ಸಾಲಬಾಧೆ ಕುತ್ತಿಗೆ ಕೊಯ್ದುಕೊಂಡು ಯುವಕ ಆತ್ಮಹತ್ಯೆ

KannadaprabhaNewsNetwork |  
Published : Jan 19, 2026, 12:30 AM IST
19ಕೆಎಂಎನ್ ಡಿ13 | Kannada Prabha

ಸಾರಾಂಶ

ಸಾಲಬಾಧೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಚಾಕುವಿನಿಂದ ತನ್ನ ಕುತ್ತಿಗೆ ಕೂಯ್ದುಕೊಂಡು ಆತ್ಮಹತ್ಯೆ ಶರಣಾದ ಹಿನ್ನೆಲೆಯಲ್ಲಿ ಮನಗ ಸಾವಿನ ಸುದ್ದಿ ತಿಳಿದು ತಾಯಿ ಶಿವಮ್ಮ ಅವರಿಗೂ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಿಸಿರುವ ವಿದ್ರಾವಕ ಘಟನೆ ಶನಿವಾರ ರಾತ್ರಿ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಾಲಬಾಧೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಚಾಕುವಿನಿಂದ ತನ್ನ ಕುತ್ತಿಗೆ ಕೂಯ್ದುಕೊಂಡು ಆತ್ಮಹತ್ಯೆ ಶರಣಾದ ಹಿನ್ನೆಲೆಯಲ್ಲಿ ಮನಗ ಸಾವಿನ ಸುದ್ದಿ ತಿಳಿದು ತಾಯಿ ಶಿವಮ್ಮ ಅವರಿಗೂ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಿಸಿರುವ ವಿದ್ರಾವಕ ಘಟನೆ ಶನಿವಾರ ರಾತ್ರಿ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸತ್ಯ, ಶಿವಮ್ಮರ ಪುತ್ರ ಸತೀಶ್ (ತೇರಿ) (39) ಆತ್ಮಹತ್ಯೆಗೆ ಶರಣಾಗಿರುವ ಯುವಕ.

ಮೃತ ಯುವಕ ಸತೀಶ್ ಕಳೆದ ಹಲವು ವರ್ಷಗಳಿಂದ ಸಾಲ ಮಾಡಿಕೊಂಡು ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ. ಸಾಲಗಾರರ ಕಾಟಚಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಎನ್ನಲಾಗಿದೆ. ಕಳೆದ ಶನಿವಾರ ರಾತ್ರಿ ತಮ್ಮ ಮನೆಯಲ್ಲಿಯೇ ಚಾಕುವಿನಿಂದ ಕುತ್ತಿಗೆ ಭಾಗವನ್ನು ಕೂಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ.

ಅವರ ತಾಯಿ ಶಿವಮ್ಮ ಮನೆಗೆ ಬಂದು ನೋಡಿದಾಗ ರಕ್ತದ ಮೊಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಸತೀಶ್ ನನ್ನು ತಕ್ಷಣ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ತಾಯಿ ಶಿವಮ್ಮ ಅವರಿಗೂ ಹೃಧಯಾಘಾತವಾಗಿದೆ. ತಕ್ಷಣ ಅವರನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿವಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತರ ತಾಯಿ ಶಿವಮ್ಮರ ಹೇಳಿಕೆ ಆಧರಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪಟ್ಟಣ ಸಾರ್ವಜನಿಕ ಆಸ್ಪತ್ರೆ ಶವಗಾರದಲ್ಲಿ ಪಂಚನಾಮೆ ನಡೆಸಿ ಭಾನುವಾರ ಬೆಳಗ್ಗೆ ವಾರಸುದ್ದಾರಿಗೆ ಒಪ್ಪಿಸಿದರು. ಮಧ್ಯಾಹ್ನ ಚಿಕ್ಕಮರಳಿ ಗ್ರಾಮದ ಹೊರವಲಯದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.ಗಾಂಜಾ ಮಾರಾಟ ಮೂವರು ಆರೋಪಿಗಳ ಬಂಧನ

ಪಾಂಡವಪುರ: ಗಾಂಜಾ ಮಾರಾಟ ಮಾಡುತ್ತಿದ್ದ ಗುಂಪಿನ ಮೇಲೆ‌‌ ಪಟ್ಟಣದ ಪೊಲೀಸರು ದಾಳಿ ನಡೆಸಿ 10 ಕೆಜಿ 150 ಗ್ರಾಂ ಗಾಂಜಾ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ವಶಪಡಿಸಿಕೊಂಡಿರುವ ನಡೆಸಿದೆ.

ತಾಲೂಕಿನ ಹಿರೇಮರಳಿ ಗ್ರಾಮ ಹೊರವಲಯದ ಬಿಟ್ಟನಾಯಕನಹಳ್ಳಿ ದಾಖಲೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶ್ರೀರಂಗಪಟ್ಟಣ ಪಟ್ಟಣದ ಡಿವೈಎಸ್ಪಿ ಶಾಂತಮಲ್ಲಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶರತ್ ನೇತೃತ್ವದಲ್ಲಿ ದಾಳಿ‌ ನಡೆಸಿದ‌ ಪೊಲೀಸರು ಹಿರೇಮರಳಿ ಗೌತಮ್, ರಕ್ಷಿತ್, ಮದೇನಹಳ್ಳಿ ಮನೋಜ್ ಅವರನ್ನು ವಶಪಡಿಸಿಕೊಂಡಿದ್ದಾರೆ. ಗಾಣದ ಹೊಸೂರು ಗ್ರಾಮದ ಮಧು ಪರಾರಿಯಾಗಿದ್ದಾರೆ.

ಬಂಧಿತ ಆರೋಪಿಗಳು ಒರಿಸ್ಸಾದಿಂದ ಗಾಂಜಾತಂದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ 10 ಕೆಜಿ 150 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಮೂವರು ಆರೋಪಿಗಳನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಲೆತಪ್ಪಿಸಿಕೊಂಡಿರುವ ಗಾಣದಹೊಸೂರು ಮಧು ಹುಡುಕಾಟಕ್ಕಾಗಿ ಬಲೆ ಬೀಸಿದ್ದಾರೆ. ದಾಳಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಉಮೇಶ್ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿಎಸ್ ಆಕ್ಟ್ ನಡಿ ದೂರು ದಾಖಲಾಗಿದೆ.ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಂಜೂರು ಮತ್ತೊಬ್ಬ ಆರೋಪಿ ಬಂಧನ

ನಾಗಮಂಗಲ: ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಂಜೂರು ಮಾಡಿದ್ದ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ವಿಜಯಕುಮಾರ್ ಬಂಧಿತ ಆರೋಪಿ. ಈತ ತಹಸೀಲ್ದಾರ್ ಕಚೇರಿ ಎಲ್‌ಎನ್‌ಡಿ ಶಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ಈ ಹಿಂದೆಯೂ ಈತನ ಮೇಲೆ ಕಡತ ತಿದ್ದಿದ ಆರೋಪದ ಮೇಲೆ ಪಾಂಡವಪುರ ಉಪವಿಭಾಗಾಧಿಕಾರಿ ದೂರು ನೀಡಿದ್ದರು.

ಕರ್ತವ್ಯಕ್ಕೆ ಗೈರಾಗಿದ್ದ ವಿಜಯಕುಮಾರ್ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸುವ ತಂಡದಲ್ಲಿ ಸಕ್ರಿಯವಾಗಿದ್ದ ಎಂದು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಕಂದಾಯ ಇಲಾಖೆ ಎಲ್ ಎನ್ ಡಿ ಶಾಖೆಯ ಶಿರಸ್ತೇದಾರ್ ರವಿಕುಮಾರ್ ಹಾಗೂ ರೆಕಾರ್ಡ್ ರೂಂ ಶಿರಸ್ತೇದಾರ್ ಉಮೇಶ್ ಅವರನ್ನು ಅಮಾನತ್ತು ಮಾಡಿದ್ದು, ಈವರೆಗೆ ಒಟ್ಟು 6 ನೌಕರರನ್ನು ಅಮಾನತ್ತಾದಂತಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಮಾನಸಿಕ ಅಸ್ವಸ್ಥ ಮಹಿಳೆ ರಕ್ಷಿಸಿ ಮಾನವೀಯತೆ ಮೆರೆದ ಖಾಕಿ!
25 ಲಕ್ಷ ಲಂಚ: ಅಬಕಾರಿ ಡಿಸಿ ಸೇರಿ ಮೂವರು ಸೆರೆ