ರಾಜಕಾರಣಿಗಳ ಜತೆ ಡೇಟಿಂಗ್‌ಗೆ ಒತ್ತಾಯ : ನಟಿ ನಮ್ರತಾಗೌಡ ಕಿಡಿ

Follow Us

ಸಾರಾಂಶ

ಬಿಗ್‌ಬಾಸ್‌ ಖ್ಯಾತಿಯ ನಟಿ ನಮ್ರತಾ ಗೌಡ ಅವರಿಗೆ ರಾಜಕಾರಣಿಗಳ ಜೊತೆಗೆ ಪೇಯ್ಡ್‌ ಡೇಟಿಂಗ್‌ ನಡೆಸುವಂತೆ ಅಪರಿಚಿತನೊಬ್ಬ ಸೋಷಿಯಲ್‌ ಮೀಡಿಯಾ ಮೂಲಕ ಒತ್ತಾಯಿಸಿದ್ದಾನೆ.

 ಬೆಂಗಳೂರು :  ಬಿಗ್‌ಬಾಸ್‌ ಖ್ಯಾತಿಯ ನಟಿ ನಮ್ರತಾ ಗೌಡ ಅವರಿಗೆ ರಾಜಕಾರಣಿಗಳ ಜೊತೆಗೆ ಪೇಯ್ಡ್‌ ಡೇಟಿಂಗ್‌ ನಡೆಸುವಂತೆ ಅಪರಿಚಿತನೊಬ್ಬ ಸೋಷಿಯಲ್‌ ಮೀಡಿಯಾ ಮೂಲಕ ಒತ್ತಾಯಿಸಿದ್ದಾನೆ.

ರೋಷನ್‌ ಎಂಬ ಸೋಷಲ್‌ಮೀಡಿಯಾ ಅಕೌಂಟ್‌ನಿಂದ ಅಪರಿಚಿತ ವ್ಯಕ್ತಿ ಮಾಡಿರುವ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ ಅನ್ನು ಹಂಚಿಕೊಂಡಿರುವ ನಟಿ ದೌರ್ಜನ್ಯದ ವಿರುದ್ಧ ದನಿ ಎತ್ತಿದ್ದಾರೆ. ‘ರೋಷನ್‌, ಬಹಳ ಮರ್ಯಾದೆಯಲ್ಲಿ ಹೇಳುತ್ತಿದ್ದೇನೆ, ಇಂಥದ್ದನ್ನು ನಿಲ್ಲಿಸು’ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿರುವ ನಮ್ರತಾ ಗೌಡ, ‘ನಟಿಯರಿಗೆ ಸಾಮಾನ್ಯವಾಗಿ ಈ ರೀತಿಯ ಮೆಸೇಜ್‌ಗಳು ಬರುತ್ತಿರುತ್ತವೆ. ಅವನ್ನು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ನಾನು ಸಾಕಷ್ಟು ಬಾರಿ ಈ ರೀತಿಯ ವರ್ತನೆ ವಿರುದ್ಧ ದನಿ ಎತ್ತಬೇಕು ಎಂದುಕೊಂಡಿದ್ದೆ. 

ಮನೆಮಂದಿ, ಆಪ್ತರ ಒತ್ತಾಯಕ್ಕೆ ಮಣಿದು ಸುಮ್ಮನಾಗಿದ್ದೆ. ಈ ಬಾರಿ ಮೆಸೇಜ್‌ ನೋಡಿದಾಗ ಇಂಥವರ ವಿರುದ್ಧ ನಾವು ಮಾತನಾಡದಿದ್ದರೆ ಇದು ಮುಂದುವರಿಯುತ್ತಲೇ ಹೋಗುತ್ತದೆ, ಅನೇಕರಿಗೆ ಇವರು ಸಮಸ್ಯೆ ಆಗುತ್ತಾರೆ. ಇಂಥವರ ಕೆಟ್ಟ ಕೆಲಸ ನೋಡಿಯೂ ಸುಮ್ಮನಿರಬಾರದು, ಧೈರ್ಯವಾಗಿ ಸಮಾಜದ ಎದುರು ಹೇಳಬೇಕು ಎಂದುಕೊಂಡೇ ಆತ ಕಳುಹಿಸಿದ ಮೆಸೇಜ್‌ಗಳ ಸ್ಕ್ರೀನ್‌ ಶಾಟ್‌ ಹಾಕಿದೆ. ಆತನ ಮನೆಮಂದಿ, ಆಪ್ತರೆದುರು ಇಂಥ ಹೀನ ಕೃತ್ಯ ಬಯಲಾದರೆ ಮುಂದೆ ಇಂಥಾ ಕೆಲಸ ಮಾಡಲಿಕ್ಕಿಲ್ಲ ಎಂಬ ಭರವಸೆ ನನ್ನದು ’ ಎಂದಿದ್ದಾರೆ.