ಎರಡು ಬೈಕ್‌ಗಳ ನಡುವೆ ಡಿಕ್ಕಿ: ಜೆಡಿಎಸ್ ಮುಖಂಡ ಸಾವು

KannadaprabhaNewsNetwork |  
Published : May 15, 2025, 01:55 AM ISTUpdated : May 15, 2025, 04:42 AM IST
14ಕೆಎಂಎನ್ ಡಿ30 | Kannada Prabha

ಸಾರಾಂಶ

ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಜೆಡಿಎಸ್ ಮುಖಂಡ ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು- ಕತ್ತರಘಟ್ಟ ಗೇಟ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. 

  ಕೆ.ಆರ್.ಪೇಟೆ : ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಜೆಡಿಎಸ್ ಮುಖಂಡ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸಹೊಳಲು- ಕತ್ತರಘಟ್ಟ ಗೇಟ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ತಾಲೂಕಿನ ಹೊಸಹೊಳಲು ಗ್ರಾಮದ ಜೆಡಿಎಸ್ ಮುಖಂಡ ಬಾಲಕೃಷ್ಣ (55) ಮೃತಪಟ್ಟವರು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಬೈಕ್ ಸವಾರನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಬೆಂಗಳೂರು-ಜಲಸೂರು ಮಾರ್ಗದ ರಾಜ್ಯ ಹೆದ್ದಾರಿ ಬಳಿ ಘಟನೆ ನಡೆದಿದ್ದು, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಬಾಲಕೃಷ್ಣರಿಗೆ ಪತ್ನಿ, ಇಬ್ಬರು ಮಕ್ಕಳು, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಪತ್ನಿ ಕಿರುಕುಳ ಪತಿ ನಾಪತ್ತೆ, ದೂರು ದಾಖಲು

ಮದ್ದೂರು: ಪತ್ನಿ ಕಿರುಕುಳದಿಂದ ಬೇಸತ್ತ ತಮ್ಮ ಪುತ್ರ ನಾಪತ್ತೆಯಾಗಿರುವುದಾಗಿ ತಾಯಿ ಪಾರ್ವತಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಪಟ್ಟಣದ ವೈದ್ಯನಾಥಪುರ ರಸ್ತೆ ನಿವಾಸಿ ಮನು (38) ಅವರಿಗೆ ಸೊಸೆ ಜಯಶ್ರೀ ದಿನನಿತ್ಯ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಮನು ಕಳೆದ ಮೇ 5ರಿಂದ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮನು 5.9 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೊಗುವಾಗ ಈತ ನೀಲಿ ಬಣ್ಣದ ಟಿ-ಶರ್ಟು ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಇತರ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ. 

ವ್ಯಕ್ತಿ ನಾಪತ್ತೆ ದೂರು ದಾಖಲು

ಮದ್ದೂರು: ತಾಲೂಕಿನ ಭೀಮನಕೆರೆ ಗ್ರಾಮದ ಕೆಂಪಣ್ಣ ನಾಪತ್ತೆಯಾಗಿರುವುದಾಗಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಕಳೆದ ಫೆಬ್ರವರಿ 2ರಂದು ಹೋಗಿದ್ದ ಕೆಂಪಣ್ಣ ಅಂದಿನಿಂದ ನಾಪತ್ತೆಯಾಗಿದ್ದಾರೆ ದೂರು ನೀಡಲಾಗಿದೆ. 47 ವರ್ಷದ ಕೆಂಪಣ್ಣ 5.4 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಮನೆಯಿಂದ ಹೊರಡುವಾಗ ನೀಲಿ ಮಿಶ್ರಿತ ಬಣ್ಣದ ಲುಂಗಿ ಮತ್ತು ಶರ್ಟು ಧರಿಸಿದ್ದಾನೆ. ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರು ಸಂಪರ್ಕಿಸುವಂತೆ ಕೋರಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಒಂದು ವರ್ಷದಲ್ಲಿ ಲಕ್ಷಗಟ್ಟಲೇ ಮೆಟ್ರೋ ನಿಯಮ ಉಲ್ಲಂಘನೆ ಕೇಸ್‌ ದಾಖಲು
ಮೈಸೂರಲ್ಲಿ ಮತ್ತೊಂದು ಹೈಟೆಕ್‌ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ