ಹೈದರಾಬಾದ್‌ಗೆ ಹೋಗಬೇಕಿದ್ದ ಬನ್ನೇರುಘಟ್ಟ ಕಾಡೆಮ್ಮೆ ಸಾವು

Published : Nov 01, 2025, 07:22 AM IST
Bison

ಸಾರಾಂಶ

ಬನ್ನೇರುಘಟ್ಟದ ಸಫಾರಿಯಿಂದ ಹೈದರಾಬಾದ್‌ಗೆ ಸ್ಥಳಾಂತರಿಸುವ ವೇಳೆಯಲ್ಲಿ ಹೆಣ್ಣು ಕಾಡೆಮ್ಮೆವೊಂದು ಮೃತಪಟ್ಟಿದ್ದು, ಈ ಸಾವಿಗೆ ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

 ಬೆಂಗಳೂರು ದಕ್ಷಿಣ :  ಬನ್ನೇರುಘಟ್ಟದ ಸಫಾರಿಯಿಂದ ಹೈದರಾಬಾದ್‌ಗೆ ಸ್ಥಳಾಂತರಿಸುವ ವೇಳೆಯಲ್ಲಿ ಹೆಣ್ಣು ಕಾಡೆಮ್ಮೆವೊಂದು ಮೃತಪಟ್ಟಿದ್ದು, ಈ ಸಾವಿಗೆ ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ಹೈದರಾಬಾದ್‌ನ ನೆಹರು ಜೂಲಾಜಿಕಲ್ ಪಾರ್ಕ್‌ ನಡುವೆ ಅನುಮೋದಿತ ಪ್ರಾಣಿ ವಿನಿಮಯ ಒಪ್ಪಂದವಾಗಿತ್ತು. ಈ ಕಾರ್ಯಕ್ರಮದ ಭಾಗವಾಗಿ ಕಾಡೆಮ್ಮೆಯನ್ನು ಸಫಾರಿಯಿಂದ ಸೆರೆಹಿಡಿದು ಕೂಗಳತೆಯ ದೂರದಲ್ಲಿನ ಪ್ರದೇಶಕ್ಕೆ ಕ್ವಾರೆಂಟೈನ್ ಪ್ರಕ್ರಿಯೆಗೆ ರವಾನಿಸಲಾಗಿತ್ತು. ಈ ವೇಳೆ ಕಾಡೆಮ್ಮೆಗೆ ಅರಿವಳಿಕೆ ಮದ್ದು ನೀಡಿದ್ದು, ಅದರ ಅಡ್ಡ ಪರಿಣಾಮದಿಂದ ಸಾವಿಗೀಡಾಗಿದೆ. ಸ್ಥಳಾಂತರ ಪ್ರಕ್ರಿಯೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತು ಪಶುವೈದ್ಯಕೀಯ ಹಾಗೂ ಅರಣ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಿಲ್ಲ ಎಂದು ಪ್ರಾಣಿ ಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯ

ಭಾರಿ ಗಾತ್ರದ ಕಾಡು ಪ್ರಾಣಿಗಳನ್ನು ಸ್ಥಳಾಂತರಿಸುವ ಸಮಯದಲ್ಲಿ ಪ್ರಾಣಿಗಳ ವಯಸ್ಸು, ಗಾತ್ರ, ಎತ್ತರ ಮತ್ತು ತೂಕದ ಆಧಾರದಲ್ಲಿ ಅರಿವಳಿಕೆ ಮದ್ದು ನೀಡಿ ಆ ಪ್ರಾಣಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಥಳಾಂತರ ಮಾಡುವುದು ಸಾಧರಣ ಪ್ರಕ್ರಿಯೆಯಾಗಿದೆ. ಈ ವೇಳೆ ವೈದ್ಯರ ನಿರ್ಲಕ್ಷ್ಯ ತೋರಿದ್ದರಿಂದ ಮೂಕಪ್ರಾಣಿ ಕೊನೆಯುಸಿರೆಳೆದಿದೆ ಎಂಬ ಆರೋಪ ಕೇಳಿ ಬಂದಿದೆ. ಸಾವಿಗೆ ನಿಖರ ಕಾರಣ ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆ ‌ ನಡೆಸಿದ ಬಳಿಕ ಕಾಡೆಮ್ಮೆಯನ್ನು ಮಣ್ಣು ಮಾಡಲಾಗಿದೆ.

ವರದಿಯಿಂದ ನಿಖರ ಕಾರಣ:

ಈ ಕುರಿತು ಬನ್ನೇರುಘಟ್ಟ ಜೈವಿಕ ಉದ್ಯಾನ ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ್ ಸೂರ್ಯ ಸೇನ್ ಪ್ರತಿಕ್ರಿಯಿಸಿದ್ದು, ‘ಸಮರ್ಪಕ ಅರಿವಳಿಕೆ ನೀಡಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಕಾಡೆಮ್ಮೆಯನ್ನು ಬೆಲ್ಟ್‌ನಿಂದ ಬಿಗಿದು ಮೇಲೆತ್ತುವ ಸಮಯದಲ್ಲಿ ಅದು ಎಚ್ಚರಗೊಂಡು ಗಲಿಬಿಲಿ ಆಗಿ ತಪ್ಪಿಸಿಕೊಳ್ಳುವ ಪ್ರಯತ್ನಿಸಿದ್ದರಿಂದ ಗಾಯಗೊಂಡು ಸಾವನ್ನಪ್ಪಿರುವ ಸಾಧ್ಯತೆಗಳಿವೆ. ಮರಣೋತ್ತರ ಪರೀಕ್ಷೆ ವರದಿಯಿಂದ ನಿಖರ ಕಾರಣ ತಿಳಿಯಲಿದೆ’ ಎಂದು ಹೇಳಿದ್ದಾರೆ.

PREV
Read more Articles on

Recommended Stories

ಮಹಿಳೆಗೆ ಲೈಂ*ಕ ಕಿರುಕುಳ ನೀಡಿದ ನಗರ ವಿವಿ ಪ್ರೊ.ಮೈಲಾರಪ್ಪ ಬಂಧನ
ಇಪಿಎಫ್ಒ ನೌಕರರ ₹ 70 ಕೋಟಿ ಅಕ್ರಮ ವರ್ಗಾವಣೆ : ಕೇಸ್‌ ದಾಖಲು