ಗಾಣಾಳ ಫಾಲ್ಸ್‌ನಲ್ಲಿ ಈಜಲು ಹೋದ ಯುವಕ ಸಾವು

KannadaprabhaNewsNetwork |  
Published : Jun 22, 2026, 01:30 AM IST
ಗಾಣಾಳ ಫಾಲ್ಸ್‌ನಲ್ಲಿ ಈಜಲು ಹೋದ ಯುವಕ ಸಾವು | Kannada Prabha

ಸಾರಾಂಶ

ಈಜಲು ಹೋದ ಯುವಕ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಲಗೂರು ಸಮೀಪದ ಗಾಣಾಳ ಫಾಲ್ಸ್ ನಲ್ಲಿ ನಡೆದಿದೆ. ಮೂಲತಃ ಉತ್ತರ ಪ್ರದೇಶದ ಸೌರಬ್ ಜೈಶ್ವಾಲ್ (29) ಬೆಂಗಳೂರಿನ ಬೆಳ್ಳಂದೂರ್ ನಲ್ಲಿ ಫೋನ್ ಪೇ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು.

ಹಲಗೂರು:

ಈಜಲು ಹೋದ ಯುವಕ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಮೀಪದ ಗಾಣಾಳ ಫಾಲ್ಸ್ ನಲ್ಲಿ ನಡೆದಿದೆ.

ಮೂಲತಃ ಉತ್ತರ ಪ್ರದೇಶದ ಸೌರಬ್ ಜೈಶ್ವಾಲ್ (29) ಬೆಂಗಳೂರಿನ ಬೆಳ್ಳಂದೂರ್ ನಲ್ಲಿ ಫೋನ್ ಪೇ, ಗೂಗಲ್ ಪೇ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು. ಶನಿವಾರ ತನ್ನ ಮೂರು ಜನ ಸ್ನೇಹಿತರೊಡನೆ ಪ್ರವಾಸಿತಾಣ ಗಾಣಾಲ್ ಫಾಲ್ಸ್ ನೋಡಬೇಕು ಎಂದು ಬಂದು ಈಜಲು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ವಿಷಯ ತಿಳಿದ ಸ್ಥಳಕ್ಕೆ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಭೇಟಿ ನೀಡಿ ಪರಿಶೀಲಿಸಿ ನಂತರ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಡಿವೈಎಸ್ಪಿ ಯಶ್ವಂತ್ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಹಾಗೂ ಅಗ್ನಿಶಾಮಕ ದಳದ ಹೇಮಂತ್ ಕುಮಾರ್ ಮತ್ತು ಸಿಬ್ಬಂದಿ, ಅರಣ್ಯ ಇಲಾಖೆಯವರು ಆಗಮಿಸಿ ಪರಿಶೀಲನೆ ನಡೆಸಿದರು.

ಶನಿವಾರ ರಾತ್ರಿ 10 ಗಂಟೆ ನಂತರ ಶವವನ್ನು ನೀರಿನಿಂದ ಹೊರ ತೆಗೆಯಲಾಯಿತು. ಭಾನುವಾರ ಮರಣೊತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ವಾರಸುದಾರರಿಗೆ ನೀಡಲಾಯಿತು.ರುಕ್ಮಿಣಿ ನಾಪತ್ತೆ

ಮದ್ದೂರು: ತಾಲೂಕಿನ ಕೆಸ್ತೂರು ಗ್ರಾಮದ ಟಿ.ಲಿಂಗಾಚಾರ್ ಪತ್ನಿ ರುಕ್ಮಿಣಿ (46) ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕಳೆದ ಜೂನ್ 15ರಂದು ಬೆಳಗಿನ ಜಾವ ಎರಡು ಗಂಟೆ ಸಮಯದಲ್ಲಿ ನಮ್ಮ ತಾಯಿ ಮನೆಯಿಂದ ಹೊರ ಹೋದವರು ಕಣ್ಮರೆಯಾಗಿದ್ದಾರೆ ಎಂದು ಪುತ್ರ ಎಲ್.ಉಮಾಶಂಕರ್ ಕೆಸ್ತೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ರುಕ್ಮಿಣಿಯವರು 5 ಅಡಿ ಎತ್ತರ, ಕೆಂಪು ಮೈಬಣ್ಣ, ಕೋಲು ಮುಖ, ತೆಳುವಾದ ಶರೀರ ಹೊಂದಿದ್ದು, ಮನೆಯಿಂದ ಹೊರಡುವಾಗ ಹಸಿರು ಬಣ್ಣದ ನೈಟಿ ಧರಿಸಿದ್ದಾರೆ. ಈಕೆ ಬಗ್ಗೆ ಮಾಹಿತಿ ಉಳ್ಳವರು ಕೆಸ್ತೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಉದ್ಯಮಿಗೆ ₹2.6 ಕೋಟಿ ವಂಚಿಸಿದ 3 ಆರೋಪಿಗಳ ಬಂಧನ
ಶೀಘ್ರ ಮಾರ್ಕೆಟ್‌ ಮಳಿಗೆ ಬಾಡಿಗೆ ದರ ಪರಿಷ್ಕರಣೆ: ಮಳಿಗೆಯ ಪ್ರತಿ ಚದರದ ಅಡಿಗೆ 25.ರು ಮಾತ್ರ ನಿಗದಿ