ನಿವಾಸಿ ರುಮಿಯಾ ಆಖ್ತರ್ (6) ಕೊಲೆಯಾದ ದುರ್ದೈವಿ. ಎರಡು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕಿ ಮೃತದೇಹ ಶನಿವಾರ ಪತ್ತೆಯಾಗಿದೆ. ಬಾಲಕಿಯ ಕತ್ತು ಹಿಸುಕಿ ಕೊಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಕೃತ್ಯದ ಹಿಂದೆ ಪರಿಚಿತರ ಕೈವಾಡವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ
- ವಿಟ್ಟಸಂದ್ರದ ಮನೆಯ ಬಳಿ ಆಡುತ್ತಿದ್ದ ಬಾಲಕಿ
- 2 ದಿನಗಳ ಹಿಂದೆ ನಾಪತ್ತೆಯಾದ ಬಾಲಕಿ
- ಮನೆ ಬಳಿ ಖಾಲಿ ಪ್ರದೇಶದಲ್ಲಿ ಮೃತದೇಹ ಪತ್ತೆ
- ಕತ್ತು ಹಿಸುಕಿ ಕೊಂದಿರುವುದು ಶವ ಪರೀಕ್ಷೆಯಲ್ಲಿ ಬೆಳಕಿಗೆನಿವಾಸಿ ರುಮಿಯಾ ಆಖ್ತರ್ (6) ಕೊಲೆಯಾದ ದುರ್ದೈವಿ. ಎರಡು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕಿ ಮೃತದೇಹ ಶನಿವಾರ ಪತ್ತೆಯಾಗಿದೆ. ಬಾಲಕಿಯ ಕತ್ತು ಹಿಸುಕಿ ಕೊಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಕೃತ್ಯದ ಹಿಂದೆ ಪರಿಚಿತರ ಕೈವಾಡವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆ ಬಳಿ ಆಟವಾಡುತ್ತಿದ್ದ ಆರು ವರ್ಷದ ಬಾಲಕಿಯೊಬ್ಬಳ ಕತ್ತು ಹಿಸುಕಿ ಕೊಂದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಟ್ಟಸಂದ್ರ ನಿವಾಸಿ ರುಮಿಯಾ ಆಖ್ತರ್ (6) ಕೊಲೆಯಾದ ದುರ್ದೈವಿ. ಎರಡು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕಿ ಮೃತದೇಹ ಶನಿವಾರ ಪತ್ತೆಯಾಗಿದೆ. ಬಾಲಕಿಯ ಕತ್ತು ಹಿಸುಕಿ ಕೊಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಕೃತ್ಯದ ಹಿಂದೆ ಪರಿಚಿತರ ಕೈವಾಡವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಕೂಲಿ ಅರಸಿಕೊಂಡು ಮೃತ ಬಾಲಕಿ ಪೋಷಕರು ನಗರಕ್ಕೆ ಬಂದಿದ್ದು, ವಿಟ್ಟಸಂದ್ರದ ಬಳಿ ವಾಸವಿದ್ದರು. ಮನೆ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಚಿಂದಿ ಆಯುವ, ಬೇರ್ಪಡಿಸುವ ಕೆಲಸದಲ್ಲಿ ಮೃತ ಬಾಲಕಿ ತಂದೆ ರಖಿಯಾ ತೊಡಗಿದ್ದ. ಎಂದಿನಂತೆ ಗುರುವಾರ ಅವರು ಕೆಲಸಕ್ಕೆ ತೆರಳಿದ್ದಾಗ ಮನೆಯಲ್ಲಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಆಗ ಮನೆ ಸುತ್ತಮುತ್ತ ಹುಡುಕಾಟ ನಡೆಸಿದ ಪೋಷಕರು, ಕೊನೆಗೆ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು, ರುಮಿಯಾ ಆಖ್ತರ್‌ಗೆ ಶೋಧ ನಡೆಸಿದಾಗ ಮನೆ ಸಮೀಪದ ಖಾಲಿ ಪ್ರದೇಶದಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ.
ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.