜಿನಿಯರಿಂಗ್ ಪದವೀಧರ ಮುನ್ಷಿ ಪ್ರಕಾಶ್ ಎಂಬುವರು ಬಹಿರಂಗಪಡಿಸಿದ್ದಾರೆ. ಅವರು ಇತ್ತೀಚೆಗೆ ಸರ್ಕಾರದ ಮಧ್ಯಸ್ಥಿಕೆಯಿಂದ ಬಚಾವಾಗಿ ಕಾಂಬೋಡಿಯಾದಿಂದ ತವರಿಗೆ ಮರಳಿದ್ದಾರೆ.
ಹನಿ ಟ್ರಾಪ್ ದಂಧೆ ಹೇಗೆ?:ಹೈದರಾಬಾದ್ ಮೂಲದ ಐಟಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪ್ರಕಾಶ್ ಅವರು ವಿದೇಶದಲ್ಲಿ ಉದ್ಯೋಗ ಪಡೆಯುವ ಪ್ರಯತ್ನದಲ್ಲಿ ಹಲವಾರು ಉದ್ಯೋಗ ಸೈಟ್‌ಗಳಲ್ಲಿ ತಮ್ಮ ಪ್ರೊಫೈಲ್ ಅನ್ನು ಪೋಸ್ಟ್ ಮಾಡಿದ್ದರು.
ಮಲೇಷ್ಯಾಗೆ ಹೋದಾಗ ಅಲ್ಲಿಂದ ಪ್ರಕಾಶ್‌ರನ್ನುಕಾಂಬೋಡಿಯಾಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅವರ ಪಾಸ್‌ಪೋರ್ಟ್ ವಶಪಡಿಸಿಕೊಂಡು ಕೂಡಿ ಹಾಕಲಾಗಿತ್ತು. ಆಗ ಹುಡುಗಿಯರ ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ರಚಿಸಲು ಮತ್ತು ಬಳಸಲು ಅವರಿಗೆ 10 ದಿನಗಳ ತರಬೇತಿಯನ್ನು ನೀಡಲಾಗಿತ್ತು.