ನಾಲೆಗೆ ಬಿದ್ದ ಕಾರು: ಐವರು ಜಲ ಸಮಾಧಿ

KannadaprabhaNewsNetwork | Published : Nov 8, 2023 1:00 AM

ಸಾರಾಂಶ

ನಾಲೆಗೆ ಬಿದ್ದ ಕಾರು: ಐವರು ಜಲ ಸಮಾಧಿಬನಘಟ್ಟ ಗ್ರಾಮದ ಹಳೆ ಸೇತುವೆ ಕ್ರಾಸ್ ಬಳಿ ಘಟನೆಮೃತರು ತುಮಕೂರು ಜಿಲ್ಲೆಯ ತಿಪಟೂರಿನವರು

ಬನಘಟ್ಟ ಗ್ರಾಮದ ಹಳೆ ಸೇತುವೆ ಕ್ರಾಸ್ ಬಳಿ ಘಟನೆ

- ಮೃತರು ತುಮಕೂರು ಜಿಲ್ಲೆಯ ತಿಪಟೂರಿನವರುಕನ್ನಡಪ್ರಭ ವಾರ್ತೆ ಪಾಂಡವಪುರ

ಕಾರೊಂದು ವಿಶ್ವೇಶ್ವರಯ್ಯ ನಾಲೆಗೆ ಉರುಳಿಬಿದ್ದ ಪರಿಣಾಮ ಐವರು ಜಲ ಸಮಾಧಿಯಾಗಿರುವ ಘಟನೆ ತಾಲೂಕಿನ ಬನಘಟ್ಟ ಗ್ರಾಮದ ಹಳೆ ಸೇತುವೆ ಕ್ರಾಸ್ ಬಳಿ ಮಂಗಳವಾರ ಸಂಜೆ ನಡೆದಿದೆ.

ಪಾಂಡವಪುರ ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆ ಇಲ್ಲದ ನಾಲೆಗೆ ಉರುಳಿದ್ದರಿಂದ ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ. ಕಾರಿನೊಳಗಿದ್ದವರು ಹೊರಬರಲಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸತತ ನಾಲ್ಕು ಗಂಟೆಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ಅರಸರ ನಡೆಸಿ ಕಾರಣ ನಾಲೆಯಿಂದ ಹೊರತೆಗೆದಿದ್ದಾರೆ. ಕಾರಿನೊಳಗೆ ಇವರು ಪುರುಷರು ಸಾವನ್ನಪ್ಪಿರುವುದು ಈ ವೇಳೆ ಕಂಡು ಬಂದಿದೆ.

ಮೃತಪಟ್ಟವರು ತುಮಕೂರು ಜಿಲ್ಲೆಯ ತಿಪಟೂರಿನವರೆಂದು ತಿಳಿದು ಬಂದಿದೆ. ಮೃತರ ಹೆಸರು ಸದ್ಯಕ್ಕೆ ತಿಳಿದು ಬಂದಿಲ್ಲ. ಯಾವುದೋ ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿಕೊಂಡು ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರಿನೊಳಗೆ ಹೂವು, ಹಣ್ಣು, ಕಾಯಿ ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿಗಳು ಇರುವುದು ಕಂಡುಬಂದಿದೆ.

ಸಂಜೆ 4:45ರ ಸಮಯಕ್ಕೆ ಕಾರು ನಾಲೆಗೆ ಉರುಳಿ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ಪೊಲೀಸರು ಕಾರನ್ನು ಹೊರ ತೆಗೆಯುವ ಕಾರ್ಯಚರಣೆಗೆ ರಾತ್ರಿ 9 ಗಂಟೆಯಾದರೂ ಕಾರನ್ನು ಹೊರ ತೆಗೆಯುವ ಕಾರ್ಯಚರಣೆಗೆ ಇಳಿದರು. ಸೋಮವಾರವಷ್ಟೇ ಕೃಷ್ಣರಾಜಸಾಗರ ಜಲಾಶಯದಿಂದ ನಾಲೆಗೆ ನೀರನ್ನು ಹರಿಯ ಬಿಡಲಾಗಿದ್ದು ನೀರಿನ ಹರಿವು ಹೆಚ್ಚಾಗಿರುವುದರಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾಗಿತ್ತು. ಸತತ ಮೂರು- ನಾಲ್ಕು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸುವ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿ 8:15ರ ಸಮಯಕ್ಕೆ ನಾಲೆಯಿಂದ ಕಾರನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು.

ಕಾರು ಉರುಳಿ ಬಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ಮೋಹನ್, ಪಾಂಡವಪುರ ಸಿಪಿಐ ವಿವೇಕಾನಂದ, ಗ್ರಾಮಾಂತರ ಸಿಪಿಐ ಪ್ರಕಾಶ್ ಅವರು ಸ್ಥಳದಲ್ಲೇ ಹಾಜರಿದ್ದರು.

ನಾಲಿಗೆ ತಡೆಗೋಡೆ ಇಲ್ಲ:

ಬನಘಟ್ಟ ಬಳಿ ಇರುವ ವಿಶ್ವೇಶ್ವರಯ್ಯ ನಾಲೆ ಆಳವಾದ ಸ್ಥಳದಲ್ಲಿದ್ದು, ಪಾಂಡವಪುರ ಕಡೆಯಿಂದ ಬರುವಾಗ ಇಳಿಜಾರಿನಿಂದ ಕೂಡಿದೆ. ಈ ಸ್ಥಳದಲ್ಲಿನಾಲೆಗೆ ಅಡ್ಡವಾಗಿ ಯಾವುದೇ ತಡೆಗೋಡೆಯನ್ನು ನಿರ್ಮಿಸಿಲ್ಲ. ಇದು ಅಪಾಯಕಾರಿ ಸ್ಥಳವಾಗಿರುವುದರಿಂದ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕಾಗಿದ್ದು ತಿರುವಿನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ವಾಹನಗಳು ನೇರವಾಗಿ ನಾಲೆಯೊಳಗೆ ಉರುಳಿ ಬೀಳುತ್ತವೆ. ಈ ಹಿಂದೆಯೂ ಅನೇಕ ವಾಹನಗಳು ಬಿ.ಜೆ ಕ್ರಮಗಳು ನಾಲೆಗೆ ಉರುಳಿರುವ ನಿದರ್ಶನಗಳಿವೆ.

ಈ ಅಪಾಯವನ್ನು ಮನಗಂಡು ನಾಲೆ ಪಕ್ಕದ ರಸ್ತೆಗೆ ಬದಲಾಗಿ ಪಕ್ಕದಲ್ಲಿ ಪ್ರತ್ಯೇಕವಾಗಿ ವಾಹನಗಳ ಸಂಚಾರಕ್ಕೆ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಅದು ಮುಗಿಯುವ ಹಂತದಲ್ಲಿದ್ದು ಸೇತುವೆ ಸಂಚಾರಕ್ಕೆ ಮುಕ್ತವಾದರೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಇರುವುದಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಭಾರಿ ಜನಸ್ತೋಮ:

ನಾಲಗೆ ಕಾರು ಹುರುಳಿ ಬಿದ್ದ ಸ್ಥಳದಲ್ಲಿ ಬಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಪೊಲೀಸರು ಜನನನ್ನು ನಿಯಂತ್ರಿಸಲು ಹರಸಾಹಸ ನಡೆಸಿದರು.ಬಾಕ್ಸ್‌....

ಕ್ರೇನ್ ಸಹಾಯದಿಂದ ಕಾರುನಾಲೆಯಿಂದ ಹೊರಕ್ಕೆ

ಪಾಂಡವಪುರ: ನಾಲೆಗೆ ಕಾರು ಬಿದ್ದು ನೀರಿನೊಳಗೆ ಮುಳುಗುತ್ತಿದ್ದ ದೃಶ್ಯವನ್ನು ಸ್ಥಳೀಯರು ವೀಕ್ಷಿಸಿ ಜೋರಾಗಿ ಕಿರುಚಾಡುತ್ತಾ ಕಾರು ಹೋಯ್ತು ಎಂದು ಬದುಕಿಸಲು ಬರುವಷ್ಟರಲ್ಲಿ ಕಾರು ನೀರಿನಲ್ಲಿ ಮುಳುಗಿಬಿಟ್ಟಿದೆ.ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರನ್ನು ಕರೆಸಿಕೊಂಡು ನಾಲೆ ನೀರಿನೊಳಗೆ ಮುಳುಗಿ, ಹಗ್ಗ ಬಿಟ್ಟು ಕಾರು ಎಲ್ಲಿದೆ ಎಂದು ಪತ್ತೆ ಮಾಡುವ ಪ್ರಯತ್ನ ಮಾಡಿದರು. ಸುಮಾರು ಎರಡು ಗಂಟೆ ಕಾಲ ನೀರಿನಲ್ಲಿ ಪತ್ತೆ ಕಾರ್ಯಾಚರಣೆ ನಡೆಯಿತು.

ಸುಮಾರು 4.45 ಗಂಟೆಯಷ್ಟರಲ್ಲಿ ಬಿದ್ದ ಕಾರನ್ನು ನಾಲೆಯಲ್ಲಿ ಪತ್ತೆ ಹಚ್ಚಲು ಬೋಟ್ ಸಹಾಯದಿಂದ ಈಜುಗಾರರು ತಪಾಸಣೆ ನಡೆಸಿದ ನಂತರ 6.10ರ ಸಮಯಕ್ಕೆ ನೀರಿನಲ್ಲಿ ಮುಳುಗಿರುವ ಕಾರು ಪತ್ತೆಯಾಗಿದೆ. ಲೈಟ್ ಬೆಳಕಿನ ಸಹಾಯದೊಂದಿಗೆ ನೀರಿನೊಳಗಿದ್ದ ಕಾರಿಗೆ ಹಗ್ಗ ಕಟ್ಟಲಾಯಿತು. ನಂತರ ಸ್ಥಳಕ್ಕೆ ಕ್ರೇನ್ ಕರೆಸಿಕೊಂಡು ನೀರಿನಿಂದ 8.15 ಗಂಟೆಯಷ್ಟರಲ್ಲಿ ಕಾರು ಹಾಗೂ ಶವವನ್ನು ಹೊರತೆಗೆದ ಪ್ರಸಂಗ ನಡೆಯಿತು.

ನೀರಿನಲ್ಲಿ ಮುಳುಗಿದ್ದ ಕಾರನ್ನು ಹೊರತೆಗೆಯಲು ಸಾಕಷ್ಟು ಕಾರ್ಯಾಚರಣೆ ನಡೆಸಿ ಹರಸಾಹಸ ಪಟ್ಟರು. ಕಾರಿಗೆ ಬಿಗಿಯಾಗಿ ಹಗ್ಗ ಕಟ್ಟಿ ಕ್ರೇನ್ ಮೂಲಕ ಕಾರು ಹೊರ ಬಂದ ನಂತರ ಐದು ಮಂದಿಯಲ್ಲಿ ಒಂದೊಂದೇ ಶವವನ್ನು ಸ್ಥಳೀಯರು ಹೊರ ತೆಗೆದರು.

Share this article