ಸ್ವಂತ ಅಣ್ಣನ ಮಗನನ್ನು ಹತ್ಯೆಗೈದ ಚಿಕ್ಕಪ್ಪ

KannadaprabhaNewsNetwork |  
Published : Nov 05, 2023, 01:15 AM IST
4ಕೆಎಂಎನ್ ಡಿ25,26ಚಿಕ್ಕಪ್ಪನಿಂದಲೇ ಹತ್ಯೆಯಾದ ಜಯಪಾಲ್ನಾಗಮಂಗಲ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಭೇಟಿ ಕೊಟ್ಟ ಜಿಲ್ಲಾ ಎಸ್ಪಿ ಎನ್.ಯತೀಶ್ ಮೃತ ಜಯಪಾಲ್ ತಂದೆಯಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. | Kannada Prabha

ಸಾರಾಂಶ

ಸ್ವಂತ ಅಣ್ಣನ ಮಗನನ್ನು ಹತ್ಯೆಗೈದ ಚಿಕ್ಕಪ್ಪಮೀನು ವಿವಾದ ಹಿನ್ನೆಲೆ: ಪಿಸ್ತೂಲ್‌ನಿಂದ ಶೂಟ್ ಮಾಡಿ ಕೊಲೆ

ಮೀನು ವಿವಾದ ಹಿನ್ನೆಲೆ: ಪಿಸ್ತೂಲ್‌ನಿಂದ ಶೂಟ್ ಮಾಡಿ ಕೊಲೆಕನ್ನಡಪ್ರಭ ವಾರ್ತೆ ನಾಗಮಂಗಲ

ಜಮೀನು ವಿವಾದ ಸಂಬಂಧ ಸ್ವಂತ ಅಣ್ಣನ ಮಗನನ್ನೇ ಚಿಕ್ಕಪ್ಪ ಪಿಸ್ತೂಲ್‌ನಿಂದ ಶೂಟ್ ಮಾಡಿ ಹತ್ಯೆಗೈದಿರುವ ಘಟನೆ ತಾಲೂಕಿನ ಗಡಿ ಗ್ರಾಮ ಬಿಂಡಿಗನವಿಲೆ ಹೋಬಳಿಯ ಹನುಮನಹಳ್ಳಿಯಲ್ಲಿ ಸಂಭವಿಸಿದೆ.

ಗ್ರಾಮದ ವಾಸು ಪುತ್ರ ಜಯಪಾಲ್ (19) ಸ್ವಂತ ಚಿಕ್ಕಪ್ಪನಿಂದಲೇ ಹತ್ಯೆಗೊಳಗಾದ ನತದೃಷ್ಟ ಯುವಕ. ರೌಡಿಶೀಟರ್ ಹಿನ್ನೆಲೆ ಹೊಂದಿರುವ ಕುಮಾರ್‌ಗೌಡ ಎಂಬಾತನೇ ಪಿಸ್ತೂಲ್‌ನಿಂದ ಶೂಟ್ ಮಾಡಿ ಅಣ್ಣನ ಮಗನನ್ನು ಹತ್ಯೆಗೈದು ಪರಾರಿಯಾಗಿರುವ ಆರೋಪಿ.

ಕುಮಾರ್‌ಗೌಡ ಮತ್ತು ಹನುಮನಹಳ್ಳಿ ಗ್ರಾಮದ ಬೇರೊಬ್ಬ ರೈತನ ಜೊತೆ ಜಮೀನು ವಿವಾದ ಉಂಟಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವಿವಾದಕ್ಕೆ ನನ್ನ ಅಣ್ಣ ವಾಸು ಮತ್ತವರ ಮಕ್ಕಳ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದ ಕುಮಾರ್‌ಗೌಡ ಗ್ರಾಮದ ಹೊರವಲಯದ ತೋಟದ ಮನೆಗೆ ತನ್ನ ಅಣ್ಣ ವಾಸು ಮತ್ತು ಅವರ ಮಕ್ಕಳನ್ನು ಶನಿವಾರ ಮಧ್ಯಾಹ್ನ1 ಗಂಟೆ ಸಮಯದಲ್ಲಿ ಕರೆಸಿಕೊಂಡಿದ್ದಾನೆ.

ಈ ವೇಳೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಕುಪಿತಗೊಂಡ ಕುಮಾರ್‌ಗೌಡ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಶೂಟ್ ಮಾಡಿದ ರಭಸಕ್ಕೆ ಜಯಪಾಲ್ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಘಟನೆ ಸಂಭವಿಸುತ್ತಿದ್ದಂತೆ ಕುಮಾರ್‌ಗೌಡ ಸ್ಥಳದಿಂದ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಿಂಡಿಗನವಿಲೆ ಠಾಣೆ ಪೊಲೀಸರು ಜಯಪಾಲ್‌ನ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರಾದರೂ ನಂತರ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಸಿಪಿಐ ನಿರಂಜನ್ ಆಸ್ಪತ್ರೆ ಮತ್ತು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಇತ್ತೀಚೆಗಷ್ಟೇ ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಜಯಪಾಲ್‌ನ ತಾಯಿ ತನ್ನ ಮಗನ ಮೃತದೇಹ ನೋಡಿ ಆಸ್ಪತ್ರೆ ಆವರಣದಲ್ಲಿ ಕುಸಿದುಬಿದ್ದರು. ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟುವಂತಿತ್ತು.

ಈ ಸಂಬಂಧ ತಾಲೂಕಿನ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕಾನೂನು ತನಿಖೆ ಕೈಗೆತ್ತಿಕೊಂಡಿದ್ದಾರೆ.4ಕೆಎಂಎನ್ ಡಿ25,26

ಚಿಕ್ಕಪ್ಪನಿಂದಲೇ ಹತ್ಯೆಯಾದ ಜಯಪಾಲ್

ನಾಗಮಂಗಲ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಭೇಟಿ ಕೊಟ್ಟ ಜಿಲ್ಲಾ ಎಸ್ಪಿ ಎನ್.ಯತೀಶ್ ಮೃತ ಜಯಪಾಲ್ ತಂದೆಯಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡರು.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!